‘ನಾವು ಅವರೆಲ್ಲರನ್ನೂ ಕೊಲ್ಲುತ್ತೇವೆ’: ಮಾರಣಾಂತಿಕ ಬೆದರಿಕೆ ಹಾಕಿದ್ದ ಮಿಜೋರಾಂ ಸಂಸದರ ವಿರುದ್ದ ಅಸ್ಸಾಂ ಕ್ರಮ!

ಮಿಜೋರಾಂನ ರಾಜ್ಯಸಭಾ ಸಂಸದ ಕೆ ವನ್ಲಾಲ್ವೇನಾ ಅವರನ್ನು ಪ್ರಶ್ನಿಸಲು ಸೋಮವಾರ ಅಸ್ಸಾಂ ಪೊಲೀಸರ ತಂಡ ದೆಹಲಿಗೆ ತೆರಳುತ್ತಿದ್ದ ವೇಳೆ ಮಿಜೋರಾಂ ಪೊಲೀಸರು ಉದ್ದೇಶಪೂರ್ವಕವಾಗಿ ಅಸ್ಸಾಂ ಪೊಲೀಸರ ಮೇಲೆ ಅಪ್ರಚೋದಿತ ದಾಳಿ ಮಾಡಿದ್ದಾರೆ.

ಎರಡು ರಾಜ್ಯಗಳ ಪೊಲೀಸ್‌ ಪಡೆಗಳ ನಡುವಿನ ಘರ್ಷಣೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹಿಂಸಾಚಾರದಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಹಿಂದೆ ಪಿತೂರಿ ನಡೆದಿದೆ ಮತ್ತುಜ ಮಿಜೋರಾಂ ಸಂಸದರ ಕೈವಾಡವಿದೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದಾರೆ.

ಪಾರ್ಲಿಮೆಂಟ್ ಹೌಸ್ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಸದ ವನ್ಲಾಲ್ವೆನಾ, “20 ಕ್ಕೂ ಹೆಚ್ಚು ಅಸ್ಸಾಂ ಪೊಲೀಸರು ಮಿಜೋರಾಂ ಭೂಪ್ರದೇಶವನ್ನು ಪ್ರವೇಶಿಸಿದ್ದರು. ಅವರು ನಮ್ಮ ಪೊಲೀಸರನ್ನು ಹಿಂದಕ್ಕೆ ತಳ್ಳಿದರು. ನಾವು ಗುಂಡು ಹಾರಿಸುವ ಮೊದಲೇ ಅವರು ಗುಂಡಿನ ಆದೇಶ ನೀಡಿದರು. ನಾವು ಅವರನ್ನು ಕೊಲ್ಲಲಿಲ್ಲ, ಅವರು ಅದೃಷ್ಟವಂತರು. ಅವರು ಮತ್ತೆ ಬಂದರೆ, ನಾವು ಅವರೆಲ್ಲರನ್ನೂ ಕೊಲ್ಲುತ್ತೇವೆ” ಎಂದು ಮಾರಣಾಂತಿಕ ಬೆದರಿಕೆಯ ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಮಿಜೋರಾಂ ಗಡಿಯಲ್ಲಿ ಘರ್ಷಣೆ : ಅಸ್ಸಾಂನ ಐವರು ಪೊಲೀಸರು ದುರಂತ ಸಾವು..!

ಬುಧವಾರ ಸಂಜೆ, ಅಸ್ಸಾಂ ಪೊಲೀಸರ ಹಿರಿಯ ಅಧಿಕಾರಿ ಜಿ.ಪಿ.ಸಿಂಗ್ ಅವರು, “ರಾಜ್ಯಸಭಾ ಸಂಸದ ಕೆ ವನ್ಲಾಲ್ವೇನಾ ಅವರ ಮಾಧ್ಯಮ ಸಂದರ್ಶನದ ಹೇಳಿಕೆಗಳು ಈ ಘಟನೆಯ ಹಿಂದಿನ ಪಿತೂರಿಗೆ ಸಂಬಂಧಿಸಿದ ಕ್ರಮವಾಗಿದೆ. ಅದರ ವಿರುದ್ದ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಟ್ವೀಟ್ ಮಾಡಿದ್ದಾರೆ.

ಮಿಜೋರಾಂ ಪೊಲೀಸ್ ಸಿಬ್ಬಂದಿ ಮತ್ತು ಸ್ಥಳೀಯರು ಅಸ್ಸಾಂ ಪೊಲೀಸ್‌ ಸಿಬ್ಬಂದಿಗಳ ಮೇಲೆ ಗುಂಡು ಹಾರಿಸಿದ “ಪಿಕ್ಚರ್ ಗ್ಯಾಲರಿ”ಯನ್ನು ಅಸ್ಸಾಂ ಪೊಲೀಸರು ಸಿದ್ಧಪಡಿಸಿದ್ದಾರೆ. ದಾಳಿಕೋರರ ಮಾಹಿತಿಗಾಗಿ ಅಸ್ಸಾಂ ಸರ್ಕಾರವು 5 ಲಕ್ಷ ಬಹುಮಾನವನ್ನು ನೀಡುವುದಾಗಿಯೂ ಪ್ರಕಟಣೆಯಲ್ಲಿ ತಿಳಿಸಿದೆ.

ಕ್ಯಾಚರ್ ಜಿಲ್ಲೆಯ ಇನ್ನರ್ ಲೈನ್ ರಿಸರ್ವ್ ಫಾರೆಸ್ಟ್ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆಹಿಂಸಾಚಾರ ಪ್ರಾರಂಭವಾಗಿತ್ತು. ಇದರಲ್ಲಿ 45 ಜನರು ಗಾಯಗೊಂಡಿದ್ದರು. ನಂತರ, ಎರಡೂ ರಾಜ್ಯಗಳು ಗಡಿ ಉಲ್ಲಂಘನೆಯ ಆರೋಪ ಮಾಡಿದ್ದವು. ತೊಂದರೆಗೊಳಗಾದ ಪ್ರದೇಶದಲ್ಲಿ ಶಾಂತಿ ಕಾಪಾಡಲು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿತ್ತು.

ಕೇವಲ ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು.

ಅಸ್ಸಾಂನ ಬರಾಕ್ ಕಣಿವೆಯ ಜನರು “ಆರ್ಥಿಕ ದಿಗ್ಬಂಧನ” ವನ್ನು ವಿಧಿಸಿದರು, ಮಿಜೋರಾಂನಿಂದ ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 306 ಅನ್ನು ಸ್ಥಗಿತಗೊಳಿಸಿದರು.

ಇದನ್ನೂ ಓದಿ: ಜಾಗತಿಕ ಹುಲಿ ದಿನ: ವಿಶ್ವದಲ್ಲಿವೆ ಬೆರಳೆಣಿಕೆಯಷ್ಟು ಹುಲಿಗಳು; ಆದರೂ ಭಾರತವೇ ನಂ.1

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights