ಫ್ಯಾಕ್ಟ್‌ಚೆಕ್: ಅಮೀರ್ ಖಾನ್ ತಮ್ಮ ಚಿತ್ರದ ಸೋಲಿನ ನಂತರ ಹಿಂದೂ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು ನಿಜವೇ?

ಅಮೀರ್ ಖಾನ್ ಅಭಿನಯದ “ಲಾಲ್ ಸಿಂಗ್ ಚಡ್ಡಾ” ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಗಳಿಕೆ ಮಾಡಲು ವಿಫಲವಾಗಿದೆ. 180 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಚಿತ್ರವು ಮೊದಲ ವಾರ ಗಳಿಸಿದ್ದು ಕೇವಲ 56.70 ಕೋಟಿ ಮಾತ್ರ ಗಳಿಸಿದೆ. ಇದೇ ವೇಳೆ ನಟ ಮತ್ತು ನಿರ್ಮಾಪಕ ಅಮೀರ್ ಖಾನ್‌ ಹಿಂದೂ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಪೋಟೋವೊಂದು ವೈರಲ್ ಆಗಿದ್ದು, ಹಿಂದೆ ತಮ್ಮ ಸಿನಿಮಾಗಳಲ್ಲಿ ಹಿಂದೂ ದೇವರುಗಳನ್ನು ಟೀಕಿಸಿ ಈಗ ತಮ್ಮ ಚಿತ್ರ ಸೋಲುತ್ತಿರುವುದರಿಂದ, ಹಿಂದೂ ದೇವತೆಗಳ ಪೂಜೆ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗದೆ.

ಅಮೀರ್ ಖಾನ್ “ಆರತಿ” ಬೆಳಗುತ್ತಿರುವ ಫೋಟೋವನ್ನು ಹಂಚಿಕೊಂಡು, ಈಗ”ಅಮೀರ್ ಖಾನ್ ಪಾಠ ಕಲಿತಿದ್ದಾರೆ. ಅವರ ‘ಪಿಕೆ’ ಚಿತ್ರದಲ್ಲಿ ಪೂಜೆ ಮತ್ತು ಆಚರಣೆಗಳು ಕೇವಲ ದುಂದು ವೆಚ್ಚ ಎಂದು ಲೇವಡಿ ಮಾಡಿದ್ದರು. ಈಗ ಅವರೇ ಪೂಜೆ ಮಾಡುತ್ತಿದ್ದಾರೆ ಎಂದು ಹೇಳಿಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋವನ್ನು ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಬಾಲಿವುಡ್ ಹಂಗಾಮಾ ಪ್ರಕಟಿಸಿದ ಫೋಟೋ ಸ್ಟೋರಿಯೊಂದು ಲಭ್ಯವಾಗಿದೆ. ಆದರೆ ವೈರಲ್ ಫೋಟೋಗಳ ಮೂಲ ಫೊಟೋಗಳನ್ನು ಯಾವಾಗ ಸೆರೆಹಿಡಿಯಲಾಗಿದೆ ಎಂಬುದರ ಕುರಿತು ಗ್ಯಾಲರಿಯಲ್ಲಿ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ, ಈ ಫೋಟೋಗಳನ್ನು ಗುಜರಾತ್‌ನ ವಡೋದರಾದಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ತೆಗೆಯಲಾಗಿದೆ ಎಂದು ಉಲ್ಲೇಖಿಸಲಾಗಿದೆ.

ಫೋಟೋಗಳಿಗಾಗಿ ಮತ್ತಷ್ಟು ಸರ್ಚ್ ಮಾಡಿದಾಗ, ಸೆಪ್ಟೆಂಬರ್ 25, 2017 ರಂದು,  ANI ಸುದ್ದಿ ವಾಹಿಸಿಯು ಅಪ್‌ಲೋಡ್ ಮಾಡಿದ ವೀಡಿಯೊ ಕಂಡುಬಂದಿದ್ದು. ಅಲ್ಲಿ, ವಡೋದರಾ ನವರಾತ್ರಿ ಉತ್ಸವದಲ್ಲಿ ಅಮೀರ್‌ ಖಾನ್ ಆರತಿ ಮಾಡುತ್ತಿರುವುದನ್ನು ನೋಡಬಹುದು. ದುರ್ಗಾ ಪೂಜೆಯ ಸಂದರ್ಭದಲ್ಲಿ ಅಮೀರ್ ಖಾನ್ ಆರತಿ ಮಾಡಿ, ತಮ್ಮ ಮುಂದಿನ “ಸೀಕ್ರೆಟ್ ಸೂಪರ್‌ಸ್ಟಾರ್” ಚಿತ್ರಕ್ಕೆ ಪ್ರಚಾರ ಪ್ರಾರಂಭಿಸಿದರು ಎಂದು ವೀಡಿಯೊ ವರದಿಯಲ್ಲಿ ಉಲ್ಲೇಖಿಸಲಾಗಿದೆ..

ಇದೇ ರೀತಿಯ ವರದಿಯನ್ನು ಸೆಪ್ಟೆಂಬರ್ 25, 2017 ರಿಂದ ಡೆಕ್ಕನ್ ಕ್ರಾನಿಕಲ್‌ನಲ್ಲಿ ಕಂಡುಬಂದಿದೆ. ಈ ಘಟನೆ ನಡೆದು ಒಂದು ತಿಂಗಳ ನಂತರ ಅಮೀರ್‌ ಖಾನ್ ಅಭಿನಯದ “ಸೀಕ್ರೆಟ್ ಸೂಪರ್‌ಸ್ಟಾರ್” ಚಿತ್ರ ಬಿಡುಗಡೆಯಾಯಿತು ಎಂದು ವರದಿಯಾಗಿದೆ.

ವರದಿಯ ಪ್ರಕಾರ “ಲಾಲ್ ಸಿಂಗ್ ಚಡ್ಡಾ” ಚಿತ್ರಕ್ಕೆ ಭಾರತದಲ್ಲಿ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾದರೂ ಅಮೀರ್ ಖಾನ್ ಅಭಿನಯಕ್ಕೆ ವಿದೇಶದಿಂದ ಬಹುಪರಾಕ್ ಕೇಳಿ ಬರುತ್ತಿದೆ. ಪರಿಣಾಮ ಮೊದಲ 8 ದಿನಗಳಲ್ಲೇ ಚಿತ್ರದ ಕಲೆಕ್ಷನ್ 100 ಕೋಟಿಯನ್ನು ದಾಟಿದೆ. ಭಾರತದಲ್ಲಿ ಮೊದಲ ವಾರದಲ್ಲಿ ಕೇವಲ 59.68 ಕೋಟಿ ಕಲೆಕ್ಷನ್ ಮಾಡಿದ್ದ ಚಿತ್ರವು ವಿದೇಶದಲ್ಲಿ ಒಟ್ಟು 60 ಕೋಟಿಗೂ ಅಧಿಕ ಮೊತ್ತವನ್ನು ಬಾಚಿಕೊಂಡಿದೆ. ಈ ಮೂಲಕ 8 ದಿನಗಳಲ್ಲಿ 115 ಕೋಟಿಗೂ ಅಧಿಕ ಮೊತ್ತ ಗಳಿಸಿಕೊಂಡಿದೆ.

KFG 2 VS Laal Singh Chaddha: ಏ.14ರಂದು Yashಗೆ ಟಕ್ಕರ್​ ಕೊಡಲಿರುವ ​Aamir Khan

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಅಮೀರ್ ಖಾನ್ ಫೋಟೋಗೂ “ಲಾಲ್ ಸಿಂಗ್ ಚಡ್ಡಾ” ಬಾಕ್ಸ್ ಆಫೀಸ್ ವೈಫಲ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ಫೋಟೋ ಸುಮಾರು ಐದು ವರ್ಷಗಳಷ್ಟು ಹಳೆಯದಾಗಿದೆ ಮತ್ತು “ಲಾಲ್ ಸಿಂಗ್ ಚಡ್ಡಾ” ಚಿತ್ರದ ಸೋಲಿನಿಂದ ಈ ರೀತಿ ಅಮೀರ್‌ ಖಾನ್ ಪೂಜೆ ಮಾಡಿದ್ದಾರೆ ಎಂಬುದು ಸುಳ್ಳು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಚಡ್ಡಾ’ ಪರ ಘೋಷಣೆಯನ್ನು ವಿರುದ್ಧ ಪ್ರತಿಭಟನೆ ಎಂದು ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights