ಮೂಗಿನ ಸರ್ಜಿರಿ ಮಾಡಿಸಿದಕ್ಕೆ ಕಾಲುಗಳನ್ನೇ ಕಳೆದುಕೊಂಡ ಯುವತಿ: ಚಿಕನ್ ತಿಂದಿದ್ದೇ ಕಾರಣವಾ?
ಸುಂದರವಾಗಿ ಕಾಣಿಸಬೇಕು ಎಂಬ ಕಾರಣದಿಂದಾಗಿ ತನ್ನ ಮೂಗನ್ನು ಸಣ್ಣ ಮಾಡಿಸುವುದಕ್ಕಾಗಿ ಸರ್ಜರಿ ಮಾಡಿಸಿದ ಯುವತಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ.
ಟರ್ಕಿಯ 25 ವರ್ಷದ ಸೆವಿಂಕ್ ಸೆಕ್ಲಿಕ್ ಎಂಬಾಕೆ ಮತ್ತಷ್ಟು ಸುಂದರವಾಗಿ ಕಾಣಿಸಬೇಕು ಎಂಬ ಉದ್ದೇಶದಿಂದ ದಪ್ಪವಾಗಿದ್ದ ಮೂಗನ್ನು ಸಣ್ಣ ಮಾಡಿಸಿಕೊಂಡಿದ್ದಳು. ಆಕೆಯ ಮೂಗಿಗೆ 2014ರಲ್ಲಿ ಸರ್ಜರಿ ಮಾಡಲಾಗಿತ್ತು. ಸರ್ಜರಿ ಮಾಡಿಸಿಕೊಂಡ ಕೆಲವು ದಿನಗಳ ನಂತರ ಆಕೆಗೆ ಕಾಲುಗಳಲ್ಲಿ ನೋವು ಕಾಣಿಸಿಕೊಂಡಿತ್ತು. ಕಾಲು ನೋವಿನ ಬಗ್ಗೆ ಆಕೆ ಅದೇ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದಳು. ಮೂಗಗೆ ಸರ್ಜರಿ ಮಾಡಿರುವ ಕಾರಣ ಈ ರೀತಿಯ ನೋವು ಬರುತ್ತದೆ. ಕೆಲ ದಿನಗಳ ನಂತರ ಸರಿಹೋಗುತ್ತದೆ ಎಂದು ವೈದ್ಯರು ಹೇಳಿದ್ದರು.
ಆದರೆ, ಕೆಲ ದಿನಗಳ ನಂತರ ಆಕೆಯ ಕಾಲುಗಳು ಕಪ್ಪಾಗಲಾರಂಭಿಸಿದ್ದು, ಆಕೆ ಸಂಪೂರ್ಣವಾಗಿ ನಡೆಯಲಾಗದ ಸ್ಥಿತಿ ತಲುಪಿದ್ದಳು. ಆ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ರಕ್ತದಲ್ಲಿ ಬ್ಲಡ್ ಪಾಯಿಸನ್ ಆಗಿದ್ದು, ಆ ಕಾರಣದಿಂದಾಗಿ ಈ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಆಕೆಯ ಕಾಲುಗಳನ್ನು ಮೊಣಕಾಲಿನ ವರೆಗೆ ಕತ್ತರಿಸಬೇಕು. ಇಲ್ಲವಾದರೆ, ಆಕೆಯ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಿರುವನಂತಪುರಂನ ಕಿರಿಯ ಮೇಯರ್ ಆಗಿ 21 ವರ್ಷದ ಆರ್ಯ ರಾಜೇಂದ್ರನ್ ಆಯ್ಕೆ!
ಆಕೆಗೆ ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು ಆಕೆಯ ಎರಡೂ ಕಾಲುಗಳನ್ನು ಮೊಣಕಾಲಿನ ಕೆಳಭಾಗದ ವರೆಗೆ ಕತ್ತರಿಸಿದ್ದಾರೆ. ಇದರಿಂದಾಗಿ ಆಕೆ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಆಸ್ಪತ್ರೆಯ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ.
ನ್ಯಾಯಾಲಯದಲ್ಲಿ ಆಸ್ಪತ್ರೆಯ ವಿರುದ್ದ ದೂರು ದಾಖಲಿಸಿರುವ ಸೆವಿಂಕ್, ಆಸ್ಪತ್ರೆಯು ತನಗೆ 01 ಕೋಟಿ ಪರಿಹಾರ ನೀಡಬೇಕು ಎಂದು ಕೇಳಿದ್ದಾಳೆ.
ಯುವತಿಯ ಆರೋಪವನ್ನು ನಿರಾಕರಿಸಿರುವ ಆಸ್ಪತ್ರೆಯ ಆಡಳಿತ, ಆಕೆಯ ಮೂಗಿಗೆ ಸರ್ಜರಿ ಮಾಡಿದ ಕೆಲವೇ ದಿನಗಳಲ್ಲಿ ಆಕೆ ಚಿಕನ್ ತಿಂದಿದ್ದಾಳೆ. ಆ ಕಾರಣದಿಂದ ಈ ರೀತಿಯ ಸಮಸ್ಯೆಯಾಗಿದೆ ಎಂದು ಹೇಳಿದೆ.
ಈ ಪ್ರಕರಣದ ವಿಚಾಋಣೆ ನಡೆಸಲು ನ್ಯಾಯಾಲಯ ಆದೇಶ ನೀಡಿದ್ದು, ಸಂಪೂರ್ಣ ತನಿಖೆಯ ನಂತರ ತೀರ್ಪು ನೀಡಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: 2ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಗೆಲವು!

