Fact check: ಉಕ್ರೇನ್ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡದಂತೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದರೆ?

ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಆಕ್ರಮಣದ ಮಧ್ಯೆ, ಸಿಎನ್‌ಎನ್ ನ್ಯೂಸ್ ನಲ್ಲಿ  ಪ್ರಸಾರವಾಗಿದೆ ಎನ್ನಲಾದ  ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸ್ಕ್ರೀನ್‌ಶಾಟ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಚಿತ್ರವಿದೆ, ಜೊತೆಗೆ “ಭಾರತ ಹಸ್ತಕ್ಷೇಪ ಮಾಡಬಾರದು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ”. ಎಂದು ಟ್ವಿಟರ್ ಬಳಕೆದಾರಾದ ಸೋನು ಮೆಹ್ರಾ ಈ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟ್ ಮಾಡಿದ್ದಾರೆ ಮತ್ತು ದೇಶದ ಮಾಧ್ಯಮಗಳು ರಷ್ಯಾದ ಅಧ್ಯಕ್ಷರನ್ನು ಬೆಂಬಲಿಸುತ್ತಿರುವಾಗ ಪುಟಿನ್ ಭಾರತಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅವರ ಟ್ವೀಟ್‌ಗೆ  3,000 ಲೈಕ್‌ಗಳು ಬಂದಿವೆ.

(ಟ್ವಿಟ್‌ ನಲ್ಲಿ ಮಾಡಿದ ಆರ್ಕೈವ್ ಅನ್ನು ಇಲ್ಲಿ ನೋಡಬಹುದು)

ಎರಡು ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ದದ ಸಂದರ್ಭದಲ್ಲಿ, ಅಲ್ಲಿನ ಜನ ಸಾಕಷ್ಟು ನೋವುಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ಟ್ವಿಟ್‌ಗಳು ರಷ್ಯಾದ ಅಧ್ಯಕ್ಷರು ಈ ರೀತಿ ಟ್ವೀಟ್ ಮಾಡಲು ಸಾಧ್ಯವಿದೆಯೇ? ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್:

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದಾಗ ನವೆಂಬರ್ 12, 2019 ರ ಮೂಲ CNN ವರದಿಯು ಲಭ್ಯವಾಗಿವೆ . ಆದರೆ ವೈರಲ್ ಸ್ಕ್ರೀನ್‌ಶಾಟ್‌ಗಿಂತ ಭಿನ್ನವಾದ ಹೇಳಿಕೆಗಳನ್ನು ಕಾಣಬಹುದು “2020 ರಲ್ಲಿ US ಚುನಾವಣೆಯಲ್ಲಿ ಮಧ್ಯಪ್ರವೇಶಿಸುವ ಬಗ್ಗೆ ರಷ್ಯಾದ ಉನ್ನತ ಅಧಿಕೃತ ಜೋಕ್‌ಗಳು” ಎಂದು ಹೇಳಲಾಗಿದ್ದು.

ಆ ವಾಕ್ಯಗಳ ಮೇಲೆ, ಅದು “ಪುಟಿನ್‌ನ ಹೊಸ ಪಂಚ್‌ಲೈನ್” ಎಂದು ಬರೆಯಲಾಗಿದೆ. ಆದರೆ ಸ್ಕ್ರೀನ್‌ಶಾಟ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, “ಭಾರತ ಹಸ್ತಕ್ಷೇಪ ಮಾಡಬಾರದು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ”. ಎಂದು ಹೇಳಿದ್ದಾರೆ ಎಂದು ಎಡಿಟ್ ಮಾಡುವ ಮೂಲಕ ಫೋಟೋವನ್ನು ತಿರುಚಲಾಗಿದೆ. ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಮೂಲ ಫೋಟೋವನ್ನು ತಪ್ಪು ಉಲ್ಲೇಖದೊಂದಿಗೆ ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.

ಪ್ರಸ್ತುತ ಭಾರತವು ರಷ್ಯಾದ ಪರವಾಗಿದ್ದು, ಹಿಂದಿನಿಂದ ಪಾಲಿಸಿಕೊಂಡು ಬಂದಿದ್ದ ಅಲಿಪ್ತ ನೀತಿಯನ್ನು ಭಾರತ ಮುಂದುವರೆಸಿದೆ. ಹಾಗಾಗಿ ವ್ಲಾಡಿಪಿರ್ ಪುಟಿನ್ ಭಾರತದ ಬಗ್ಗೆ ಆ ರೀತಿ ಹೇಳಿಕೆ ನೀಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು.

‘ದಿ ಲೀಡ್ ಸಿಎನ್‌ಎನ್’ ನವೆಂಬರ್ 12, 2019 ರಂದು ಟ್ವಿಟರ್‌ನಲ್ಲಿ ಮೂಲ ಸ್ಕ್ರೀನ್‌ಗ್ರಾಬ್ ಅನ್ನು ಟ್ವೀಟ್ ಮಾಡಿದೆ.

ಹೀಗಾಗಿ, ಉಕ್ರೇನ್ ಬಿಕ್ಕಟ್ಟಿನಲ್ಲಿ ಭಾರತ ಮಧ್ಯಪ್ರವೇಶಿಸದಂತೆ ರಷ್ಯಾ ಅಧ್ಯಕ್ಷರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂಬತೆ ಚಿತ್ರಿಸಲು CNN  ಪ್ರಸಾರ ಮಾಡಿರುವ ಫೋಟೋಗಳನ್ನು ಬಳಸಿ ಸ್ಕ್ರೀನ್‌ಶಾಟ್ ಅನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹರಡುವ ಮೂಲಕ ತಪ್ಪಾಗಿ ಪ್ರತಿಪಾದಿಸಲಾಗುತ್ತಿದೆ.


ಇದನ್ನು ಓದಿರಿ: Fact check: ಬಜರಂಗದಳದ ಹರ್ಷ ಹತ್ಯೆಯ ಆರೋಪಿಗಳನ್ನು ನನ್ನ ಬ್ರದರ್ಸ್ ಎಂದು ಡಿ.ಕೆ ಶಿವಕುಮಾರ್ ಹೇಳಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights