ದೇವಸ್ಥಾನಗಳಲ್ಲಿಲ್ಲ ರಾಮನವಮಿ ಸಂಭ್ರಮ : ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆಗೆ ಬ್ರೇಕ್

ಇವತ್ತು ರಾಮ ನವಮಿ ಇದೆ ಅನ್ನೋ ವಿಚಾರ ಅದೆಷ್ಟೋ ಜನಕ್ಕೆ ಗೊತ್ತೇ ಇಲ್ಲ. ಯಾಕಂದ್ರೆ ರಾಮನವಮಿ ಇರೋ ವಿಚಾರ ಗೊತ್ತಾಗೋದೇ ದೇವಸ್ಥಾನಗಳಲ್ಲಿ, ಮಠ, ಆಶ್ರಮಗಳ ಮುಂದೆ ಮಜ್ಜಿಗೆ, ಪಾನಕ, ಕೋಸಬಂರಿಯನ್ನು ಇಟ್ಟು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಆದರೆ ಕೊರೊನಾ ಬಿಸಿ ರಾಮನವಮಿಗೂ ತಟ್ಟಿದೆ. ಲಾಕ್ ಡೌನ್ ನಿಂದ ರಾಮನವಮಿ ಆಚರಣೆಗೆ ಬ್ರೇಕ್ ಬಿದ್ದಂತಾಗಿದೆ. ಇದರಿಂದಾಗಿ ಘಮ ಘಮಿಸುತ್ತಿದ್ದ ಮಜ್ಜಿಗೆ, ಪಾನಕ. ಕೋಸಂಬರಿಯನ್ನ ಜನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ದೇವಸ್ಥಾನಗಳಲ್ಲಿ ಸರಳವಾಗಿ ಪೂಜೆ ಮಾಡುವ ಮೂಲಕ ರಾಮನವಮಿ ಆಚರಿಸಲಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಯ ಪ್ರತಿಷ್ಠಿತ ದೇವಸ್ಥಾನಗಳು ಬಂದ್ ಆಗಿವೆ. ದಿನನಿತ್ಯದ ಪೂಜೆಗಳ ಹೊರತಾಗಿ ದೇವಸ್ಥಾನಗಳಿಗೆ ಯಾರೂ ಕೂಡ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಸ್ಥಳೀಯ ದೇವಸ್ಥಾನಗಳಲ್ಲಿ ಎಂದಿನಂತೆ ಪೂಜೆ ಮಾಡಲಾಗಿದ್ದು, ದೇವಸ್ಥಾನಗಳಿಗೆ ಜನ ಹೋಗುವುದು ಕೂಡ ನಿರ್ಬಂಧಿಸಲಾಗಿದೆ.

ಇನ್ನೂ ಸಿಲಿಕಾನ್ ಸಿಟಿಗೆ ಬಂದರೆ ಪ್ರತೀ ಬಾರಿ ರಾಮನವಮಿ ಭರ್ಜರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ರಾಮ ಮಂದಿರಗಳು ಹಾಗೂ ವೀರಾಂಜನೇಯ ದೇವಸ್ಥಾನಗಳನ್ನು ಬಂದ್ ಮಾಡಲಾಗಿದೆ. ಪ್ರಸಾದ್, ವಿಶೇಷ ಪೂಜೆ, ಮಜ್ಜಿಗೆ, ಪಾನಕ ಹಂಚಿಕೆಗೆ ಬ್ರೇಕ್ ಬಿದ್ದಿದೆ. ಹೀಗಾಗಿ ರಾಮನವಮಿ ಸರಳವಾಗಿ ಆಚರಿಸಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights