ರಾಸಾಯನಿಕ ರಹಿತ ನೈಸರ್ಗಿಕವಾಗಿ ತಯಾರಿಸಿದ ಮಸಾಲೆ ಉತ್ಪನ್ನ “ವನಸ್ಥ” ಮಾರುಕಟ್ಟೆಗೆ!

ಕಲಬೆರಕೆ ಹಾಗೂ ರಾಸಾಯನಿಕ ಮುಕ್ತವಾದ ನೈಸರ್ಗಿಕವಾದ ಆಹಾರ ಪದಾರ್ಥಗಳು ಹಾಗೂ ಮಸಾಲೆಗಳ “ವನಸ್ಥಾ” ಮಸಾಲೆ ಉತ್ಪನ್ನವನ್ನು ವನಸ್ಥಾ ಆಗ್ರೋ ಫುಡ್ ಪ್ರೈ.ಲಿ. ಮಾರುಕಟ್ಟೆಗೆ ಬಿಟ್ಟಿದೆ.

ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ವನಸ್ಥಾ ಉತ್ಪನ್ನದ ರಾಯಭಾರಿಯಾಗಿ ನಟ ಶ್ರೀಯುತ ಶೈನ್ ಶೆಟ್ಟಿ ನಿಯೋಜನೆಯಾಗಿದ್ದು, ಉತ್ಪನ್ನವನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

“ಫಾಸ್ಟ್‌ ಫುಡ್‌ ಲೈಪ್‌ ನಲ್ಲಿ ಮರೆಯಾಗುತ್ತಿರುವ ಪಾರಂಪರಿಕ ರುಚಿಯನ್ನು ಮತ್ತೆ ಜನರ ಮುಂದೆ ತರುವ ವನಸ್ಥಾ ಸಂಸ್ಥೆಯ ಪ್ರಯತ್ನ ಮೆಚ್ಚುವಂಥದ್ದು. ಸಂಸ್ಥೆಯು ರಾಸಾಯನಿಕ ಮುಕ್ತವಾದಂತಹ ಅನೇಕ ಬಗೆ ಆಹಾರೋತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ಸಮಾಜದ ಆರೋಗ್ಯದ ದೃಷ್ಟಿಯಿಂದ ಉತ್ತಮ ಕೆಲಸವಾಗಿದೆ” ಎಂದು ಶೈನ್‌ ಶೆಟ್ಟಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಅವರನ್ನು ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ. ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ನಟರಾಜ್ ಕಲ್ಯಾಣಿ ಮತ್ತು ನಿರ್ದೇಶಕರಾದ ರಾಮ್_ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರರಾದ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕರಾದ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕರಾದ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಇದನ್ನೂ ಓದಿ: ಬಂಗಾಳದ 10 ಶಾಸಕರು bJPಗೆ ಸೇರ್ಪಡೆ; ಒಂಟಿಯಾದ ಮಮತಾ! ಅರಳುವುದೇ ಕಮಲ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights