FACT CHECK | ಕ್ರಿಕೆಟರ್ ರಿಂಕು ಸಿಂಗ್ ಅವರ ಫೊಟೊಗಳನ್ನು ಎಡಿಟ್ ಮಾಡಿ ಹಂಚಿಕೆ
ಕ್ರಿಕೆಟಿಗ ರಿಂಕು ಸಿಂಗ್ ಕುರಿತು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಅತಿ ಕಿರಿಯ ವಯಸ್ಸಿನ ಸಂಸದೆ ಜತೆ ನಿಶ್ಚಿತಾರ್ಥವಾಗಿದೆ ಎಂಬ ಫೋಟೋಗಳು ವೈರಲ್ ಆಗಿದ್ದವು. ಆ ಬೆನ್ನಲ್ಲೆ ರಿಂಕು ಸಿಂಗ್ ಅವರು ಸುಹಾನಾ ಖಾನ್ ಜತೆ ಪ್ರವಾಸದಲ್ಲಿರುವ, ಹಾಸಿಗೆ ಮೇಲೆ ಮಲಗಿರುವ ಫೋಟೋಗಳು ವೈರಲ್ ಆಗಿವೆ.
“ರಿಂಕು ಸಿಂಗ್ ಹಬ್” ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ರಿಂಕು ಮತ್ತು ಸುಹಾನಾ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಳ್ಳಲಾಗಿದೆ. “ಎಲೈಸ್ ಪೆರ್ರಿ” ಎಂಬ ಟ್ವಿಟರ್ ಖಾತೆಯು ಕೂಡ ಇದೇ ರೀತಿಯ ಫೋಟೋಗಳನ್ನು ಹಂಚಿಕೊಂಡು, “ರಿಂಕು ಸಿಂಗ್ ಮತ್ತು ಸುಹಾನಾ ಖಾನ್ ನಡುವೆ ಏನು ನಡೆಯುತ್ತಿದೆ?” ಎಂದು ಪ್ರಶ್ನಿಸಿದೆ. ಹಾಗಿದ್ದರೆ ಈ ಫೋಟೊಗಳು ನೈಜವಾಗಿವೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ರಿಂಕು ಮತ್ತು ಸುಹಾನಾ ಹೋಟೆಲ್‌ನಲ್ಲಿ ಮತ್ತು ಪರ್ವತ ಪ್ರದೇಶಗಳಲ್ಲಿ ಒಟ್ಟಿಗೆ ಇರುವುದನ್ನು ಕಾಣಬಹುದು. ರಿಂಕು ಮತ್ತು ಸುಹಾನಾ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈ ಫೋಟೋಗಳು ಕಂಡುಬಂದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಿಂಕು ಸಿಂಗ್ ಹಾಗೂ ಸುಹಾನಾ ಖಾನ್ ಜತೆಗೆ ಇರುವ ಫೋಟೋ ಕುರಿತು ಸತ್ಯಾತ್ಯತೆಯನ್ನು ಪರಿಶೀಲಿಸಿದಾಗ, ಈ ಫೋಟೋಗಳು ಎಐ ನಿಂದ ಸೃಷ್ಟಿಸಲ್ಪಟ್ಟ ನಕಲಿ ಫೋಟೊಗಳೆಂದು ತಿಳಿದುಬಂದಿದೆ.
![]()
ಈ ಫೋಟೋಗಳನ್ನು ಎಐ (AI) ಪರಿಕರಗಳನ್ನು ಬಳಸಿ ಪರಿಶೀಲಿಸಿದಾಗ. decopy.ai ವೆಬ್‌ಸೈಟ್‌ನಲ್ಲಿ ಫೋಟೋಗಳನ್ನು ಪರಿಶೀಲಿಸಿದಾಗ, ಎರಡೂ ಫೋಟೋಗಳು 98% ನಕಲಿ ಎಂದು ತಿಳಿದುಬಂದಿದೆ. ಹೋಟೆಲ್‌ನ ಫೋಟೋ ಮತ್ತು ಪರ್ವತ ಪ್ರದೇಶದ ಫೋಟೋ ಎರಡೂ ಕೂಡ ಎಐ ನಿಂದ ಸೃಷ್ಟಿಸಲ್ಪಟ್ಟವು ಎಂದು ಫಲಿತಾಂಶಗಳು ತೋರಿಸಿವೆ.
![]()
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಿಂಕು ಸಿಂಗ್ ಹಾಗೂ ಸುಹಾನಾ ಖಾನ್ ಫೋಟೋಗಳು ನಕಲಿ. ಎಐ ತಂತ್ರಾಂಶ ಬಳಸಿ ರಚಿಸಿರುವ ಫೋಟೋಗಳು ಎಂಬುದು ಸ್ಪಷ್ಟವಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಅಯೋಧ್ಯೆಯ ಹಳೆಯ ಫೋಟೋವನ್ನು ಮಹಾ ಕುಂಭಮೇಳದ್ದು ಎಂದು ತಪ್ಪಾಗಿ ಹಂಚಿಕೆ

