FACT CHECK | ನಟ ಸೈಫ್ ಅಲಿ ಖಾನ್ ಆಸ್ಪತ್ರೆ ಸೇರಲು ನೆರವಿಗೆ ಬಂದ ಆಟೋ ಚಾಲಕನಿಗೆ 5 ಲಕ್ಷ ರೂ ಬಹುಮಾನ ನೀಡಲಾಗಿದೆಯೇ?

ನಟ ಸೈಫ್ ಅಲಿ ಖಾನ್ ತನ್ನ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಆಸ್ಪತ್ರೆ ಸೇರಲು ನೆರವಿಗೆ ಬಂದ ಆಟೋ ಚಾಲಕನಿಗೆ 5 ಲಕ್ಷ ರೂ. ಬಹುಮಾನ ನೀಡಿದ್ದಾರೆ ಎಂಬ ಫೋಟೊ ವೈರಲ್ ಆಗಿದೆ.

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಇತ್ತೀಚೆಗೆ ದಾಳಿ ನಡೆದಿತ್ತು. ಅವರನ್ನು ಆಸ್ಪತ್ರೆಗೆ ಒಬ್ಬ ಆಟೋ ಚಾಲಕ ಕರೆದೊಯ್ದಿದ್ದರು. ಈ ಚಾಲಕನಿಗೆ ಸೈಫ್ 5 ಲಕ್ಷ ರೂಪಾಯಿ ಬಹುಮಾನ ನೀಡಿದ್ದಾರೆ ಎಂದು ಹಣ ತುಂಬಿದ ಚೀಲವನ್ನು ನಟ ಆಟೋ ಚಾಲಕನಿಗೆ ನೀಡಿದ್ದಾರೆ ಎಂಬ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು.

ರಿಯಾಜ್ ಉದ್ದೀನ್ ಮೊಹಮ್ಮದ್ ಎಂಬ ಫೇಸ್‌ಬುಕ್ ಬಳಕೆದಾರರು ಈ ಫೋಟೋವನ್ನು ಹಂಚಿಕೊಂಡಿದ್ದರು. “ಸೈಫ್ ಅಲಿ ಖಾನ್ ಆಟೋ ಚಾಲಕನಿಗೆ 5 ಲಕ್ಷ ಬಹುಮಾನ ನೀಡಿದ್ದಾರೆ” ಎಂದು ಅವರು ಬರೆದಿದ್ದರು. Bollywood News Daily ಎಂಬ ಫೇಸ್‌ಬುಕ್ ಪೇಜ್ ಕೂಡ ಇದೇ ಫೋಟೋವನ್ನು ಇದೇ ರೀತಿಯ ಮಾಹಿತಿಯೊಂದಿಗೆ ಹಂಚಿಕೊಂಡಿದೆ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್‌ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಎನ್‌ಡಿಟಿವಿ ಜನವರಿ 22 ರ ವರದಿಯಲ್ಲಿ ಪ್ರಕಟವಾದ ಮೂಲ ಫೋಟೋಗಳು ಲಭ್ಯವಾಗಿವೆ. ಆ ಮೂಲ ಫೋಟೋಗಳಲ್ಲಿ ಹಣದ ಚೀಲವಿಲ್ಲ. ವೈರಲ್ ಫೋಟೋದಲ್ಲಿ ಹಣದ ಚೀಲವನ್ನು ಸಾಪ್ಟ್‌ವೇರ್‌ ಬಳಸಿ ಆ ನಂತರ ಸೇರಿಸಲಾಗಿದೆ ಎಂದು ಇದರಿಂದ ಸ್ಪಷ್ಟವಾಗಿದೆ.

ಸೈಫ್ ಅಲಿ ಖಾನ್ ಆಟೋ ಚಾಲಕನಿಗೆ ಎಷ್ಟು ಹಣ ನೀಡಿದ್ದಾರೆ ಎಂಬ ಬಗ್ಗೆ ‘ಜನಸತ್ತ’ ಪತ್ರಿಕೆಯ ವರದಿಯೊಂದು ಮಾಹಿತಿ ನೀಡಿದೆ. ಆಟೋ ಚಾಲಕ ರಾಣಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, ಅವರು ನಿಖರವಾದ ಮೊತ್ತವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. “ಜನರು ನನಗೆ 50,000 ಅಥವಾ 1,00,000 ರೂಪಾಯಿ ನೀಡಿದ್ದಾರೆ ಎಂದು ಹೇಳಬಹುದು, ಆದರೆ ನಾನು ಆ ಮೊತ್ತವನ್ನು ಬಹಿರಂಗಪಡಿಸಲು ಬಯಸುವುದಿಲ್ಲ. ಈ ಬಗ್ಗೆ ಮಾತನಾಡಬೇಡಿ ಎಂದು ಅವರು (ಸೈಫ್) ನನ್ನನ್ನು ಕೇಳಿಕೊಂಡಿದ್ದಾರೆ.

ಡಡಡಟಾ

ನಾನು ಅವರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತೇನೆ. ಏನೇ ಇರಲಿ, ಅದು ಅವರಿಗೂ ನನಗೂ ನಡುವಿನ ವಿಷಯ” ಎಂದು ರಾಣಾ ಹೇಳಿದ್ದಾರೆ ಎಂದು ಪತ್ರಿಕಾ ವರದಿಯಲ್ಲಿದೆ.

wqq

ಒಟ್ಟಾರೆಯಾಗಿ ಹೇಳುವುದಾದರೆ, ಸೈಫ್ ಅಲಿ ಖಾನ್ ಆಟೋ ಚಾಲಕನಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಿದ ಫೋಟೋವು ಸುಳ್ಳು. ಫೋಟೋವನ್ನು ಎಡಿಟ್ ಮಾಡಲಾಗಿದೆ. ಆಟೋ ಚಾಲಕ ರಾಣಾ ಅವರಿಗೆ ಸೈಫ್ ಎಷ್ಟು ಹಣ ನೀಡಿದ್ದಾರೆ ಎಂಬುದು ಖಚಿತವಾಗಿ ತಿಳಿಸಿಲ್ಲ. ಆದರೆ, 5 ಲಕ್ಷ ರೂಪಾಯಿ ಎಂಬುದು ಸುಳ್ಳು ಎಂಬುದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕ್ರಿಕೆಟರ್ ರಿಂಕು ಸಿಂಗ್‌ ಅವರ ಫೊಟೊಗಳನ್ನು ಎಡಿಟ್ ಮಾಡಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights