ಫ್ಯಾಕ್ಟ್‌ಚೆಕ್: ಮದುವೆ ಮಂಟಪದಲ್ಲಿಯೆ ವಧು ಮತ್ತು ವರ ಪರಸ್ಪರ ಕಪಾಳಕ್ಕೆ ಬಾರಿಸುವ ದೃಶ್ಯ ನಿಜವೆ? ಇಲ್ಲಿ ಓದಿ

ಮದುವೆ ಮಂಟಪದಲ್ಲಿ ವಧು ಮತ್ತು ವರ ಪರಸ್ಪರ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ವೀಡಿಯೊವನ್ನು ನೈಜ ಘಟನೆ ಎಂದು ಹೇಳಲಾಗಿದೆ. ಹಾಗಿದ್ದರೆ ಈ ಘಟನೆ ಎಲ್ಲಿಯದ್ದು ಯಾವ ಕಾರಣಕ್ಕೆ ನಡೆದಿದೆ ಎಂದು ದೃಶ್ಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್: 

ವಿಡಿಯೊದ ದೃಶ್ಯದಲ್ಲಿ ವರ ವಧುವಿಗೆ ಸಿಹಿ ತಿನ್ನಿಸಲು ಹೋಗುತ್ತಾನೆ ಆಗ ವಧು ಸಿಹಿಯನ್ನು ನಿರಾಕರಿಸಿದ ಕಾರಣ ಕೋಪಗೊಳ್ಳುವ ವರ ಸಿಹಿಯನ್ನು ವಧುವಿನ ಮುಖಕ್ಕೆ ಮೆತ್ತುತ್ತಾನೆ, ನಂತರ ವಧು ಕೂಡ ಹೀಗೆಯೇ ಮಾಡುತ್ತಾಳೆ. ಆಗ ಇಬ್ಬರು ಪರಸ್ಪರ ಕಪಾಳಕ್ಕೆ ಹೊಡೆಯುತ್ತಾರೆ. ಇದಿಷ್ಟು ವೈರಲ್ ವಿಡಿಯೊದಲ್ಲಿರುವ ದೃಶ್ಯಾವಳಿಗಳು.

ಈ ವಿಡಿಯೊ ದೃಶ್ಯಗಳಲ್ಲಿ ‘AVI ಮ್ಯೂಸಿಕ್ ‘ನ ವಾಟರ್‌ಮಾರ್ಕ್  ಇರುವುದನ್ನು ಗಮನಿಸಿ, ಇದರಿಂದ ಕ್ಲೂ ತೆಗೆದುಕೊಂಡು, ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದಾಗ ಎವಿಐ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ದೃಶ್ಯಗಳನ್ನು ಹೊಂದಿರುವ ಮೂಲ ವೀಡಿಯೊ ಲಭ್ಯವಾಗಿದೆ.  ಈ ದೃಶ್ಯಗಳು ವಾಸ್ತವವಾಗಿ ಮನರಂಜನಾ ಉದ್ದೇಶಕ್ಕಾಗಿ ಮಾಡಿದ ನಾಟಕೀಯ ವಿಡಿಯೋಗಳಾಗಿವೆ ಎಂದು ವಿಡಿಯೋ ವಿವರಣೆಯಲ್ಲಿ ಬರೆಯಲಾಗಿದೆ.

ಈ ನಿರ್ದಿಷ್ಟ ವೀಡಿಯೊವನ್ನು #maithilicomedy ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಂಯೋಜಿಸಲಾಗಿದೆ. ವೀಡಿಯೊದ ವಿವರಣೆಯಲ್ಲಿ ನಾಟಕದ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಮತ್ತು ವೀಡಿಯೊದ ವೇಳೆ ಮೇಕಿಂಗ್‌ನಲ್ಲಿ ಭಾಗಿಯಾಗಿದ್ದ ಎಲ್ಲ ನಟರು ಮತ್ತು ತಂತ್ರಜ್ಞರನ್ನು ಹೆಸರುಗಳನ್ನು ತೋರಿಸಲಾಗಿದೆ. ಇದೊಂದು ನಾಟಕದ ದೃಶ್ಯಗಳಾಗಿದ್ದು ನಾಟಕದ ಒಂದೆರಡು ದೃಶ್ಯಗಳನ್ನು ಮಾತ್ರ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.  ಈ ವಾಹಿನಿಯಲ್ಲಿ ಇಂತಹ ಹಲವು ಸ್ಕ್ರಿಪ್ಟ್ ನಾಟಕಗಳು ಲಭ್ಯವಿವೆ. ಹಾಗಾಗಿ ಈ ವೈರಲ್ ದೃಶ್ಯಗಳು ಯಾವುದೇ ನೈಜ ಘಟನೆಗೆ ಸಂಬಂಧಿಸಿಲ್ಲ.

ಇದಲ್ಲದೆ, ವಿಶ್ವಸ್ ನ್ಯೂಸ್‌ನೊಂದಿಗಿನ  ಸಂಪರ್ಕ ಮಾಡಿದಾಗ, AVI ಸಂಗೀತದ ನಿರ್ವಾಹಕರು ಈ ನಿರ್ದಿಷ್ಟ ವೈರಲ್ ವೀಡಿಯೊವನ್ನು ಮನರಂಜನಾ ಉದ್ದೇಶಗಳಿಗಾಗಿ ಅವರು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ನವವಿವಾಹಿತರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವಂತೆ ತೋರಿಸುವ ದೃಶ್ಯಗಳು ಸ್ಕ್ರಿಪ್ಟೆಡ್‌ ವೀಡಿಯೊ ಆಗಿದ್ದು ‘AVI ಮ್ಯೂಸಿಕ್’ ಈ ದೃಶ್ಯಗಳನ್ನು ಮನರಂಜನಾ ಉದ್ದೇಶಕ್ಕಾಗಿ ಚಿತ್ರೀಕರಿಸಲಾಗಿದೆ. ಅವರು ತಮ್ಮ YouTube ಚಾನಲ್‌ನಲ್ಲಿ  #ishikacomedy ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ವೀಡಿಯೊದ ಮೂಲ ಆವೃತ್ತಿಯನ್ನು ಹಂಚಿಕೊಳ್ಳಲಾಗಿದೆ. ಈ ದೃಶ್ಯಗಳು ಸ್ಕ್ರಿಪ್ಟ್ ಮಾಡಲಾದ ವಿಡಿಯೊ ಎಂದು ಸೂಚಿಸುತ್ತದೆ. ಈ ವಾಹಿನಿಯಲ್ಲಿ ಇಂತಹ ಹಲವು ಸ್ಕ್ರಿಪ್ಟ್ ನಾಟಕಗಳು ಲಭ್ಯವಿವೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ವ್ಯಾಪಾರಿ ಚರಂಡಿ ನೀರಿನಲ್ಲಿ ತರಕಾರಿ ತೊಳೆದದ್ದು ನಿಜವಲ್ಲ…


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.