2ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಗೆಲವು!
2ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್ ಗಳ ಭರ್ಜರಿ ಗೆಲವು ಸಾಧಿಸಿದೆ. ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 103.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದ್ದರಿಂದ ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ ಗೆಲ್ಲಲು ಕೇವಲ 70 ರನ್ ಬೇಕಾಗಿತ್ತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 30, ಮಾರ್ನಸ್ ಲ್ಯಬುಶೇನ್ 48, ಟ್ರಾವಿಸ್ ಹೆಡ್ 38, ಕ್ಯಾಮರಾನ್ ಗ್ರೀನ್ 12, ಟಿಮ್ ಪೈನ್ 13, ಪ್ಯಾಟ್ ಕಮಿನ್ಸ್ 9, ಮಿಚೆಲ್ ಸ್ಟಾರ್ಕ್ 7, ನೇಥನ್ ಲಿಯಾನ್ 20, ಜೋಶ್ ಹ್ಯಾಝಲ್ವುಡ್ 4 ರನ್ ಬಾರಿಸಿದರು. ಆಸೀಸ್ 72.3 ಓವರ್ಗೆ ಎಲ್ಲಾ ವಿಕೆಟ್ ಕಳೆದು 195 ರನ್ ಬಾರಿಸಿತ್ತು.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಶುಬ್ಮನ್ ಗಿಲ್ 45, ಚೇತೇಶ್ವರ ಪೂಜಾರ 17, ಅಜಿಂಕ್ಯ ರಹಾನೆ 112, ಹನುಮ ವಿಹಾರಿ 21, ರಿಷಭ್ ಪಂತ್ 29, ರವೀಂದ್ರ ಜಡೇಜಾ 57, ರವಿಚಂದ್ರನ್ ಅಶ್ವಿನ್ 14, ಉಮೇಶ್ ಯಾದವ್ 9 ರನ್ನೊಂದಿಗೆ 115.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 326 ರನ್ ಗಳಿಸಿ 131 ರನ್ ಮುನ್ನಡೆ ಸಾಧಿಸಿತ್ತು.
ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 40, ಮಾರ್ನಸ್ ಲ್ಯಬುಶೇನ್ 28, ಸ್ಟೀವ್ ಸ್ಮಿತ್ 8, ಟ್ರಾವಿಸ್ ಹೆಡ್ 17, ಕ್ಯಮರಾನ್ ಗ್ರೀನ್ 45, ಪ್ಯಾಟ್ ಮಮಿನ್ಸ್ 22, ಮಿಚೆಲ್ ಸ್ಟಾರ್ಕ್ 14, ಜೋಶ್ ಹ್ಯಾಝಲ್ವುಡ್ 10 ರನ್ನೊಂದಿಗೆ 103.1 ಓವರ್ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿದೆ.

