ದೇಶದಲ್ಲಿ ಹಕ್ಕಿಜ್ವರ ಹರಡಲು ಪ್ರಧಾನಿ ಮೋದಿಯೇ ಕಾರಣ: ಐಪಿ ಸಿಂಗ್‌

ಕೊರೊನಾ ಹಾವಳಿಯಿಂದ ಇಡೀ ದೇಶವೇ ನಲುಗಿ ಹೋಗಿದೆ. ಕೊರೊನಾ ಮತ್ತು ಅಚರ ನಿಯಂತ್ರಣಕ್ಕಾಗಿ ಹೇರಲ್ಪಟ್ಟ ಲಾಕ್‌ಡೌನ್‌ ಪರಿಣಾಮದಿಂದ ದೇಶದ ಜನರು ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ. ಈ ನಡುವೆ ದೇಶದಲ್ಲಿ ಹಕ್ಕಿಜ್ವರದ ಹಾವಳಿ ಹೆಚ್ಚಾಗಿದೆ. ದೇಶದಲ್ಲಿ ಹಕ್ಕಿಜ್ವರ ಹರಡಲು ಪ್ರಧಾನಿ ಮೋದಿಯೇ ಕಾರಣ ಎಂದು ಸಮಾಜವಾದಿ ಪಕ್ಷದ ಮುಖಂಡ ಐಪಿ ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು‌ ಟ್ವೀಟ್‌ ಮಾಡಿರುವ ಅವರು, ನವಿಲಿಗೆ ಪ್ರಧಾನಿ ಮೋದಿ ಕಾಳು ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮನುಷ್ಯನಿಗೆ ಏನು ಮಾಡೋದು..? ಇವರು ಆ ಬಡಪಾಯಿ ಹಕ್ಕಿಗಳಿಗೆ ಕಾಳು ಹಾಕಿದ್ರು. ಈಗ ಅವು ಹಕ್ಕಿ ಜ್ವರದಿಂದ ಬಳಲುವಂತಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕೇರಳ , ಮಧ್ಯ ಪ್ರದೇಶ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಕೋಳಿಗಳು ಮತ್ತು ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಕೇರಳ ಸರ್ಕಾರ ಬಾತುಕೋಳಿ ಸಾಕಿದ್ದವರಿಗೆ ಪರಿಹಾರ ನೀಡುವುದಾಗಿ ಘೋಷಿಸಿದೆ. ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸೂಚಿಸಿದೆ.


ಇದನ್ನೂ ಓದಿ: ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights