‘ಗಣಿಗಾರಿಕೆ ನಿಲ್ಲಿಸಿದರೆ ಮಂಡ್ಯ ಜನ ದಂಗೆ ಏಳ್ತಾರೆ’ ಸುಮಲತಾಗೆ ದಳಪತಿಗಳಿಂದ ಎಚ್ಚರಿಕೆ!

ಸಂಸದೆ ಸುಮಲತಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಕನ್ನಂಬಾಡಿ ಕಾಳಗ ಮತ್ತೊಂದು ಸಮರಕ್ಕೆ ಸಾಕ್ಷಿಯಾಗಿದೆ. ಸುಮಲತಾ ವಿರುದ್ಧ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಂಡ್ಯದಲ್ಲಿ ಮಾತನಾಡಿದ ರವೀಂದ್ರ, ” ಆಣೆಕಟ್ಟು ಒಡೆದುಹೊಗಿಲ್ಲ. ಅದೆಲ್ಲಾ ಸುಳ್ಳು ಎಂದು ಸಂಸದೆ ಸುಮಲತಾ ಹೇಳಲಿ. ಪ್ರಾಕ್ಟಿಕಲ್ ಆಗಿ ಬಂದು ನೋಡಲು. ಆಣೆಕಟ್ಟು ಬಿರುಕು ಬಿಟ್ಟಿಲ್ಲ ಎಂದು ಅಧಿಕಾರಿಗಳೇ ಹೇಳುತ್ತಾರೆ. ಅದನ್ನ ನೋಡಲಿ. ಪರಿಶೀಲಿಸಲಿ. ತಿಳಿದುಕೊಳ್ಳದೇ ಮಾತನಾಡಿದೆ ಎಂದು ಸುಮಲತಾ ಹೇಳಲಿ ” ಎಂದು ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ಮಾಡಿದ್ದಾರೆ.

ಅದನ್ನು ಬಿಟ್ಟು ಗಣಿಗಾರಿಕೆ ನಿಲ್ಲಿಸಿದರೆ ಮಂಡ್ಯ ಜನ ದಂಗೆ ಏಳ್ತಾರೆ ಸುಮಲತಾಗೆ ದಳಪತಿಗಳಿಂದ ಎಚ್ಚರಿಕೆ ಕೊಟ್ಟಿದ್ದಾರೆ. ಗಣಿಗಾರಿಕೆ ನಿಲ್ಲಿಸಲು ಆಗಲ್ಲ. ಅಕ್ರಮ ಇರೋದನ್ನ ಸಕ್ರಮ ಮಾಡಿಕೊಡಿ. ಅದನ್ನ ಬಿಟ್ಟು ಗಣಿಗಾರಿಕೆನೇ ನಿಲ್ಲಿಸಿಬಿಡುತ್ತೇನೆ ಎಂದು ಹೇಳುವುದಲ್ಲ. ಅದನ್ನೇ ನಂಬಿಕೊಂಡು ನೂರಾರು ಕುಟುಂಬಗಳು ನಡೆಯುತ್ತಿವೆ.  ಅವರೆಲ್ಲರೂ ದಂಗೆ ಏಳುತ್ತಾರೆಂದು ಎಂದು ಶ್ರೀಕಂಠಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಗಣಿಕಾರಿಗೆ ನಿಲ್ಲಿಸಿದರೆ ಮಂಡ್ಯದ ಜನರನ್ನು ಒಂದು ವಾರ ಕೂಡ ಕಂಟ್ರೋಲ್ ಮಾಡಲು ಆಗೋದಿಲ್ಲ ಎಂದು ಆಕ್ರೋಶಗೊಂಡಿದ್ದಾರೆ.

ಈ ವೇಳೆ ಅಭಿಷೇಕ್ ಅಂಬರೀಶ್ ಬಗ್ಗೆ ಮಾತನಾಡಿದ ಶ್ರೀಕಂಠಯ್ಯ,”ಅಭಿಯನ್ನು ಹೊಸ ಪ್ರಯತ್ನ ಅವಿಷ್ಕಾರ ಮಾಡಲು ಕಳುಹಿಸಿದ್ದಾರೆ. ಅಬಿಗೆ ಒಂದು ಮಾತು. ನಾನು ಅಂಬರೀಶ್ ಅವರಿಂದ ಅಕ್ರಮಗಣಿಗಾರಿಕೆ ಆಗಿದೆ ಎಂದು ಹೇಳಿಲ್ಲ. ಅವರ ಆಡಳಿತ ಅವಧಿಯಲ್ಲಿ ಅಕ್ರಮಗಣಿಗಾರಿಕೆ ನಡೆಯುತ್ತಿತ್ತು ಎಂದಿದ್ದೇನೆ. ಅದನ್ನ ಅಭಿಷೇಕ್ ತಪ್ಪಾಗಿ ಗ್ರಹಿಸಿದ್ದಾರೆ ” ಎಂದಿದ್ಧಾರೆ.

 

Spread the love

Leave a Reply

Your email address will not be published. Required fields are marked *