ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ನಂ.1 ಸ್ಥಾನ : ಆರೋಗ್ಯ ಇಲಾಖೆಗೆ ದೇಶಾದ್ಯಂತ ಅಭಿನಂದನೆ!

ದೇಶಾದ್ಯಂತ ಬೆಂಬಿಡದೆ ಕಾಡಿದ ಕೊರೊನಾ ನಿರ್ವಹಣೆಯಲ್ಲಿ ಕರ್ನಾಟಕಕ್ಕೆ ನಂ.1 ಸ್ಥಾನ ಸಿಕ್ಕಿದೆ. ಆರೋಗ್ಯ ಇಲಾಖೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಕೋವಿಡ್ ನಿಯಂತ್ರಣ ಮಾಡಿದ ಆರೋಗ್ಯ ಸಚಿವ ಡಾ.ಸುಧಾಕರ್​ ರಿಂದಾಗಿ, ಕರ್ನಾಟಕದ ಮುಡಿಗೆ ಅತ್ಯುತ್ತಮ ಕೊವಿಡ್ ನಿರ್ವಹಣಾ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.

ದೇಶದಲ್ಲಿಯೇ ಕೋವಿಡ್ ನಿರ್ವಹಣೆಯ ಮೊದಲ ಸ್ಥಾನ ಕರ್ನಾಟಕಕ್ಕೆ ಬಂದಿದ್ದು, ಕೊವಿಡ್ ನಿರ್ವಹಣಾ ಅತ್ಯುತ್ತಮ ರಾಜ್ಯ ಪ್ರಶಸ್ತಿಯನ್ನ  ಡಾ.ಕೆ.ಸುಧಾಕರ್ ಸ್ವೀಕರಿಸಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಮನ್​ಸುಖ್ ಮಾಡವೀಯ ರವರಿಂದ ಸುಧಾಕರ್​ ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ.

ಕೊರೋನಾ ಸಮಯದಲ್ಲಿ ಹಗಲು ರಾತ್ರಿ ಶ್ರಮಿಸಿದ್ದ ಆರೋಗ್ಯ ಸಚಿವರು,ಮೊದಲ ಅಲೆ, 2ನೇ ಅಲೆಯಲ್ಲಿ ಉತ್ತಮ ಕಾರ್ಯ ಮಾಡಿದ್ದರು.ಕರ್ನಾಟಕದಲ್ಲಿ ಪರಿಸ್ಥಿತಿ ಕೈಮೀರದಂತೆ ನೋಡಿಕೊಂಡ ಹಿನ್ನೆಲೆ ಆರೋಗ್ಯ ಸಚಿವ ಸುಧಾಕರ್ ಸಾಧನೆಗೆ ದೇಶಾದ್ಯಂತ ಪ್ರಶಂಶಿಸಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights