ಕೊರೊನಾ ನಿಯಮಗಳು ಸಾರ್ವಜನಿಕರಿಗೆ ಮಾತ್ರನಾ..? ಸಿಎಂ ಗೆ ಇಲ್ವಾ..?

ಲಾಕ್ ಡೌನ್ ಆದಾಗಿನಿಂದ ರಾಜ್ಯದ ಸಿಎಂ ಬಿ ಎಸ್ ಯಡಿಯೂರಪ್ಪ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದು ಅಂತರ ಕಾಯ್ದುಕೊಳ್ಳಿ, ಸರ್ಕಾರದ ನಿಯಮ ಪಾಲಿಸಿ, ಅನಾವಶ್ಯವಾಗಿ ಓಡಾಡಬೇಡಿ ಎಂದು.

ಆದರೆ ಹೇಳುವುದು ಶಾಸ್ತ್ರ ತಿನ್ನೋದು ಬದನೇಕಾಯಿ ಅನ್ನೋದಕ್ಕೆ ಸಿಎಂ ಇವತ್ತು ಸಾಕ್ಷಿಯಾಗಿದ್ದರು. ಅಶ್ವಥ್ ನಗರದಲ್ಲಿ ಇಂದು ಕೆಎಂಎಫ್ ನ ಹೆಚ್ಚುವರಿ ಹಾಲು ವಿತರಣಾ ಕಾರ್ಯಕ್ರಮದಲ್ಲಿ ಸಿಎಂ ಸೇರಿದಂತೆ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ, ಸಚಿವ ಶಿವರಾಮ್ ಹೆಬ್ಬಾರ್ ಭಾಗಿಯಾಗಿದ್ದರು. ಇವರಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಶಿವರಾಮ್ ಹೆಬ್ಬಾರ್ ಮುಖಕ್ಕೆ ಮಾಸ್ಕ್ ಹಾಕಿರಲಿಲ್ಲ. ಸಾಲದಕ್ಕೆ ಸಾರ್ವಜನಿಕರಿಂದ ಅಂತರ ಕೂಡ ಕಾಯ್ದುಕೊಂಡಿರಲಿಲ್ಲ. ಡಿಸಿಎಂ ಅಶ್ವತ್ಥ ನಾರಾಯಣ್ ಅವರಂತೂ ಮಾಸ್ಕ್ ನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಿದ್ದಾರೆ. ಜನತೆಗೆ ಜಾಗೃತಿ ಮೂಡಿಸಬೇಕಾದವರು ಹೀಗೆ ನಿರ್ಲಕ್ಷ್ಯ ತೋರಿದರ ಜನ ಸರ್ಕಾರದ ಆದೇಶಗಳನ್ನು ಹೇಗೆ ಪಾಲಿಸುತ್ತಾರೆ..? ಹೀಗೊಂದು ಸಣ್ಣ ಆಲೋಚನೆ ಪರಿವಿಲ್ಲದ ಸಿಎಂ ಹಾಗೂ ಡಿಸಿಎಂ ಬೇಜವಬ್ದಾರಿತನ ತೋರಿರುವುದು ಕಂಡುಬಂದಿದೆ.

ಇದೊಂದೆ ಪ್ರಕರಣ ಮಾತ್ರವಲ್ಲ. ಈ ಹಿಂದೆ ಸಿಎಂ ಯಡಿಯೂರಪ್ಪ ಕೊರೊನಾ ವೈರಸ್ ತಗಲುವ ಹಿನ್ನಲೆಯಲ್ಲಿ ಸಭೆ, ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎನ್ನುವ ಆದೇಶವನ್ನ ತಾವೇ ಹೊರಡಿಸಿ ಆಪ್ತರ ಮಗಳ ಅದ್ದೂರಿ ಮದುವೆಯಲ್ಲಿ ಪಾಲ್ಗೊಂಡಿದ್ದರು. ಹೀಗೇ ಕೊರೊನಾ ವಿಚಾರಕ್ಕೆ ಜನರಿಗೆ ಒಂದು ನಿಯಮ ರಾಜಕಾರಣಿಗಳಿಗೆ ಮತ್ತೊಂದು ನಿಯಮ ಎನ್ನುವಂತಾಗಿದೆ.

ಇದರಿಂದ ಜನ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಪ್ರಶ್ನಿಸಿದ್ದಾರೆ. ಯಾಕೆ ಹೀಗೆ ಅನ್ನೋದನ್ನ ಸಿಎಂ ಯಡಿಯೂರಪ್ಪ ನವರೇ ಇದಕ್ಕೆ ಉತ್ತರ ನೀಡಬೇಕು ಅಷ್ಟೇ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights