Fact Check: ಉಕ್ರೇನ್‌ ಜನರಿಗೆ ‘ಸಿಖ್ಖ್’ ಸಮುದಾಯ ಉಚಿತ ಆಹಾರ ನೀಡುತ್ತಿದೆ ಎಂಬ ಫೋಟೊ ವೈರಲ್

ಉಕ್ರೇನ್  ಮತ್ತು ರಷ್ಯಾ  ನಡುವೆ ನಡೆಯುತ್ತಿರುವ ಯುದ್ದದಿಂದ ಅಲ್ಲಿಯ ನಾಗರೀಕರಿಗೆ ಭಾರೀ ಸಂಕಷ್ಟ ಎದುರಾಗಿದೆ, ಈ ಕಷ್ಟದ ಸಮಯದಲ್ಲಿ ಸಿಖ್ಖರು ಉಕ್ರೇನ್‌ನಲ್ಲಿ ಲಂಗರ್ ನೀಡುತ್ತಿರುವುದನ್ನು ತೋರಿಸುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಲಂಗರ್ ಎಂದರೆ ದಾಸೋಹ ನಿಲಯ ಎಂಬ ಅರ್ಥ ಬರುತ್ತದೆ. ರಷ್ಯಾ ದಾಳಿಯಿಂದಾಗಿ  ಉಕ್ರೇನ್‌ನಲ್ಲಿ ಜನರು  ಮನೆ ಕಳೆದುಕೊಂಡು ಪರಿತಪ್ಪಿಸುತ್ತಿರುವ ಸಂದರ್ಭದಲ್ಲಿ ಸಿಖ್ಖರು ಅಲ್ಲಿಯ ಜನರಿಗೆ ಆಹಾರ ಒದಗಿಸುವ ಮೂಲಕ ಉಕ್ರೇನ್ ನಾಗರೀಕರ ನೆರವಿಗೆ ನಿಂತಿದೆ ಎಂದು ಹೇಳಿಕೊಳ್ಳುವ ಪೋಸ್ಟ್‌ ವೈರಲ್ ಆಗುತ್ತಿದೆ. ಹಾಗಾದರೆ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ರನ್ ಮಾಡಿದಾಗ, ಅದೇ ಫೋಟೋವನ್ನು ಈ ಹಿಂದೆ  ಡಿಸೆಂಬರ್ 2017 ರಲ್ಲಿ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಡಿರುವುದು  ಕಂಡುಬಂದಿದೆ. ಅಲ್ಲದೆ, ‘ವೀ ದಿ ಸಿಖ್ಸ್’ ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಪ್ರೊಫೈಲ್‌ಗಳಲ್ಲಿ 06 ಆಗಸ್ಟ್ 2018 ರಂದು ಅದೇ ಚಿತ್ರವನ್ನು ಅಪ್‌ಲೋಡ್ ಮಾಡಿದ್ದಾರೆ.  “ಕೆನಡಾದ ಮೊದಲ ಉಚಿತ ಆಹಾರ ಟ್ರಕ್ – ಗುರುನಾನಕ್ ದೇವ್ ಜಿಯವರ  LANGAR – ಗುಡ್ ಬೈ ಹಂಗರ್.” ಎಂದು ಬರೆದುಕೊಂಡಿದೆ.

ಇದಕ್ಕೂ ಮೊದಲು ಅಂದರೆ 2016ರಲ್ಲಿ  Indian desi food ಎಂಬ ಫೇಸ್‌ಬುಕ್ ಪೇಜ್ ನಲ್ಲಿಯೂ ಇದೇ ಫೋಟೋ ಶೇರ್ ಆಗಿರುವುದನ್ನು ಇಲ್ಲಿ ಗಮನಿಸಬಹುದು.

ಈ ಫೋಟೋದಲ್ಲಿ ಕಾಣುವ ಸಿಖ್ಖ ಮೊಬೈಲ್ ಕ್ಯಾಂಟೀನ್  ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಆ ದೃಶ್ಯಗಳಲ್ಲಿ ಕೆಲವನ್ನು  ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಅಲ್ಲದೆ, ಟ್ರಕ್‌ನಲ್ಲಿ ‘ಸಿಖ್ ಸೇವಾ ಸೊಸೈಟಿ ಟೊರೊಂಟೊ’ ಫೋನ್ ಸಂಖ್ಯೆಯನ್ನು ಕಾಣಬಹುದು.

ಇದೆಲ್ಲದರ ನಡುವೆ ಉಕ್ರೇನ್‌ನಿಂದ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳಿಗೆ ರೈಲಿನಲ್ಲಿ ಸಿಖ್ಖರು ಲಂಗರ್ ನೀಡುತ್ತಿರುವ ಬಗ್ಗೆ ಇತ್ತೀಚಿನ ವರದಿಗಳಿವೆ. ಆ ಸುದ್ದಿ ಲೇಖನಗಳನ್ನು ಇಲ್ಲಿ ಮತ್ತು ಇಲ್ಲಿ ಓದಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಪೋಸ್ಟ್ ನಲ್ಲಿ ತೋರಿಸಿದ ಲಂಗರ್ ಫೋಟೋ ಹಳೆಯದು ಮತ್ತು ಹಿಂದೆ ಕೆನಡಾದಲ್ಲಿ ನಡೆಯುತ್ತಿದ ಆಹಾರ ವಿತರಣಾ ಚಿತ್ರಕ್ಕೆ ಸಂಬಂಧಿಸಿದ್ದಾಗಿವೆ.  ಇದು  ಉಕ್ರೇನ್‌ಗೆ ಸಂಬಂಧಿಸಿಲ್ಲ.  ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿರಿ: Fact check: ಉಕ್ರೇನ್ ವಿಷಯದಲ್ಲಿ ಭಾರತ ಹಸ್ತಕ್ಷೇಪ ಮಾಡದಂತೆ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights