FACT CHECK | ಬೈಕ್ ಸವಾರರು ಟೋಲ್ ಕಟ್ಟಬೇಕು ಎಂಬುದು ನಿಜವೇ?
ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎಂದು ಸುದ್ದಿಯೊಂದು ಹರಿದಾಡಿದೆ. ನಾಲ್ಕು ಚಕ್ರದ ವಾಹನಗಳಂತೆ ದ್ವಿಚಕ್ರ ವಾಹನದವೂ ಫಾಸ್ಟ್ಯಾಗ್ ಅಳವಡಿಸಿ, ಟೋಲ್ ಪಾವತಿ ಮಾಡಬೇಕು ಎಂಬರ್ಥದಲ್ಲಿ ಈ ಸುದ್ದಿಯಿದೆ.
![]()
ಹೊಸ ಕನ್ನಡ ಮತ್ತು ನ್ಯೂಸ್ ಕಡಬ ಎಂಬ ಎರಡು ವೆಬ್ಸೈಟ್ನಲ್ಲಿ ಈ ಕುರಿತ ವರದಿ ಮಾಡಿದ್ದು, ಇನ್ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯ ಈ ದಿನದಿಂದಲೇ ಜಾರಿಯಾಗಲಿದೆ ಎಂದಿದೆ. ಸುದ್ದಿಯ ಆರ್ಕೈವ್ ಮಾಡಿದ ಲಿಂಕ್ಅನ್ನು ಇಲ್ಲಿ ನೋಡಬಹುದು. ಹಾಗಿದ್ದರೆ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ನಲ್ಲಿ ಸರ್ಚ್ ಮಾಡಿದಾಗ, ಈ ಸುದ್ದಿ ಬಗ್ಗೆ ಕೆಲವು ಅಂತರ್ಜಾಲ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದರೂ, ಪ್ರಮುಖ ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂದಿಲ್ಲ. ಈ ಬಗ್ಗೆ ಇನ್ನಷ್ಟು ಸರ್ಚ್ ಮಾಡಿದಾಗ, ಎಕ್ಸ್ ನಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪೋಸ್ಟ್ವೊಂದು ಲಭ್ಯವಾಗಿದೆ.
महत्वपूर्ण
कुछ मीडिया हाऊसेस द्वारा दो-पहिया (Two wheeler) वाहनों पर टोल टैक्स लगाए जाने की भ्रामक खबरें फैलाई जा रही है। ऐसा कोई निर्णय प्रस्तावित नहीं हैं। दो-पहिया वाहन के टोल पर पूरी तरह से छूट जारी रहेगी। बिना सच्चाई जाने भ्रामक खबरें फैलाकर सनसनी निर्माण करना स्वस्थ…
— Nitin Gadkari (@nitin_gadkari) June 26, 2025
ಜೂನ್ 26, 2024ರ ಪೋಸ್ಟ್ ನಲ್ಲಿ ನಿತಿನ್ ಗಡ್ಕರಿ ಅವರು “ಕೆಲವು ಮಾಧ್ಯಮಗಳು ದ್ವಿಚಕ್ರ ವಾಹನಗಳ ಮೇಲೆ ಟೋಲ್ ತೆರಿಗೆ ವಿಧಿಸುವ ಬಗ್ಗೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುತ್ತಿವೆ. ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪಿಸಲಾಗಿಲ್ಲ. ದ್ವಿಚಕ್ರ ವಾಹನಗಳಿಗೆ ಟೋಲ್ನಲ್ಲಿ ಸಂಪೂರ್ಣ ವಿನಾಯಿತಿ ಮುಂದುವರಿಯುತ್ತದೆ. ಸತ್ಯವನ್ನು ತಿಳಿಯದೆ ದಾರಿತಪ್ಪಿಸುವ ಸುದ್ದಿಗಳನ್ನು ಹರಡುವ ಮೂಲಕ ಸಂಚಲನ ಮೂಡಿಸುವುದು ಆರೋಗ್ಯಕರ ಪತ್ರಿಕೋದ್ಯಮದ ಲಕ್ಷಣವಲ್ಲ. ಇದನ್ನು ನಾನು ಖಂಡಿಸುತ್ತೇನೆ.” ಎಂದು ಬರೆದಿರುವುದು ಕಂಡುಬಂದಿದೆ.
#FactCheck: Some sections of the media have reported that the Government of India plans to levy user fees on two-wheelers. #NHAI would like to clarify that no such proposal is under consideration. There are no plans to introduce toll charges for two-wheelers. #FakeNews
— NHAI (@NHAI_Official) June 26, 2025
ಜೂನ್ 26, 2025ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು “ಭಾರತ ಸರ್ಕಾರವು ದ್ವಿಚಕ್ರ ವಾಹನಗಳ ಮೇಲೆ ಬಳಕೆದಾರ ಶುಲ್ಕ ವಿಧಿಸಲು ಯೋಜಿಸುತ್ತಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. #NHAI ಅಂತಹ ಯಾವುದೇ ಪ್ರಸ್ತಾಪವು ಪರಿಗಣನೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕವನ್ನು ಪರಿಚಯಿಸುವ ಯಾವುದೇ ಯೋಜನೆಗಳಿಲ್ಲ.” ಎಂದಿದೆ.
Toll Charges for Two-Wheelers from July 15?
Here’s the Truth!
Several social media posts claim that two-wheelers will have to pay tolls on highways starting July 15, 2025.#PIBFactCheck
❌This claim is #Fake
✅@NHAI_Official has made NO such announcement
️There… pic.twitter.com/XFr4NtfxrZ
— PIB Fact Check (@PIBFactCheck) June 26, 2025
ಜೂನ್ 26, 2025ರಂದು ಪಿಐಬಿ ಫ್ಯಾಕ್ಟ್ ಚೆಕ್ ಕೂಡ ಎಕ್ಸ್ ನಲ್ಲಿ ಫ್ಯಾಕ್ಟ್ ಚೆಕ್ ಫಲಿತಾಂಶವನ್ನು ಪೋಸ್ಟ್ ಮಾಡಿದ್ದು ದ್ವಿಚಕ್ರವಾಹನಗಳಿಗೆ ಟೋಲ್ ವಿಧಿಸುವ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಹ ಯಾವುದೇ ನಿರ್ಧಾರ ಮಾಡಿಲ್ಲ ಎಂದಿದೆ. ಅಲ್ಲದೇ ಅಂತಹ ಯಾವುದೇ ಪ್ರಸ್ತಾಪಗಳೂ ಇಲ್ಲ ಎಂದು ಸ್ಪಷ್ಟವಾಗಿದೆ ಎಂದಿದೆ. ಈ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
ಒಟ್ಟಾರೆಯಾಗಿ ಹೇಳುವುದಾದರೆ, ಹೆದ್ದಾರಿ ಪ್ರಯಾಣಕ್ಕೆ ಇನ್ನು ಮುಂದೆ ಬೈಕ್ ಸವಾರರಿಗೂ ಟೋಲ್ ಅನ್ವಯವಾಗಲಿದೆ ಎನ್ನುವ ಸುದ್ದಿ ಸುಳ್ಳು. ಹಾಗಾಗಿ ಕೆಲವು ವೆಬ್ಸೈಟ್ಗಳಲ್ಲಿ ಮಾಡಲಾಗಿರುವ ವರದಿ ಸುಳ್ಳಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪ್ರಧಾನಿ ಮೋದಿ ಹೆಸರು ಟೋಕಿಯೋದಲ್ಲಿಯೂ ಮಿಂಚುತ್ತಿದಿಯೇ?

