Fact Check: ಇನ್ಸ್ಟಾಗ್ರಾಮ್ ಬ್ಲಾಗರ್ ಕಿರ್ಜೈಡಾ ಅವರ ಕೊನೆ ಕ್ಷಣದ ಫೋಟೋ ತಪ್ಪಾಗಿ ಹಂಚಿಕೆ!

ತಲೆ ಕೂದಲು ತೆಗೆದ ಮಹಿಳೆಯ ಚಿತ್ರ ಪ್ರಸಿದ್ಧ ಇನ್ಸ್ಟಾಗ್ರಾಮ್ ಬ್ಲಾಗರ್ ಕಿರ್ಜೈಡಾ ರೊಡ್ರಿಗಸ್ ಅವರದ್ದು ಎಂದು ಹೇಳಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚಿತ್ರವನ್ನು ಕಿರ್ಜೈಡಾ ಜಗತ್ತಿಗೆ ನೀಡಿದ ಕೊನೆಯ ಸಂದೇಶವೆಂದು ಹೇಳಲಾದ ಪದಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಚಿತ್ರದ ಜೊತೆಗೆ ಶೀರ್ಷಿಕೆ ಹೀಗಿದೆ, “ಡೊಮಿನಿಕನ್ ರಿಪಬ್ಲಿಕ್ನ ಜನಪ್ರಿಯ ಇನ್ಸ್ಟಾಗ್ರಾಮ್ ಬ್ಲಾಗರ್ ಕಿರ್ಜೈಡಾ ರೊಡ್ರಿಗಸ್ ಹೊಟ್ಟೆಯ ಕ್ಯಾನ್ಸರ್ನೊಂದಿಗೆ 10 ತಿಂಗಳ ಯುದ್ಧದ ನಂತರ ನಿಧನರಾಗಿದ್ದಾರೆ. 40 ವರ್ಷದ ಬ್ಲಾಗರ್ಗೆ ಕಳೆದ ವರ್ಷ ನವೆಂಬರ್ನಲ್ಲಿ ನಾಲ್ಕನೇ ಹಂತದ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ಸುಮಾರು ಅರ್ಧ ಮಿಲಿಯನ್ ಫಾಲೋವರ್ಸ್ ಹೊಂದಿದ್ದ ಅವರು ತನ್ನ ಕೊನೆಯ ಪೋಸ್ಟ್ನಲ್ಲಿ ತನ್ನ ಅನುಯಾಯಿಗಳಿಗೆ ಜೀವನದಲ್ಲಿ ಪ್ರಮುಖ ವಿಷಯವೆಂದರೆ ಪ್ರೀತಿ ಎಂದು ಹೇಳಿದ್ದಾರೆ ” ಎಂದು ಬರೆದು ಪೋಸ್ಟ್ ಮಾಡಲಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯುಎ) ತನಿಖೆಯಲ್ಲಿ ವೈರಲ್ ಪೋಸ್ಟ್‌ನಲ್ಲಿರುವ ಮಹಿಳೆ ಕಿರ್ಜೈಡಾ ಅಲ್ಲ. ಆದರೆ 2017 ರಲ್ಲಿ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ‘ನಿಕೋಲ್ ಶ್ವೆಪ್ಪೆ’ ಎಂದು ಕಂಡುಹಿಡಿದಿದೆ. ಕಿರ್ಜೈಡಾ 2018 ರಲ್ಲಿ ಕ್ಯಾನ್ಸರ್ ಗೆ ಬಲಿಯಾಗಿದ್ದರು.

ಎಎಫ್‌ಡಬ್ಲ್ಯೂಎ ತನಿಖೆ

ಕಿರ್ಜೈಡಾ ತನ್ನ ಅಂತಿಮ ದಿನಗಳಲ್ಲಿಯೂ ಸಹ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರಿಯಳಾಗಿದ್ದಳು. ಕ್ಯಾನ್ಸರ್ ಜೊತೆಗಿನ ತನ್ನ 10 ತಿಂಗಳ ಯುದ್ಧದ ಬಗ್ಗೆಯೂ ಅವಳು ಮುಕ್ತಳಾಗಿದ್ದಳು.

ಅಂತರ್ಜಾಲದಲ್ಲಿ ಕೀವರ್ಡ್ ಹುಡುಕಾಟದೊಂದಿಗೆ ವೈರಲ್ ಪೋಸ್ಟ್ನಲ್ಲಿರುವ ಮಹಿಳೆ ಕಿರ್ಜೈಡಾ ಅಲ್ಲ ಎಂದು ನಾವು ಖಚಿತಪಡಿಸಲು ಸಾಧ್ಯವಾಯಿತು. ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ಗಳಲ್ಲಿ ಅವರ ಚಿತ್ರಗಳನ್ನು ಪರಿಶೀಲಿಸಿದಾಗ ಕಿರ್ಜೈಡಾ ಅಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಕಿರ್ಜೈಡಾ ಅವರ ಅಂತಿಮ ಪೋಸ್ಟ್‌ಗೆ ಸಂಬಂಧಿಸಿದ ಫೋಟೋ ಸಹ ನಾವು ಹುಡುಕಿದೆವು.

ಅವರ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ಗಳಲ್ಲಿ ನಮಗೆ ನಿಖರವಾದ ಪದಗಳು ಸಿಗದಿದ್ದರೂ, ಕಿರ್ಜೈಡಾ ಅವರ ಭಾವನಾತ್ಮಕ ವೀಡಿಯೊವನ್ನು 2018 ರಲ್ಲಿ ನೆಟಿಜನ್‌ಗಳು ಹಂಚಿಕೊಂಡಿದ್ದು, ಅದರಲ್ಲಿ ಅವರು ಕೊನೆಯ ದಿನಗಳ ಪದಗಳನ್ನು ಹಂಚಿಕೊಂಡಿದ್ದಾರೆ.

ವೀಡಿಯೊದಲ್ಲಿ ಕಿರ್ಜೈಡಾ “ನನ್ನ ಬಳಿ ಏನೂ ಮಾಡಲಾಗದ ಹೊಚ್ಚ ಹೊಸ ಕಾರು ಇದೆ. ನನಗೆ ಏನೂ ಮಾಡಲಾಗದ ಮಹಲು ಮನೆ ಇದೆ. ನಾನು ಇಷ್ಟಪಟ್ಟರೆ ಯಾವುದೇ ದಿನವಾದರೂ ವಿಮಾನವನ್ನು ತೆಗೆದುಕೊಳ್ಳಬಹುದು. ಆದರೆ ಅದು ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿಮ್ಮಲ್ಲಿಲ್ಲದ ವಿಷಯಗಳಿಗೆ ಯಾರಿಗೂ ಕೆಟ್ಟ ಭಾವನೆ ಮೂಡಿಸಲು ಬಿಡಬೇಡಿ. ಆದರೆ ನಿಮ್ಮಲ್ಲಿರುವ ವಸ್ತುಗಳು ನೋಡಿ ಸಂತೋಷವಾಗಿರಿ. ನೀವು ಅವುಗಳನ್ನು ಆನಂದಿಸುತ್ತೀರಿ ಪ್ರೀತಿಸಿ” ಎಂದು ಹೇಳಿದ್ದರು.

ವೀಡಿಯೊ ವೀಕ್ಷಿಸಿ ಇಲ್ಲಿ-

https://www.facebook.com/thelaureatewellness/videos/1161336954016462/?v=1161336954016462&external_log_id=71cab25c57d45ac57d771241660a6d11&q=Kyrzayda%20Rodriguez

ಕಿರ್ಜೈಡಾ ಅವರ ಕೊನೆಯ ಪದಗಳನ್ನು ಉಲ್ಲೇಖಿಸಿ ನಾವು ಹಲವಾರು ಲೇಖನಗಳನ್ನು ಕಂಡುಕೊಂಡಿದ್ದೇವೆ.

ವೈರಲ್ ಚಿತ್ರದಲ್ಲಿ ಮಹಿಳೆ:-

ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು, ವೈರಲ್ ಇಮೇಜ್‌ನಲ್ಲಿರುವ ಮಹಿಳೆಯನ್ನು ಯುನೈಟೆಡ್ ಸ್ಟೇಟ್ಸ್‌ನ ಬ್ಲಾಗರ್ ಮತ್ತು ಗ್ರಾಫಿಕ್ ಡಿಸೈನರ್ ನಿಕೋಲ್ ಶ್ವೆಪ್ಪೆ ಎಂದು ಗುರುತಿಸಲು ನಮಗೆ ಸಾಧ್ಯವಾಯಿತು.

ನಿಕೋಲ್ ಅವರ 2017 ರ ಬ್ಲಾಗ್‌ನಲ್ಲಿ “ನನ್ನ ಸ್ತನ ಕ್ಯಾನ್ಸರ್ ಪ್ರಯಾಣ, ಭಾಗ 2 – ಕೀಮೋಥೆರಪಿಗೆ ನಾನು ಹೇಗೆ ಸಿದ್ಧಪಡಿಸಿದೆ” ಎಂಬ ಶೀರ್ಷಿಕೆಯಲ್ಲಿ ನಾವು ಅದೇ ಚಿತ್ರವನ್ನು ಕಂಡುಕೊಂಡಿದ್ದೇವೆ.

ಇಬ್ಬರು ಮಕ್ಕಳು ತಾಯಿಯಾದ ನಿಕೋಲ್ ಅವರಿಗೆ 2017 ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಈ ಬ್ಲಾಗ್‌ನಲ್ಲಿ, ಅವರು ಕೀಮೋಥೆರಪಿಗೆ ಹೇಗೆ ಸಿದ್ಧರಾದರು ಎಂಬುದರ ಬಗ್ಗೆ ಬರೆಯುತ್ತಾರೆ.

ಆದ್ದರಿಂದ, ವೈರಲ್ ಚಿತ್ರ ದಿವಂಗತ ಫ್ಯಾಶನ್ ಬ್ಲಾಗರ್ ಕಿರ್ಜೈಡಾ ಅವರದ್ದಲ್ಲ. ಆದರೆ 2017 ರಲ್ಲಿ ಕ್ಯಾನ್ಸರ್ ರೋಗನಿರ್ಣಯ ಮಾಡಿದ ಇನ್ನೊಬ್ಬ ಮಹಿಳೆಯದ್ದು ಎಂಬುದು ಸ್ಪಷ್ಟವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights