Bigg Boss: ದಿವ್ಯಾ ಕೊಟ್ಟ ಉಂಗುರವನ್ನು ಕಳೆದುಕೊಂಡ ಅರವಿಂದ್ : ಮುಂದೇನಾಯ್ತು?

ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮಾಡುವ ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಪ್ರೀತಿಯಿಂದ ತಂದೆ ಕೊಟ್ಟ ಉಂಗುರವನ್ನು ದಿವ್ಯಾ ಉರುಡುಗ ಅರವಿಂದ್ ಗೆ ಹಾಕಿದ್ದಾರೆ. ಆದರೆ ಉಂಗುರ ಹಾಕಿ ಕೆಲವೇ ಗಂಟೆಯಲ್ಲಿ ಅರವಿಂದ ಅದನ್ನು ಕಳೆದುಕೊಂಡಿದ್ದಾರೆ.

ಹೌದು… ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜ ಹಾಗೂ ದಿವ್ಯ ಸುರೇಶ್ ಬಿಟ್ಟರೆ ಬೈಕ್ ರೇಸರ್ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರದ್ದೇ ಸದ್ದು. ಜೋಡಿ ಟಾಸ್ಕ್ ಬಳಿಕ ‘ಬಿಗ್ ಬಾಸ್’ ಮನೆಯೊಳಗೆ ಅರವಿಂದ್ ಹಾಗೂ ದಿವ್ಯಾ ಉರುಡುಗ ಆತ್ಮೀಯವಾಗಿದ್ದಾರೆ. ಮನೆಯ ಎಲ್ಲಾ ಸ್ಪರ್ಧಿಗಳು ಇವರಿಬ್ಬರ ನಡುವೆ ಏನೋ ಸಂಥಿಂಗ್ ಸಂಥಿಂಗ್ ಇದೇ ಅಂತಲೇ ಭಾವಿಸುತ್ತಿದ್ದಾರೆ. ಹೀಗಿರುವಾಗಲೇ, ಅರವಿಂದ್‌ಗೆ ದಿವ್ಯಾ ಉರುಡುಗ ಸೂಪರ್ ಸ್ಪೆಷಲ್ ಉಡುಗೊರೆಯೊಂದನ್ನು ಕೊಟ್ಟಿದ್ದು ಈ ಅನುಮಾನಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.

ತಮ್ಮ ತಂದೆ ನೀಡಿದ್ದ ಉಂಗುರವನ್ನು ಅರವಿಂದ್‌ಗೆ ದಿವ್ಯಾ ಉರುಡುಗ ಕೊಟ್ಟಿದ್ದಾರೆ. ಎಸ್… ಬಿಗ್ ಬಾಸ್ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನ ನೀಡಲಾಗಿತ್ತು. ಈ ಟಾಸ್ಕ್ ನಲ್ಲಿ ಹುಡುಗರು ಮನಸ್ಸು ಕದ್ದಿರುವ ಹುಡುಗಿಯರಿಗೆ ಬಲೂನ್ ನೀಡಬೇಕು ಜೊತೆಗೆ ಹುಡುಗಿಯರು ತಮ್ಮ ಸ್ವಂತದ ವಸ್ತುವನ್ನು ನೀಡಬೇಕು. ಈ ಟಾಸ್ಕ್ ನಲ್ಲಿ ಅರವಿಂದ್ ಪ್ರೀತಿ ಸಂಕೇತದ ಹಾರ್ಟ್ ಶೇಪ್ ಬಲೂನನ್ನು ದಿವ್ಯಾಳಿಗೆ ನೀಡಿದರೆ, ದಿವ್ಯಾ ತಮ್ಮ ತಂದೆ ಕೊಟ್ಟ ಉಂಗುರವನ್ನು ಅರವಿಂದ್ ಗೆ ಹಾಕಿದ್ದಾರೆ.

ಜೊತೆಗೆ ‘ಉಂಗುರ ತೊಡಿಸುವಾಗ ದಿವ್ಯಾ ಅರವಿಂದ್ ತಮಗೆ ತುಂಬಾನೇ ಸ್ಪಷಲ್ ಎಂದಿದ್ದಾರೆ.ಅರವಿಂದ್ ಲೈಫ್ ಟೈಮ್ ನನ್ನ ಜೊತೆಯಲ್ಲಿ ಇರಬೇಕು’ ಎಂದಿದ್ದಾರೆ. ಈ ವೇಳೆ ಇಬ್ಬರು ಭಾವುಕರಾದರು.

ಆದರೆ ಉಂಗುರು ಹಾಕಿದ ಕೆಲವೇ ಗಂಟೆಯಲ್ಲಿ ಅರವಿಂದ್ ಅದನ್ನು ಕಳೆದುಕೊಂಡಿದ್ದು ದಿವ್ಯಾ ಸೇರಿದಂತೆ ಮನೆಯ ಎಲ್ಲಾ ಸದಸ್ಯರಿಗೂ ನೋವನ್ನುಂಟು ಮಾಡಿತು. ದಿವ್ಯಾ ಅರವಿಂದ ಇಬ್ಬರೂ ಮನಸ್ಸಿಗೆ ತುಂಬಾನೇ ಬೇಸರ ಮಾಡಿಕೊಂಡು ಭಾವುಕರಾದರು. ಹೀಗಾಗಿ ಮನೆಯ ಎಲ್ಲಾ ಸದಸ್ಯರು ಉಂಗುರವನ್ನು ಹುಡುಕಿದರೂ ಉಂಗುರು ಸಿಗಲಿಲ್ಲ. ಆದರೆ ಕೊನೆಗೆ ಉಂಗುರ ಸಿಕ್ಕಿದ್ದು ಅರವಿಂದ್ ಬಳಿಯಲ್ಲೇ.

ಹೌದು.. ಅರವಿಂದ್ ಕ್ರೀಮ್ ಹಚ್ಚಿಕೊಳ್ಳುವಾಗ ಪ್ಯಾಂಟ್ ಒಳಗೆ ಉಂಗುರು ಸೇರಿಕೊಂಡಿತ್ತು. ಆದರೆ ಉಂಗುರ ಕೊಟ್ಟ ದಿನವೇ ಕಾಣಿಯಾಗಿದ್ದು ಎರಡು ಮನಸ್ಸಿಗೆ ಅಪಾರ ನೋವನ್ನುಂಟು ಮಾಡಿತು. ಕೊನೆಗೆ ಉಂಗುರ ಸಿಕ್ಕ ಕೂಡಲೇ ಇಬ್ಬರು ಒಬ್ಬರೊಬ್ಬರನ್ನು ತಪ್ಪಿಕೊಂಡು ಸಂತಸಗೊಂಡರು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights