ನಟಿ ಮೇಘನ ಬಗ್ಗೆ ಸುಳ್ಳು ಸುದ್ದಿ : ಯೂ ಟ್ಯೂಬ್ ಚಾನೆಲ್ ವಿರುದ್ಧ ಕಿಡಿ ಕಾರಿದ ಪ್ರಥಮ್!

ನಟಿ ಮೇಘನ ಮತ್ತೊಂದು ಮದುವೆಯಾಗುತ್ತಾರೆಂದು ಸುಳ್ಳು ಸುದ್ದಿ ಹರಡಿದ ಯೂ ಟ್ಯೂಬ್ ಚಾನೆಲ್ ವಿರುದ್ಧ ಬಿಗ್ ಬಾಸ್ ವಿನ್ನರ್ ಪ್ರಥಮ್ ಕಿಡಿ ಕಾರಿದ್ದಾರೆ.

ಹೌದು.. ಇತ್ತೀಚಿಗೆ ನಟ ದಿವಂಗತ ಚಿರಂಜೀವಿ ಸರ್ಜಾರನ್ನ ಕಳೆದುಕೊಂಡ ಪತ್ನಿ ಮೇಘನಾ ರಾಜ್ ಬಾಳಿನಲ್ಲಿ ಮಗ ರಾಯನ್ ರಾಜ್ ಆಶಾಕಿರಣವಾಗಿದ್ದಾನೆ. ಮಗನ ನಗುವಿಲ್ಲಿ ಮೇಘನಾ ಚಿರುವನ್ನ ಕಾಣುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಾಯನ್ ರಾಜ್ ಸರ್ಜಾ ಎಂದು ಜ್ಯೂನಿಯರ್ ಚಿರುವಿಗೆ ನಾಮಕಾರಣ ಕೂಡ ಮಾಡಲಾಯಿತು. ಕುಟುಂಬದಲ್ಲಿ ಸಂತಸ ತಂದಿರುವ ರಾಯನ್ ರಾಜ್ ಅಮ್ಮನ ಮಡಿಲಿನಲ್ಲಿ ಬೆಳೆಯುತ್ತಿದ್ದಾನೆ.

ಹೀಗಿರುವಾಗ ಯೂ ಟ್ಯೂಬ್ ಚಾನೆಲ್ ವೊಂದು ಮೇಘನಾ ರಾಜ್ ಸರ್ಜಾ ಮತ್ತೆ ಮದುವೆಯಾಗುತ್ತಾರೆನ್ನುವ ವದಂತಿಯನ್ನು ಹಬ್ಬಿಸಿದೆ. ಈ ವದಂತಿ ವಿರುದ್ಧ ಒಳ್ಳೆ ಹುಡುಗ ಪ್ರಥಮ್ ಕೆಂಡವಾಗಿದ್ದಾರೆ.  ಯೂ ಟ್ಯೂಬ್ ಚಾನೆಲ್ ನ ಸ್ಕ್ರೀನ್ ಶಾಟ್ ತೆಗೆದು ಮೇಘನಾ ಅವರಿಗೆ ಹಂಚಿಕೊಳ್ಳುವ ಮೂಲಕ ಇದರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ತಿಳಿಸಿದ್ದಾರೆ.

” ನಾನು ಇದನ್ನು ನೋಡಿ ಇಗ್ನೋರ್ ಮಾಡಬೇಕು ಅಂದುಕೊಂಡಿದ್ದೆ. ಆದರೆ ಒಂದು ದಿನದಲ್ಲಿ ಇದನ್ನು 2.70 ಜನ ವೀಕ್ಷಣೆ ಮಾಡಿದ್ದಾರೆ. ದುಡ್ಡಿಗಾಗಿ ಅಂತ ಮಟ್ಟಕ್ಕಿಳಿಯುವ ಈ ಯೂ ಟ್ಯೂಬ್ ಚಾನೆಲ್ ಇಳಿದಾಗ ಸ್ವಲ್ಪ ಕಾನೂನಾತ್ಮಕವಾಗಿ ನೋಡಬೇಕಾಗುತ್ತದೆ. ಇಂತಹ ಒಂದು ಚಾನೆಲ್ ಅನ್ನು ಕಾನೂನಾತ್ಮಕವಾಗಿ ಡಿಲಿಟ್ ಮಾಡಿಸಿದರೆ ಇನ್ನಷ್ಟು ಜನ ಎಚ್ಚೆತ್ತುಕೊಳ್ಳುತ್ತಾರೆಂದು” ಪ್ರಥಮ್ ಟ್ವೀಟ್ ಮಾಡಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights