ಲಾಕ್‌ಡೌನ್ ಸಂಕಷ್ಟ: ತಾಯಿಗಾಗಿ ದುಡಿದು ಕುಟುಂಬ ಸಾಗಿಸುತ್ತಿದ್ದಾನೆ 14ರ ಬಾಲಕ

ಕೊರೊನಾ ಲಾಕ್‌ಡೌನ್ ‌ನಿಂದಾಗಿ ದೇಶದ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಬದುಕು ಸಾಗಿಸುವುದಕ್ಕಾಗಿ ಹಲವರು ನಾನಾ ರೀತಿಯ ಕೆಲಸ ಮಾಡುತ್ತಿದ್ದಾರೆ. ಅಂತೆಯೇ 14 ವರ್ಷದ ಬಾಲಕನೊಬ್ಬ ತನ್ನ ಕುಟುಂಬಕ್ಕೆ ನೆರವಾಗುವುದ್ಕಕಾಗಿ ದಿನಪೂರ್ತಿ ದುಡಿಯುತ್ತಿದ್ದಾನೆ.

ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಶಾಲೆಗಳು ಲಾಕ್‌ ಆಗಿವೆ. ಹಾಗಾಗಿ ಶಾಲಾ ಬಸ್ ಅಟೆಂಡೆಂಟ್ ಆಗಿದ್ದ ತಾಯಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಇಡೀ ಕುಟುಂಬಕ್ಕೆ ಆಧಾರವಾಗಿ 14 ವರ್ಷದ ಬಾಲಕ ಸುಭಾನ್‌ ದುಡಿದು ಕುಟುಂಬದ ಜೀವನ ಸಾಗಿಸುತ್ತಿದ್ದಾನೆ.

12 ವರ್ಷಗಳ ಹಿಂದೆಯೇ ತಂದೆಯನ್ನು ಕಳೆದುಕೊಂಡ ಸುಭಾನ್ ಕುಟುಂಬಕ್ಕೆ ತಾಯಿಯ ಆದಾಯವೇ ಮೂಲವಾಗಿತ್ತು. ಆದರೆ ಭಾರತ ಲಾಕ್ ಡೌನ್ ನಿಂದಾಗಿ ತಾಯಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿ ಆಗಿದ್ದಾರೆ. ಈ ಹಿನ್ನೆಲೆ ಮುಂಬೈನ ಭೆಂದಿ ಬಜಾರ್ ನಲ್ಲಿ ಸುಭಾನ್, ಚಹಾ ಮಾರಾಟ ಮಾಡುವ ಮೂಲಕ ಕುಟುಂಬಕ್ಕೆ ನೆರವಾಗಿ ನಿಂತಿದ್ದಾನೆ.

“ನಾನು 12 ವರ್ಷಗಳ ಹಿಂದೆಯೇ ನಮ್ಮ ತಂದೆಯನ್ನು ಕಳೆದುಕೊಂಡಿದ್ದೇನೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲಾ ಬಸ್ ಅಟೆಂಡೆಂಟ್ ಆಗಿರುವ ತಾಯಿ ಉದ್ಯೋಗ ಕಳೆದುಕೊಂಡಿದ್ದು, ಕುಟುಂಬಕ್ಕೆ ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಕುಟುಂಬಕ್ಕೆ ನೆರವಾಗಲು ಭೆಂದಿ ಬಜಾರ್ ನಲ್ಲಿ ನಾನು ಒಂದು ಪುಟ್ಟ ಟೀ ಅಂಗಡಿಯನ್ನು ತೆರೆದಿದ್ದೇನೆ. ಪುಟ್ಟ ಅಂಗಡಿಯಲ್ಲೇ ಟೀ ತಯಾರಿಸಿಕೊಂಡು ನಾಗಾಪಾಡ್ ಮತ್ತು ಭೆಂದಿ ಬಜಾರ್ ನಲ್ಲಿ ಅಂಗಡಿ ಅಂಗಡಿಗಳಿಗೆ ತೆರಳಿ ಮಾರಾಟ ಮಾಡುತ್ತೇನೆ. ಪ್ರತಿನಿತ್ಯ 300 ರಿಂದ 400 ರೂಪಾಯಿ ಆದಾಯ ಗಳಿಸುತ್ತಿದ್ದು, ಇದರಿಂದ ನಮ್ಮ ಕುಟುಂಬಕ್ಕೆ ಕೊಂಚ ನೆರವಾಗುತ್ತಿದೆ” ಎಂದು ಸುಭಾನ್‌ ಹೇಳಿದ್ದಾನೆ.


ಇದನ್ನೂ ಓದಿ: ಲಾಕ್‌ಡೌನ್‌ ಎಫೆಕ್ಟ್: ಪರಿಸ್ಥಿತಿ ಸುಧಾರಿಸದಿದ್ದರೆ, ಕರ್ನಾಟಕದ ಸಣ್ಣ-ಮಧ್ಯಮ ಉದ್ಯಮಗಳಿಗಿಲ್ಲ ಅಸ್ಥಿತ್ವ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights