ಫ್ಯಾಕ್ಟ್‌ಚೆಕ್: ಮುಸ್ಲಿಂ ದ್ವೇಷಕ್ಕಾಗಿ ಬಾಂಗ್ಲಾ ಫೋಟೋ ವೈರಲ್ ಮಾಡಿದ ಬಲಪಂಥೀಯರು

ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಬರುವವರೆಗೂ ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಬಾರದು. ಎರಡಿದ್ದವರು ಮೂರು ಮಾಡಿ, ಮೂರು ಇದ್ದವರು ನಾಲ್ಕು ಮಕ್ಕಳನ್ನು ಮಾಡಿ ಎಂದು ಆರೆಸ್ಸೆಸ್‌ ಮುಖಂಡರು ಹಲವು ಭಾರಿ ಕರೆ ನೀಡಿದ್ದನ್ನು ಕಂಡಿದ್ದೇವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಐವರು ಮಕ್ಕಳು ಮತ್ತು ಬುರ್ಖಾ ಧರಿಸಿದ ಮಹಿಳೆಯೊಬ್ಬರನ್ನು ಕೂರಿಸಿಕೊಂಡು  ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಇಲ್ಲದಿದ್ದರೆ, ಈ ರೀತಿಯ ಮುಸ್ಲಿಮರ ದೊಡ್ಡ ಕುಟುಂಬಗಳು ತೆರಿಗೆದಾರರ ಹಣದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳುತ್ತವೆ ಎಂದು ಹೇಳುವ ಶೀರ್ಷಿಕೆಗಳೊಂದಿಗೆ ಹಲವರು ಫೋಟೋವನ್ನು ಹಂಚಿಕೊಂಡಿದ್ದಾರೆ.

https://twitter.com/Rishabh_496/status/1519522552300810241

ಭಾರತದಲ್ಲಿ ಮುಸ್ಲಿಂ ಕುಟುಂಬಗಳು ಎಲ್ಲಾ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆಯಬೇಕೆಂದರೆ ನೀವು ಎಲ್ಲರೂ ಕಡ್ಡಾಯವಾಗಿ ತೆರಿಗೆ ಪಾವತಿಸಿ. ನಿಮ್ಮಮ ತೆರಿಗೆ ಹಣದಲ್ಲಿ ಅವರು ಮಜಾ ಮಾಡಲಿ ಎಂದು ವ್ಯಂಗ್ಯ ಭರಿತ ಪೋಸ್ಟ್‌ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ಪ್ರತಿಪಾದಿಸಿ ಹಂಚಿಕೊಳ್ಳಲಾದ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವ್ಯಾಪಕವಾಗಿ ಹಂಚಿಕೊಳ್ಳಲಾದ ಫೋಟೋ ಭಾರತದ್ದಲ್ಲ ಎಂದು ತಿಳಿದು ಬಂದಿದೆ.  ಈ ಫೋಟೋ ಸುಮಾರು 2017 ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. “ಎಲೆಕ್ಟ್ರಿಕ್ ಬೈಕರ್ಸ್ ಅಸೋಸಿಯೇಷನ್ ಬಾಂಗ್ಲಾದೇಶ” ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ಡಿಸೆಂಬರ್ 7, 2017 ರಂದು ಈ ಚಿತ್ರವನ್ನು ಹಂಚಿಕೊಂಡಿರುವ ಪೋಸ್ಟ್‌ವೊಂದು ಲಭ್ಯವಾಗಿದೆ.

ಈ ಫೋಟೋದಲ್ಲಿ, ಬೆಂಗಾಲಿ ಭಾಷೆಯಲ್ಲಿ “ಹನೀಫ್ ಎಂಟರ್‌ಪ್ರೈಸ್, ಭಾಟಿಯಾಪರಾ-ಢಾಕಾ-ಚಟ್ಟೋಗ್ರಾಮ್” ಎಂದು ಬರೆದಿರುವ ಸೈನ್‌ಬೋರ್ಡ್ ಅನ್ನು ನಾವು ಗಮನಿಸಬಹುದು ಬೋರ್ಡ್‌ನಲ್ಲಿ ಕೆಳಗಿನ ಮೂಲೆಯಲ್ಲಿ ಬಸ್‌ನ ಚಿತ್ರ ಕೂಡ ಇದೆ.

ಕೀ ವರ್ಡ್ ಸಹಾಯದ ಮೂಲಕ “ಹನೀಫ್ ಎಂಟರ್‌ಪ್ರೈಸ್” ಅನ್ನು ಸರ್ಚ್ ಮಾಡಿದಾಗ, ನಾವು ಅದೇ ಫೇಸ್‌ಬುಕ್ ಪುಟವನ್ನು ಕಂಡುಕೊಂಡಿದ್ದೇವೆ, ಬಾಂಗ್ಲಾದೇಶದ ಖಾಸಗಿ ಬಸ್ ಸೇವೆಯು ಚಿತ್ತಗಾಂಗ್ ಮತ್ತು ಢಾಕಾದಾದ್ಯಂತ ಹಲವಾರು ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದು ಬಂದಿದೆ.

ಹೀಗಾಗಿ, ಬಾಂಗ್ಲಾದೇಶದ ಮುಸ್ಲಿಂ ಕುಟುಂಬದ ಫೋಟೋವನ್ನು (ಕನಿಷ್ಠ 2017 ರಿಂದ ಆನ್‌ಲೈನ್‌ನಲ್ಲಿದೆ) ಭಾರತದಲ್ಲಿ ನಡೆಯುತ್ತಿರುವ  ಏಕರೂಪ ನಾಗರಿಕ ಸಂಹಿತೆಯ ವಿಷಯಕ್ಕೆ ಬಳಸಿಕೊಂಡು ದೇಶದಲ್ಲಿ ಮುಸ್ಲಿಮರ ವಿರುದ್ದ ಅಸಹನೆಯನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ದೇಶದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲಾಗದ BJP ಯು ತನ್ನ ಐಟಿ ಸೆಲ್ ಮೂಲಕ ಈ ರೀತಿ ಸುಳ್ಳು ಸುದ್ದಿಯನ್ನು ಹರಿಯ ಬಿಟ್ಟು ಬಹುಸಂಖ್ಯಾತರಾದ ಹಿಂದೂಗಳಲ್ಲಿ ಮುಸ್ಲಿಂ ದ್ವೇಷಕ್ಕೆ ಬೆಳಸುತ್ತಿದೆ. ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮಗಳಲ್ಲಿ ಹೆಚ್ಚು ಮಕ್ಕಳಿಗೆ ಜನ್ಮ ನೀಡಿರುವ ಉದಾಹರಣೆಗಳು ನಮ್ಮ ಮುಂದಿವೆ. ಮತ್ತು ಭಾರತದಲ್ಲಿರುವ ಪ್ರತಿಯೊಬ್ಬರು ಸರ್ಕಾರಕ್ಕೆ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಎರಡೂ ಧರ್ಮಗಳ ನಡುವೆ ಪರಸ್ಪರ ದ್ವೇಷದ ಮನೋಭಾವನೆಯನ್ನು ಹುಟ್ಟು ಹಾಕುವಂತಿದೆ. ಇಂತಹ ಕುತಂತ್ರಗಳಿಗೆ ಜನ ಸಾಮಾನ್ಯರು ಬಲಿಯಾಗಬಾರದು ಎಂಬುದು ಈ ಲೇಖನದ ಆಶಯ.

ಕೃಪೆ: ಇಂಡಿಯಾಟುಡೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಆನೆಗೆ ಮಾಂಸ ನೀಡಲು ಹೋದಾಗ ನಡೆದ ಘಟನೆ! ವಾಸ್ತವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.