ನನ್ನ ಅಜ್ಜಿಯನ್ನು ಸಿಖ್ಖರು ರಕ್ಷಿಸಿದ್ದರು, ನಾನು ಪಂಜಾಬ್‌ ಜನರ ಋಣ ತೀರಿಸಬೇಕಿದೆ: ರಾಹುಲ್‌ಗಾಂಧಿ

ಕೇಂದ್ರ ಸರ್ಕಾರ ಕೃಷಿ ನೀತಿಗಳ ವಿರುದ್ಧ ಪಂಜಾಬ್‌ನಿಂದ ದೆಹಲಿಯವರೆಗೆ ‘ಖೇತಿ ಬಚಾವೊ ಯಾತ್ರಾ’ಟ್ರ್ಯಾಕ್ಟರ್‌ ರ್ಯಾಲಿ ಮಾಡುತ್ತಿರುವ ರಾಹುಲ್‌ ಗಾಂಧಿ, ನಾನು ಪಂಜಾಬ್‌ ಜನರ ಋಣ ತೀರಿಸಬೇಕಿದೆ ಎಂದು ಹೇಳಿದ್ದಾರೆ.

ಪಂಜಾಬ್‌ ಜನರು ನನ್ನ ಕೆಲಸ-ಕಾರ್ಯಗಳನ್ನು ನೋಡಬೇಕು. ನಾನು ಮಾತುಗಳನ್ನಲ್ಲ. ನಾನು ಪಂಜಾಬ್‌ ಜನರಿಂದ ಸಾಕಷ್ಟು ಕಲಿತಿದ್ದೇನೆ. ಅವರ ಉತ್ಸಾಹ ಮತ್ತು ಧೈರ್ಯ ನನಗೆ ಬಹಳಷ್ಟು ಕಲಿಸಿದೆ. ನನ್ನ ಅಜ್ಜಿ (ಮಾಜಿ ಪ್ರಧಾನಿ ಇಂಧಿರಾಗಾಂಧಿ) 1977ರಲ್ಲಿ ಸೋತಾಗ ನಮ್ಮ ಮನೆಯಲ್ಲಿ ಯಾರೂ ಇರಲಿಲ್ಲ. ಆಗ ನನ್ನ ಅಜ್ಜಿಯೊಂದಿಗೆ ಸಾಥ್‌ಕೊಟ್ಟು ನಿಂತವರು ಸಿಖ್ಖರು. ನನ್ನ ಅಜ್ಜಿಯನ್ನು ಮನೆಯಲ್ಲಿ ರಕ್ಷಿಸಿದ್ದರು. ನಾನು ಪಂಜಾಬ್‌ ಜನರಿಗೆ ಋಣಿಯಾಗಿದ್ದೇನೆ ಎಂದು ರಾಹುಲ್‌ಗಾಂಧಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ನೀತಿಗಳು ರೈತರನ್ನು ಕಾರ್ಪೋರೇಟ್‌ ಶಕ್ತಿಗಳ ಕುಣಿಕೆಗೆ ದೂಡುತ್ತಿವೆ. ಇದರಿಂದಾಗಿ ರೈತರಿಗೆ ನ್ಯಾಯಯುತವಾದ ಬೆಂಬಲ ಬೆಲೆ ಸಿಗುವುದಿಲ್ಲ. ದೇಶದಲ್ಲಿ ಅಸ್ತಿತ್ವದಲ್ಲಿರುವ ಕೃಷಿ ರಚನೆಯನ್ನು ನಾಶ ಮಾಡುತ್ತದೆ. ರೈತರು ಬಂಡವಾಳಿಗರ ಗುಲಾಮರನ್ನಾಗಿಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

ಅಕಾಲಿ ದಳವು ಕಾಂಗ್ರೆಸ್‌ ನಾಯಕರ ವಿರುದ್ಧ ಎತ್ತಿದ್ದ, “ಮಸೂದೆಗಳು ಅಂಗೀಕಾರವಾದಾಗ ಅವರು ವಿದೇಶದಲ್ಲಿ ಏನು ಮಾಡುತ್ತಿದ್ದರು?” ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್‌ಗಾಂಧಿ, “ನನ್ನ ತಾಯಿ ವೈದ್ಯಕೀಯ ತಪಾಸಣೆಗಾಗಿ ಹೋಗಿದ್ದರು. ಪ್ರಿಯಾಂಕ ಗಾಂಧಿ ಅವರೊಂದಿಗೆ ಇದ್ದ ಕೆಲವು ಕಾರ್ಯಕರ್ತರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದರಿಂದಾಗಿ ಅವರು ತಾಯಿಯೊಂದಿಗೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ ನನ್ನ ತಾಯಿಯೊಂದಿಗೆ ನಾನು ಹೋಗಬೇಕಾಗಿ ಬಂತು. ಅದು ನನ್ನ ಕರ್ತವ್ಯ. ನಾನು ಅವರ ಮಗನಾಗಿದ್ದೇನೆ, ಅವರನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದಾರೆ.


Read Also: ಕಲ್ಲಿದ್ದಲು ಹಗರಣ: ಬಿಜೆಪಿ ಮಾಜಿ ಸಚಿವ ದಿಲೀಪ್‌ ರೇ ಅಪರಾಧಿ ಎಂದು ತೀರ್ಪಿತ್ತ ನ್ಯಾಯಾಲಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights