ಮೂರನೇ ಬಾರಿಗೆ ನೇಪಾಳದ ಪ್ರಧಾನಿಯಾಗಿ ಕೆಪಿ ಒಲಿ ನೇಮಕ!

ಕೆಲವು ದಿನಗಳ ಹಿಂದೆ ನೇಪಾಳ ಸಂಸತ್ತಿನಲ್ಲಿ ನಿರ್ಣಾಯಕ ವಿಶ್ವಾಸ ಮತವನ್ನು ಕಳೆದುಕೊಂಡು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಕೆ ಪಿ ಶರ್ಮಾ ಒಲಿ ಅವರನ್ನು ಇದೀಗ ಮತ್ತೆ ನೇಪಾಳದ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.

ನೇಪಾಳದ ಅಧ್ಯಕ್ಷ ಬಿಡಿಯಾ ದೇವಿ ಭಂಡಾರಿ ಅವರು ಒಲಿ ಅವರನ್ನು ನೇಪಾಳದ ಪ್ರತಿನಿಧಿ ಸಭೆಯಲ್ಲಿ ಅತಿದೊಡ್ಡ ರಾಜಕೀಯ ಪಕ್ಷದ ನಾಯಕರಾಗಿ ಮತ್ತು ಪ್ರಧಾನಿಯಾಗಿ ನೇಮಿಸಿದ್ದು, ಒಲಿ ಅವರು ಶುಕ್ರವಾರ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಹೊಸ ಸರ್ಕಾರ ರಚಿಸಲು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಬಹುಮತವನ್ನು ಸಾಬೀತು ಪಡಿಸಲು ವಿಫಲವಾದ ಕಾರಣ ಒಲಿ ಅವರನ್ನು ಗುರುವಾರ ರಾತ್ರಿ ಮತ್ತೆ ಪ್ರಧಾನಿ ಹುದ್ದೆಗೆ ನೇಮಿಸಲಾಗಿದೆ.

ಸಿಪಿಎನ್-ಯುಎಂಎಲ್ ಅಧ್ಯಕ್ಷರಾದ ಒಲಿ ಅವರು ಸೋಮವಾರ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಸೋಮವಾರ ನಿರ್ಣಾಯಕ ವಿಶ್ವಾಸ ಮತವನ್ನು ಕಳೆದುಕೊಂಡು, ರಾಜೀನಾಮೆ ನೀಡಿದ್ದರು.

ಇದೀಗ ಉಸ್ತುವಾರಿ ಪ್ರಧಾನಿಯಾಗಿ ನೇಮಕಗೊಂಡಿರುವ ಒಲಿ ಅವರು 30 ದಿನಗಳ ಒಳಗೆ ಸದನದಲ್ಲಿ ವಿಶ್ವಾಸಮತವನ್ನು ಪಡೆದುಕೊಳ್ಳಬೇಕು. ಒಂದು ವೇಳೆ ವಿಫಲವಾದರೆ, 76 (5) ನೇ ವಿಧಿ ಅಡಿಯಲ್ಲಿ ಸರ್ಕಾರ ರಚಿಸುವ ಪ್ರಯತ್ನವನ್ನು ಪ್ರಾರಂಭಿಸಲಾಗುವುದು. 76 (5) ನೇ ವಿಧಿಗೆ ಅನುಗುಣವಾಗಿ ಹೊಸ ಸರ್ಕಾರವನ್ನು ರಚಿಸಲು ಪಕ್ಷಗಳು ವಿಫಲವಾದರೆ ಅಥವಾ ಈ ನಿಬಂಧನೆಯಡಿಯಲ್ಲಿ ಚುನಾಯಿತರಾದ ಪ್ರಧಾನ ಮಂತ್ರಿ ಮತ್ತೆ ವಿಶ್ವಾಸ ಮತವನ್ನು ಪಡೆದುಕೊಳ್ಳದಿದ್ದರೆ, ಆ ಪ್ರಧಾನಿಯು ಸಂಸತ್ತನ್ನು ವಿಸರ್ಜಿಸಲು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬಹುದು ಮತ್ತು ದಿನಾಂಕವನ್ನು ಪ್ರಕಟಿಸಬಹುದು. ಸಂಸತ್ತು ವಿಸರ್ಜಿನೆಯಾದ ಆರು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದು.

ಓಲಿ ಈಗ 30 ದಿನಗಳಲ್ಲಿ ಸದನದಲ್ಲಿ ವಿಶ್ವಾಸ ಮತ ಚಲಾಯಿಸಬೇಕಾಗುತ್ತದೆ. ಪ್ರಮಾಣ ವಚವನ್ನು ಪಡೆದಿರುವ ಅವರು, ”ಹಳೆಯ ಕ್ಯಾಬಿನೆಟ್‌ನಿಂದ ಎಲ್ಲ ಸಚಿವರು ಮತ್ತು ರಾಜ್ಯ ಸಚಿವರನ್ನು ಹೊಸ ಕ್ಯಾಬಿನೆಟ್‌ನಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಓಲಿ ಈ ಹಿಂದೆ 2015 ರ ಅಕ್ಟೋಬರ್ 11 ರಿಂದ 2016 ರ ಆಗಸ್ಟ್ 3 ರವರೆಗೆ ಮತ್ತು ಮತ್ತೆ ಫೆಬ್ರವರಿ 15, 2018 ರಿಂದ ಮೇ 13, 2021 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.

ನೇಪಾಳದ ಪ್ರತಿನಿಧಿ ಸಭೆಯ ಒಟ್ಟು 271 ಸ್ಥಾನಗಳ ಪೈಕಿ ಪ್ರಧಾನಿ ಒಲಿಯ ಸಿಪಿಎನ್-ಯುಎಂಎಲ್ 121 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ. ಬಹುಮತದ ಸರ್ಕಾರ ರಚಿಸಲು ಪ್ರಸ್ತುತ 136 ಮತಗಳು ಬೇಕಾಗುತ್ತವೆ.

ಇದನ್ನೂ ಓದಿ: ನಿರಂತರ ಮನವಿಗೆ ಸ್ಪಂದಿಸದ ಮೋದಿ – ಯೋಗಿ; ಕೊರೊನಾದಿಂದ RSS ಕಾರ್ಯಕರ್ತ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights