ಹೆಚ್‌1ಬಿ ವೀಸಾ ನಿಷೇಧದಲ್ಲಿ ಸಡಿಲಿಕೆ; ಅಮೆರಿಕಾದಲ್ಲಿ ಭಾರತೀಯರಿಗಿದೆಯಾ ಉದ್ಯೋಗಾವಕಾಶ!

ಭಾರತೀಯರೂ ಸೇರಿದಂತೆ ವಿದೇಶಿ ಉದ್ಯೋಗಿಗಳಿಗೆ ಹೆಚ್‌1ಬಿ ವೀಸಾವನ್ನು ಅಮೆರಿಕಾ ರದ್ದು ಮಾಡಿತ್ತು. ಆದರೆ, ಈಗ ವೀಸಾ ನಿಷೇಧದ ನಿಯಮವನ್ನು ಸಡಿಲಗೊಳಿಸಿರುವ ಯುಎಸ್‌ಎ, ಎಚ್‌1ಬಿ ವೀಸಾ ನಿಷೇಧಕ್ಕೂ ಮೊದಲು ವಿದೇಶಿ ಉದ್ಯೋಗಿಗಳು ಯಾವ ಉದ್ಯೋಗದಲ್ಲಿದ್ದರೋ ಅದೇ ಉದ್ಯೋಗಕ್ಕೆ ಹಿಂದಿರುಗಲು ಅವಕಾಶ ಒದಗಿಸಲಾಗಿದೆ.

ಕೊರೊನಾ ಸಂಕಷ್ಟದಿಂದ ತತ್ತರಿಸಿದ್ದ ಅಮೆರಿಕಾದಲ್ಲಿ ಅಮೆರಿಕನ್ನರಿಗೆ ಉದ್ಯೋಗವನ್ನು ಸೃಷ್ಟಿಸಿ ಆರ್ಥಿಕತೆ ಉದ್ಯೋಗ ನೀಡವ ಉದ್ದೇಶದಿಂದ ವಿದೇಶಿ ಉದ್ಯೋಗಿಗಳಿಗೆ ನೀಡಲಾಗುತ್ತಿದ್ದ ಎಚ್‌1ಬಿ ವೀಸಾ ಮೇಲೆ ಅಮೆರಿಕಾ ಅಧ್ಯಕ್ಷ ಟ್ರಂಪ್ ನಿಷೇಧ ಹೇರಿ ಹೊಸ ನಿಯಮ ಜಾರಿಗೊಳಿಸಿದ್ದರು.

ಮತ್ತೆ ನಿಯಮವನ್ನು ಸಡಿಲಗೊಳಿಸಿರುವ ಅಮೆರಿಕಾ, ವೀಸಾ ನಿಷೇಧಕ್ಕೂ ಮುನ್ನ ಭಾರತೀಯರೂ ಸೇರಿದಂತೆ  ಉದ್ಯೋಗಿಗಳು ಯಾವ ಉದ್ಯೋಗದಲ್ಲಿದ್ದರೋ ಆ ಉದ್ಯೋಗಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರು ಬೇರೆ ಉದ್ಯೋಗಗಳಿಗೆ ಸೇರುವಂತಿಲ್ಲ ಎಂದು ಶರತ್ತು ವಿಧಿಸಲಾಗಿದೆ.

ಎಚ್-​1ಬಿ ವೀಸಾ ಹೊಂದಿದ್ದ ಉದ್ಯೋಗಿಗಳು ತಮ್ಮ ಹಳೆಯ ಕಂಪನಿಯಲ್ಲಿ ತಮ್ಮ ಕೆಲಸವನ್ನು ಮುಂದುವರೆಸುವುದಾದರೆ, ಅವರು ಅಮೆರಿಕಕ್ಕೆ ವಾಪಾಸ್ ಬರಬಹುದು. ತಮ್ಮ ಜೊತೆಗೆ ಹೆಂಡತಿ,  ಮಕ್ಕಳನ್ನು ಕೂಡ ಕರೆದುಕೊಂಡು ಬರಬಹುದು. ಅದೇ ಹಳೆಯ ವೀಸಾ ವರ್ಗೀಕರಣದೊಂದಿಗೆ ಎಚ್-​1ಬಿ ವೀಸಾ ಹೊಂದಿದ್ದ ಉದ್ಯೋಗಿಗಳು ಅಮೆರಿಕಾಗೆ ಪ್ರಯಾಣಿಸಬಹುದು ಎಂದು ಅಮೆರಿಕ ಸರ್ಕಾರ ತಿಳಿಸಿದೆ.

ಜೂನ್ 22ರಂದು ಅಮೆರಿಕ ಎಚ್-​1ಬಿ ಉದ್ಯೋಗದ ವೀಸಾವನ್ನು ಅಮೆರಿಕಾ ರದ್ದುಗೊಳಿಸಿತ್ತು. 2020ರ ಅಂತ್ಯದವರೆಗೆ ಎಚ್-​1ಬಿ, ಎಚ್-2ಬಿ, ಎಲ್​ ಮತ್ತು ಜೆ ಉದ್ಯೋಗದ ವೀಸಾಗಳನ್ನು ರದ್ದುಗೊಳಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಆದೇಶ ಹೊರಡಿಸಿದ್ದರು. ಇದರಿಂದಾಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ವಿದೇಶೀಯರಿಗೆ ಅದರಲ್ಲೂ ಭಾರತೀಯರಿಗೆ ಸಂಕಷ್ಟ ಎದುರಾಗಿತ್ತು.


ಇದನ್ನೂ ಓದಿ: ಭಾರತೀಯ ಉದ್ಯೋಗಿಗಳಿಗೆ ನೋ ಎಂಟ್ರಿ; ಎಚ್‌1ಬಿ ವೀಸಾ ರದ್ದು ಆದೇಶಕ್ಕೆ ಸಹಿ ಹಾಕಿದ ಟ್ರಂಪ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights