ದೆಹಲಿಯಲ್ಲಿ ಮಸೀದಿಯ ಕಾಂಪೌಂಡ್ ಕೆಡವಿದಕ್ಕೆ ಪ್ರತಿಯಾಗಿ ರಾಜಸ್ಥಾನದಲ್ಲಿ ಶಿವನ ದೇವಾಲಯ ಕೆಡವಲಾಗಿದೆ ಎಂಬುದು ಸುಳ್ಳು

ಇತ್ತೀಚೆಗೆ ದೆಹಲಿಯ ಜಹಾಂಗೀರ್‌ ಪುರಿಯಲ್ಲಿ  ಹನುಮ ಜಯಂತಿಯ ಮೆರವಣಿಗೆ ವೇಳೆ ಕೋಮುಗಲಭೆಗೆ ನಡೆದು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂಸಾಚಾರದ ನಂತರ, ಉತ್ತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ ಅಕ್ರಮ ಕಟ್ಟಡಗಳ ತೆರವ ಕಾರ್ಯಾಚರಣೆ ಹೆಸರಿನಲ್ಲಿ ಹಲವರ ಮನೆಗಳನ್ನು ಬುಲ್ಡೋಜರ್‌ಗಳಿಂದ ಧ್ವಂಸಗೊಳಿಸಿತ್ತು.

ಈ ಪ್ರದೇಶದಲ್ಲಿ ( ಸಿ-ಬ್ಲಾಕ್‌ನಲ್ಲಿ) ಹೆಚ್ಚು ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದವು ಮತ್ತು ಕೆಲವರು ಜೀವನ ನಿರ್ವಣೆಗಾಗಿ ಸಣ್ಣ ಪುಟ್ಟ ಅಂಗಡಿಗಳನ್ನು ನಡೆಸುತ್ತಿದ್ದರು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಯತಾಸ್ಥಿತಿ ಕಾಪಾಡಬೇಕೆಂದು ಆದೇಶಿಸಿತ್ತು, ಅದನ್ನು ಲೆಕ್ಕಿಸದೆ ತೆರವು ಕಾರ್ಯಾಚರಣೆ ನಡೆಸಿ ಮನೆ ಅಂಗಡಿಗಳೆಲ್ಲವನ್ನು ಧ್ವಂಸಗೊಳಿಸಿದ್ದಲ್ಲದೆ, ಜಾಮಾ ಮಸೀದಿಯ ಗೇಟ್ ಮತ್ತು ಕಾಂಪೌಂಡನ್ನು ಕೆಡವಿಹಾಕಿತ್ತು.

‘ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮಸೀದಿಯ ಕಾಂಪೌಂಡ್‌ ಅನ್ನು ಬುಲ್ಡೋಜರ್‌ನಿಂದ ಕೆಡವಿದ್ದಕ್ಕೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸೇಡು ತೀರಿಸಿಕೊಂಡಿದೆ. ಮಸೀದಿ ಗೋಡೆ ಕೆಡವಿದ್ದಕ್ಕೆ ಪ್ರತಿಯಾಗಿ ಅಲ್ವರ್‌ನಲ್ಲಿ ಕಾಂಗ್ರೆಸ್‌ ಸರ್ಕಾರವು, 300 ವರ್ಷದ ಹಳೆಯ ಶಿವ ದೇವಾಲಯವನ್ನು ಕೆಡವಿದೆ’ ಎಂಬ ವಿವರ ಇರುವ ಸುದ್ದಿಯು ಹಲವು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸುದ್ದಿ ಮಾಧ್ಯಮಗಳು ವರದಿ ಮಾಡಿದಂತೆ  ಜಹಾಂಗೀರ್‌ಪುರಿಯಲ್ಲಿ ಮಸೀದಿಯ ಕಾಂಪೌಂಡ್‌ ಹೊಡೆದುರುಳಿಸಿದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಂಡಿದೆ ಎಂಬ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others


ಫ್ಯಾಕ್ಟ್‌ಚೆಕ್:

ಬಿಜೆಪಿ ಮುಖಂಡರಾದ ಸಂಬಿತ್ ಪಾತ್ರಾ ಮತ್ತು ಗೌರವ್ ಭಾಟಿಯಾ ಅವರು ಸುದ್ದಿವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಇದೇ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆಜ್‌ತಕ್, ರಿಪಬ್ಲಿಕ್ ಟಿವಿ ಮತ್ತು ನ್ಯೂಸ್‌18 ಇಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದು, ಅವುಗಳ ವಿಡಿಯೊವನ್ನು ಟ್ವೀಟ್‌ ಮಾಡಿವೆ. ಆದರೆ, ಇದು ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.

 

Google ನಲ್ಲಿ ಕೀವರ್ಡ್ ಸರ್ಚ್ ನಡೆಸಿದಾಗ, ಆಜ್ ತಕ್ ಪ್ರಕಟಿಸಿದ ಲೇಖನ ಲಭ್ಯವಾಗಿದ್ದು. ಅಲ್ವರ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಅಂಗವಾಗಿ ಏಪ್ರಿಲ್‌ 17 ಮತ್ತು 18ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಶಿವ ದೇವಾಲಯವೂ ಸೇರಿ, ಹಲವು ಕಟ್ಟಡಗಳನ್ನು ಕೆಡವಲಾಗಿದೆ.

ಆದರೆ ಜಹಾಂಗೀರ್‌ಪುರಿಯಲ್ಲಿ ತೆರವು ಕಾರ್ಯಾಚರಣೆ ನಡೆದದ್ದು ಏಪ್ರಿಲ್‌ 20ರಂದು. ಅಲ್ವರ್ ಜಿಲ್ಲಾಡಳಿತವು ಈ ಕಾರ್ಯಾಚರಣೆಗೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಏಪ್ರಿಲ್‌ 18ರಂದು ಟ್ವೀಟ್‌ ಮಾಡಿದೆ. ಜಹಾಂಗೀರ್‌ಪುರಿ ಕಾರ್ಯಾಚರಣೆ ನಡೆಯುವುದಕ್ಕೂ ಮುನ್ನ ಅಲ್ವರ್‌ ಕಾರ್ಯಾಚರಣೆ ನಡೆದಿದೆ.

ಜಹಾಂಗೀರ್‌ಪುರಿ ಕಾರ್ಯಾಚರಣೆ ನಡೆಯುವುದಕ್ಕೂ ಮುನ್ನ ಅಲ್ವರ್‌ ಕಾರ್ಯಾಚರಣೆ ನಡೆದಿದೆ. ಹಾಗಾಗಿ ಅದು ಸೇಡಿನ ಕ್ರಮ ಎಂಬುದು ಸುಳ್ಳು. ಜತೆಗೆ ಅಲ್ವರ್ ನಗರಸಭೆಯಲ್ಲಿ ಬಿಜೆಪಿ ಆಡಳಿತವಿದೆ ಎಂದು ಕಾಂಗ್ರೆಸ್‌ ಮಾಹಿತಿ ನೀಡಿದೆ. ಸುಳ್ಳು ಸುದ್ದಿ ಪ್ರಸಾರ ಮಾಡಿದ ಸಂಬಂಧ ನ್ಯೂಸ್‌18 ನಿರೂಪಕ ಅಮನ್ ಛೋಪ್ರಾ ವಿರುದ್ಧ ರಾಜಸ್ಥಾನ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ’ ಎಂದು ಆಲ್ಟ್‌ ನ್ಯೂಸ್‌ ವಿವರಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ‘ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಮಸೀದಿಯ ಕಾಂಪೌಂಡ್‌ ಅನ್ನು ಬುಲ್ಡೋಜರ್‌ನಿಂದ ಕೆಡವಿದ್ದಕ್ಕೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸೇಡು ತೀರಿಸಿಕೊಂಡಿದೆ ಎಂಬುದು ಮಾಧ್ಯಮಗಳ ಸೃಷ್ಟಿ,  ಅಲ್ವರ್‌ನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಅಂಗವಾಗಿ ಏಪ್ರಿಲ್‌ 17 ಮತ್ತು 18ರಂದು ಅಂದರೆ ಜಹಾಂಗೀರ್‌ಪುರಿಯಲ್ಲಿ ನಡೆದ ಬುಲ್ಡೋಜ್ ಕಾರ್ಯಚರಣೆಗೂ ಮೊದಲೇ 20ನೇ ತಾರೀಖಿನಂದು ನಡೆಸಿದ ಕಾರ್ಯಾಚರಣೆಯಲ್ಲಿ ಶಿವ ದೇವಾಲಯವೂ ಸೇರಿ, ಹಲವು ಕಟ್ಟಡಗಳನ್ನು ಕೆಡವಲಾಗಿದೆ. ಹಾಗಾಗಿ ನ್ಯೂಸ್‌18 ಮಾಡಿರುವ ವರದಿ ಸುಳ್ಳು.

ಕೃಪೆ: ಆಲ್ಟ್‌ನ್ಯೂಸ್‌


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮೆಕ್ಕಾದಲ್ಲಿ 1480ರಲ್ಲಿ ಶಿವಲಿಂಗ ಇತ್ತು ಎಂಬುದು ನಿಜವಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.