ರಾಜಸ್ಥಾನ : ತಾಯಿಯಿಂದ ಆಸ್ತಿ ಬರೆಸಿಕೊಳ್ಳಲು ಮಗ ಮಾಡಿದ ನೀಚ ಕೃತ್ಯ…!

ತಾಯಿಯಿಂದ ಆಸ್ತಿ ಬರೆಸಿಕೊಳ್ಳಲು ಮಗ ಮಾಡಿದ ನೀಚ ಕೃತ್ಯಕ್ಕೆ ಇಡೀ ಮನುಕುಲವೇ ತಲೆ ತಗ್ಗಿಸಿದ ಘಟನೆ ರಾಜಸ್ಥಾನದ ಶಿವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು… ಆಸ್ತಿಗಾಗಿ ಪೀಡಿಸುತ್ತಿದ್ದ ಮಗ ತಾಯಿಯ ಅಶ್ಲೀಲ ದೃಶ್ಯ ಕ್ಲಿಕ್ಕಿಸಿದ ನಾಚಿಕೆಗೇಡಿನ ಕೆಲಸ ಮಾಡಿದ್ದಾನೆ. ಮಾತ್ರವಲ್ಲದೇ ತಾಯಿಯ ನಗ್ನ ಫೋಟೋಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆಂದು 75 ವರ್ಷದ ವೃದ್ಧ ತಾಯಿ ರಾಜಸ್ಥಾನದ ಶಿವಪುರ ಪೊಲೀಸ್ ಠಾಣಾಯಲ್ಲಿ ದೂರು ನೀಡಿದ್ದಾರೆ.ತಾಯಿ ಮತ್ತು ಮಗನ ನಡುವೆ ಆಸ್ತಿಯ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು. ಆಸ್ತಿ ತನ್ನದಾಗಬೇಕೆಂಬ ದುರಾಸೆಗೆ ಬಿದ್ದ 50 ವರ್ಷದ ಮಗ ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ, ಕುಟುಂಬಸ್ಥರ ಮೊಬೈಲ್ ಗೆ ಸೆಂಡ್ ಮಾಡಿದ್ದಾನೆ.

ಅಷ್ಟಕ್ಕೂ ಮಾನಗೇಡಿ ಮಗ ತಾಯಿ ಅಶ್ಲೀಲ ಫೋಟೋ ತೆಗೆದ ಬಗೆ ಕೇಳಿದ್ರೆ ಶಾಕ್ ಆಗುತ್ತದೆ. ತಾಯಿ ಹವನ ಮಾಡ್ತಾ ಪೂಜೆಯಲ್ಲಿ ಭಾಗಿಯಾದ್ದರು. ಈ ವೇಳೆ ಬೆಂಕಿ ಹೊತ್ತುಕೊಂಡಿದೆ ಎಂದು ಮಗ ನಾಟಕವಾಡಿ ಬೆಂಕಿ ತಾಗುವುದೆಂದು ತಾಯಿಗೆ ಬಟ್ಟೆ ಕಳೆಚಲು ಹೇಳಿದ್ದಾನೆ. ಈ ವೇಳೆ ತಾಯಿ ಹೆದರಿ ಬಟ್ಟೆ ಕಳಚಿದಾಗ ಪಾಪಿ ಮಗ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ.

”ಎರಡು ದಿನಗಳ ಹಿಂದೆ ಠಾಣೆಗೆ ಬಂದ ವೃದ್ಧೆ ತನ್ನ 50 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದರು. ಪುತ್ರ ತನ್ನ ನಗ್ನ ಚಿತ್ರಗಳನ್ನು ಕ್ಲಿಕ್ಕಿಸಿ ಆಸ್ತಿ ಬರೆದುಕೊಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು” ಎಂದು ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ತಾರಾಚಂದ್ ಹೇಳಿದ್ದಾರೆ.

ಸದ್ಯ ಪೊಲೀಸರು ತಾಯಿಯ ಅಶ್ಲೀಲ ಫೋಟೋ ಕ್ಲಿಕ್ಕಿಸಿ ಆಸ್ತಿ ಬರೆದುಕೊಡುವಂತೆ ಬೆದರಿಕೆ ಹಾಕಿದ್ದ ನೀಚ ಪುತ್ರನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights