ಫ್ಯಾಕ್ಟ್‌ಚೆಕ್: ದಕ್ಷಿಣ ಕೊರಿಯಾದ ಮಿಲಿಟರಿ ಪ್ರದರ್ಶನವನ್ನು, ಭಾರತದ್ದು ಎಂದು ತಪ್ಪಾಗಿ ಹಂಚಿಕೆ

ಸಶಸ್ತ್ರ ಪಡೆಗಳು ಯುದ್ಧ ಕಸರತ್ತನ್ನು ಪ್ರದರ್ಶಿಸುವ ವೀಡಿಯೊವನ್ನು ಭಾರತದ್ದು ಎಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. “ಇದೇ ನೋಡಿ ಭಾರತೀಯ ಸೇನೆಯ ತಾಕತ್ತು” ಎಂದು ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ವೈರಲ್ ಮಾಡಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ಕ್ಲಿಪ್‌ನಿಂದ ಕೀಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 28 ಸೆಪ್ಟೆಂಬರ್ 2017 ರಂದು ‘Arirang News‘ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಇದೇ ರೀತಿಯ ವೀಡಿಯೊವನ್ನು ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಶೀರ್ಷಿಕೆಯಲ್ಲಿ “ಕೊರಿಯಾದ 69 ನೇ ಸಶಸ್ತ್ರ ಪಡೆಗಳ ದಿನಾಚರಣೆ” ಎಂದು ಹೇಳಲಾಗಿದೆ.


ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತಷ್ಟು ಮಾಹಿತಿ ಪಡೆಯಲು ಎರಡೂ ವೀಡಿಯೊಗಳ ದೃಶ್ಯಗಳನ್ನು ಹೋಲಿಸಿದಾಗ ವೈರಲ್ ವೀಡಿಯೊದ ದೃಶ್ಯಗಳು, ಮೂಲ ವೀಡಿಯೊದೊಂದಿಗೆ ಹೆಚ್ಚು ಹೋಲಿಕೆಯನ್ನು ಹೊಂದಿದೆ. (1:38:24 ರಿಂದ 1:39:06 ವರೆಗೆ) ಮೂಲ ವಿಡಿಯೊದ ದೃಶ್ಯಗಳನ್ನು ವೇಗವಾಗಿ ಫಾರ್ವರ್ಡ್ ಮಾಡುವ ಮೂಲಕ ರಚಿಸಿ ಜೂಮ್-ಇನ್ ನಲ್ಲಿ ಎಡಿಟ್ ಮಾಡಿರುವುದು ಕಂಡುಬಂದಿದೆ. ಅಲ್ಲದೆ, ಕಸರತ್ತು ನಡೆಸುತ್ತಿರುವ ಸೈನಿಕರ ಸಮವಸ್ತ್ರದಲ್ಲಿ (ತೋಳಿನ ಭಾಗದಲ್ಲಿ) ಕೊರಿಯನ್ ಧ್ವಜವನ್ನು ಕಾಣಬಹುದು.

ಭಾರತೀಯ ಸೇನೆಯು (INDIAN ARMY)  ಬೇರೆ ಬೇರೆ ಸಂದರ್ಭದಲ್ಲಿ , ಯುದ್ದದ ಕಸರತ್ತಿನ ಪ್ರದರ್ಶನವನ್ನು ನಡೆಸುತ್ತದೆ, ಆದರೆ ಬೇರೆ ದೇಶದ ಸೇನಾ ದಿನಾಚರಣೆಯ ದೃಶ್ಯಗಳನ್ನು ಭಾರತದ್ದು ಎಂದು ಸುಳ್ಳು ಹೇಳಿಕೊಂಡು ವೈರಲ್ ಮಾಡುವ ಅವಶ್ಯಕತೆ ಏನಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಹಾಗಾಗಿ ವೈರಲ್ ವಿಡಿಯೋದಲ್ಲಿ ತೋರಿಸಲಾಗಿರುವ ವಿಡಿಯೋ ಭಾರತೀಯ ಸೇನೆಗೆ ಸಂಬಂಧಿಸಿದ್ದಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ದೃಶ್ಯಗಳು 28 ಸೆಪ್ಟೆಂಬರ್ 2017 ರಂದು ಆಚರಿಸಲಾದ 69 ನೇ ಕೊರಿಯನ್ ಸಶಸ್ತ್ರ ಪಡೆಗಳ ದಿನದಂದು ದಕ್ಷಿಣ ಕೊರಿಯಾದ ಮಿಲಿಟರಿ ಪ್ರದರ್ಶನಕ್ಕೆ ಸೇರಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಅಮೀರ್ ಖಾನ್ ತಮ್ಮ ಚಿತ್ರದ ಸೋಲಿನ ನಂತರ ಹಿಂದೂ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights