ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!

ದೇಶದ ಜನರು ಕೊರೊನಾ ಸೋಂಕಿನ ಆತಂಕವನ್ನು ಎದುರಿಸುತ್ತಿರುವ ನಡುವೆಯೇ ಪಕ್ಷಗಳಿಗೆ ಹಕ್ಕಿಜ್ವರದ ಕಾಟ ಆರಂಭವಾಗಿದೆ. ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾನೀಸಿಕೊಂಡಿದ್ದ ಹಕ್ಕಿಜ್ವರ ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲೂ ಕಾಣಿಸಿಕೊಂಡಿದ್ದ, ಭೀತಿಯನ್ನು ಸೃಷ್ಟಿಸಿದೆ.

ಕೇರಳದ ನೀಂದೂರ್​ನ ಬಾತುಕೋಳಿಯ ಫಾರ್ಮ್ ಒಂದರಲ್ಲಿ 1,500 ಬಾತುಕೋಳಿಗಳು ಸಾವನ್ನಪ್ಪಿದ್ದು. ಕೇರಳ ರಾಜ್ಯದಲ್ಲಿರುವ ಫಾರ್ಮ್​ಗಳಲ್ಲಿ ಒಟ್ಟು 12,000 ಬಾತುಕೋಳಿಗಳು ಹಕ್ಕಿಜ್ವರದಿಂದ ಸತ್ತುಹೋಗಿವೆ.  ಹೀಗಾಗಿ, ಹಕ್ಕಿಜ್ವರ ಹರಡಬಾರದೆಂಬ ಕಾರಣಕ್ಕೆ ಅವುಗಳ ಜೊತೆಗಿದ್ದ ಸುಮಾರು 36,000 ಬಾತುಕೋಳಿಗಳನ್ನು ಕೊಲ್ಲಲಾಗಿದೆ. ಅಲ್ಲದೆ, ಬಾತುಕೋಳಿಗಳನ್ನು ಸಾಕಿದ್ದ ಮಾಲೀಕರಿಗೆ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಕೊಟ್ಟಾಯಂ ಮತ್ತು ಅಲಪ್ಪುಳ ಜಿಲ್ಲೆಗಳಲ್ಲಿ ಸಾಕಷ್ಟು ಬಾತುಕೋಳಿಗಳು ಸಾವನ್ನಪ್ಪಿದ್ದವು. ಅವುಗಳಲ್ಲಿ 8 ಬಾತುಕೋಳಿಗಳ ಸ್ಯಾಂಪಲ್ ಅನ್ನು ಭೂಪಾಲ್​ನ ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಅವುಗಳಲ್ಲಿ 5 ಸ್ಯಾಂಪಲ್​ನಲ್ಲಿ ಹಕ್ಕಿ ಜ್ವರದ ವೈರಸ್ ಪತ್ತೆಯಾಗಿದೆ ಎಂದು ಕೇರಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳಾ ಸದಸ್ಯರ ಬದಲು ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ: ಸಿದ್ದರಾಮಯ್ಯ

ರಾಜಸ್ಥಾನದಲ್ಲಿ 250ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದು, ಅವುಗಳಿಗೆ ಹಕ್ಕಿ ಜ್ವರದ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಇದುವರೆಗೂ ರಾಜಸ್ಥಾನದ ಜಲಾವರ್​ನಲ್ಲಿ 100, ಬರಾನ್​ನಲ್ಲಿ 72, ಕೋಟದಲ್ಲಿ 47, ಪಲಿಯಲ್ಲಿ 19, ಜೋಧ್​ಪುರದಲ್ಲಿ 7, ಜೈಪುರದಲ್ಲಿ 7 ಕಾಗೆಗಳು ಸಾವನ್ನಪ್ಪಿವೆ.

ಹಕ್ಕಿಜ್ವರ; 48 ಸಾವಿರ ಬಾತುಕೋಳಿ ಕೊಲ್ಲಲು ಕೇರಳ ಸರ್ಕಾರ ಆದೇಶ | NEWSICS

ಮಧ್ಯಪ್ರದೇಶದ ಇಂದೋರ್​ನಲ್ಲಿ 50ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿದ್ದವು. ಇದರ ಜೊತೆಗೆ ಹಿಮಾಚಲ ಪ್ರದೇಶದಲ್ಲಿ ಕೂಡ 1,800 ಕೊಕ್ಕರೆಗಳು ಸಾವನ್ನಪ್ಪಿವೆ.

ಹಕ್ಕಿ ಜ್ವರ ಕೋಳಿ, ಟರ್ಕಿ, ಬಾತುಕೋಳಿ, ಕಾಗೆಗಳ ಮೂಲಕ ಹರಡುವ ಸಾಧ್ಯತೆ ಇರುತ್ತದೆ. ಕೇರಳದಲ್ಲಿ ಈ ಮೊದಲು 2016ರಲ್ಲಿ ಭಾರೀ ಪ್ರಮಾಣದ ಹಕ್ಕಿ ಜ್ವರದ ಕೇಸುಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಹಕ್ಕಿಜ್ವರದ ಭೀತಿ ಶುರುವಾಗಿದೆ.


ಇದನ್ನೂ ಓದಿ: ಸೆಂಟ್ರಲ್ ವಿಸ್ಟಾ ಯೋಜನೆ ಮುಂದುವರಿಕೆಗೆ ಸುಪ್ರೀಂ ಒಪ್ಪಿಗೆ; ಏನಿದು ಯೋಜನೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights