ಹಾಸನ ನಗರಸಭೆ ಆಯುಕ್ತರ ಮೇಲೆ ಖಾಸಗಿ ಸ್ಕೂಲ್ ಮಾಲೀಕರಿಂದ ಹಲ್ಲೆ…!

ವ್ಯಾಕ್ಸಿನ್ ವಿಚಾರವಾಗಿ ಹಾಸನ ನಗರಸಭೆ ಆಯುಕ್ತರು ಮತ್ತು ಖಾಸಗಿ ಶಾಲಾ ಮಾಲೀಕರ ನಡುವೆ ಶುರುವಾದ ಜಗಳ ಕೈಕೈ ಮಿಲಾಸುವ ಹಂತಕ್ಕೆ ತಲುಪಿದೆ.

ಹಾಸನದ ಹೇಮಾವತಿ ನಗರದಲ್ಲಿ ಈ ಘಟನೆ ನಡೆದಿದೆ. ನಗರಸಭೆ ಆಯುಕ್ತ ಕೃಷ್ಣ ಮೂರ್ತಿ ಮೇಲೆ ಯತೀಂದ್ರ ಪಬ್ಲಿಕ್ ಸ್ಕೂಲ್ ಸಿಬ್ಬಂಧಿಗಳು ಹಲ್ಲೆ ಮಾಡಿದ್ದಾರೆ. ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜನರಿಗೆ ಲಸಿಕೆ ನೀಡಲು ಲಸಿಕಾ ಕೇಂದ್ರವನ್ನಾಗಿ ಯತೀಂದ್ರ ಪಬ್ಲಿಕ್ ಶಾಲೆಯನ್ನು ಬಳಸಲಾಗಿತ್ತು. ಆದರೆ 2 ಗಂಟೆ ಒಳಗೆ ಕಾರ್ಯಕ್ರಮ ಮುಗಿಸಲು ಖಾಸಗಿ ಸ್ಕೂಲ್ ಮಾಲೀಕರು ಹೇಳಿದ್ದಾರೆ.

ಆದರೆ 6 ಗಂಟೆವರೆಗೂ ಲಸಿಗೆ ನೀಡುವ ಪ್ಲ್ಯಾನ್ ಇದೆ ಎಂದಿದ್ದ ಆಯುಕ್ತರ ನಡುವೆ ವಾಗ್ವಾದವಾಗಿದ್ದು ಹಲ್ಲೆ ಮಾಡಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights