ದೀಪಾವಳಿಗೂ ಕೊರೊನಾ ಕರಿನೆರಳು : ಪಟಾಕಿ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ!

ಗಣೇಶ ಚತುರ್ಥಿ, ದಸರಾ ಹಬ್ಬದ ಆಚರಣೆಗೆ ಅಡ್ಡಿಯನ್ನುಂಟು ಮಾಡಿದ ಕೊರೊನಾ ಸದ್ಯ ದೀಪಾವಳಿಗೂ ಕೊರೊನಾ ಕರಿನೆರಳು ಆವರಿಸುವಂತೆ ಕಾಣುತ್ತಿದೆ.

ಕೊರೊನಾದಿಂದಾಗಿ ಸಾರ್ವಜನಿಕವಾಗಿ ಆಚರಿಸಲ್ಪಡುವ ಜಾತ್ರೆ, ಉತ್ಸವಗಳಿಗೆ ಬಹುತೇಕ ಕಡಿವಾಣ ಬಿದ್ದಿದೆ. ಹೀಗಾಗಿ ಗಣೇಶೋತ್ಸವ ಹಾಗೂ ದಸರಾ ಹಬ್ಬವನ್ನೂ ಸರಳವಾಗಿ ಆಚರಿಸಲಾಗಿದೆ. ದೀಪಾವಳಿ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಾಗುವಂತೆ ಕಾಣುತ್ತಿದೆ.

ಹೌದು… ಕೊರೊನಾ ರೋಗಿಗಳಿಗೆ ತೊಂದರೆಯಾಗುವ ಉದ್ದೇಶದಿಂದ ಈ ಬಾರಿ ಪಟಾಕಿ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಚಿತಂನೆ ನಡೆಸುತ್ತಿದೆಯಾದರೂ ಈ ನಿಟ್ಟಿನಲ್ಲಿ ಯಾವುದೇ ಅಧಿಕೃತ ನಿರ್ಧಾರವನ್ನು ಕೈಗೊಂಡಿಲ್ಲ.

ಪಟಾಕಿ ನಿಷೇಧದ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಈ ಬಗ್ಗೆ ಸಿಎಂ ಯಡಿಯೂರಪ್ಪ ಅಧಿಕೃತ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಈಗಾಗಲೇ ರಾಜಸ್ಥಾನದಲ್ಲಿ ಪಟಾಕಿ ನಿಷೇಧ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ದೆಹಲಿ ಸರ್ಕಾರ ಕಡಿಮೆ ಮಾಲಿನ್ಯ ಉಂಟುಮಾಡುವ ಪಟಾಕಿಗಳನ್ನಷ್ಟೇ ಉಪಯೋಗ ಮಾಡಲು ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲೂ ಪಟಾಕಿ ನಿಷೇಧಕ್ಕೆ ಚಿಂತನೆ ನಡೆಸಲಾಗುತ್ತಿದೆ.

ಪಟಾಕಿ ಸೃಷ್ಟಿಸುವ ವಾಯು ಮಾಲಿನ್ಯ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣ ಆಗಬಹುದು. ಮಾತ್ರವಲ್ಲದೇ ಕೊರೊನಾ ರೋಗಿಗಳಿಗೂ ಇದು ತೊಂದರೆಯಾಗಬಹುದು. ಈ ನಿಟ್ಟಿನಲ್ಲಿ ಪಟಾಕಿ ನಿಷೇಧ ಮಾಡುವುದು ಉತ್ತಮ ಎಂಬ ಸಲಹೆಗಳು ಸರ್ಕಾರಕ್ಕೆ ತಜ್ಞರು ನೀಡಿದ್ದಾರೆ. ತಜ್ಞರ ಸಲಹೆಗಳನ್ನು ಪರಿಗಣಿಸಿ ಪಟಾಕಿ ನಿಷೇಧದ ಕುರಿತಾಗಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಸೂಕ್ತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಇನ್ನು ನಿಯಂತ್ರಣಕ್ಕೆ ಬಂದಿಲ್ಲ. ನವಂಬರ್‌, ಡಿಸಂಬರ್‌ ಹಾಗೂ ಜನವರಿ ತಿಂಗಳುಗಳು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಮುಂಜಾಗರೂಕತಾ ಕ್ರಮವಾಗಿ ಸರ್ಕಾರ ಪಟಾಕಿ ನಿಷೇಧದ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.