ಕಳೆದ 14 ವರ್ಷಗಳಿಂದ ಈ ಕಾರಣದಿಂದ ದೀಪಾವಳಿ ಆಚರಿಸುತ್ತಿರುವ ಮುಸ್ಲಿಂ ಕುಟುಂಬ…

ಪ್ರಪಂಚದಾದ್ಯಂತ ವರ್ಷಗಳಿಂದ ಹಿಂದೂ-ಮುಸ್ಲಿಂ ಧರ್ಮದ ವಿರುದ್ಧ ಹೋರಾಡು ಘಟನೆಗಳು ಸಾಕಷ್ಟು ನಡೆದಿವೆ ನಡೆಯುತ್ತಲೂ ಇವೆ. ಆದರೆ ಈ ಮಧ್ಯೆ ಹೃದಯವನ್ನು ಸ್ಪರ್ಶಿಸುವ ಕೆಲವು ಕಥೆಗಳಿವೆ. ಇಂದು ನಾವು ನಿಮಗೆ ಇದೇ ರೀತಿಯ ಕಥೆಯ ಬಗ್ಗೆ ಹೇಳಲಿದ್ದೇವೆ. ಮಧ್ಯಪ್ರದೇಶದ ಭೋಪಾಲ್‌ನ ಬೆಟ್ಟದಲ್ಲಿರುವ ಜೈಲು ಆವರಣದಲ್ಲಿ ವಾಸಿಸುತ್ತಿರುವ ಇಕ್ಬಾಲ್ ಕುಟುಂಬ 14 ವರ್ಷಗಳ ಹಿಂದಿನಿಂದಲೂ ದೀಪಾವಳಿಯನ್ನು ಆಚರಿಸಿಕೊಂಡು ಬರುತ್ತಿದೆ.

ಮುಸ್ಲಿಂ ಕುಟುಂಬ ದೀಪಾವಳಿ ಹಬ್ಬವನ್ನು ಆಚರಿಸುವುದಕ್ಕೆ ಕಾರಣವೂ ಇದೆ. ಇಕ್ಬಾಲ್ ಕುಟುಂಬದಲ್ಲಿ 14 ವರ್ಷಗಳ ಹಿಂದೆ ಕಾರ್ತಿಕ್ ತಿಂಗಳಲ್ಲಿ ಧಂತೇರಸ್ ದಿನದಂದು ಅವಳಿ ಪುತ್ರರು ಜನಿಸಿದರು. ಪುತ್ರರ ಆಗಮನದಿಂದ ಕುಟುಂಬದ ಪ್ರತಿಯೊಬ್ಬರೂ ಸಂತೋಷವಾಗಿದೆ. ಈ ಸಂತಸದ ಪ್ರಯುಕ್ತ ಅಂದಿನಿಂದ ಈ ಮುಸ್ಲಿಂ ಕುಟುಂಬ ದೀಪಾವಳಿಯನ್ನು ಆಚರಿಸಲು ನಿರ್ಧರಿಸಿದೆ. ಇಕ್ಬಾಲ್ ಕುಟುಂಬ ಪ್ರತಿ ಬಾರಿಯೂ ದೀಪಾವಳಿಯನ್ನು ಆಚರಿಸುವುದರ ಜೊತೆಗೆ ಈದ್ ಆಚರಿಸಬೇಕೆಂದು ನಿರ್ಧರಿಸಿದ್ದರು. ಅಂದಿನಿಂದ ದೀಪಾವಳಿಯ ಹಬ್ಬವನ್ನು ಪ್ರತಿವರ್ಷ ಅವರ ಮನೆಯಲ್ಲಿ ಆಚರಿಸಲಾಗುತ್ತದೆ. ಅವರು ಈದ್ ಬಗ್ಗೆಯೂ ಅದೇ ಉತ್ಸಾಹವನ್ನು ಹೊಂದಿರುತ್ತಾರೆ. ಇವರ ಇಬ್ಬರ ಪುತ್ರರನ್ನು ಹ್ಯಾಪಿ ಮತ್ತು ಹನಿ ಎಂದು ಕರೆಯಲಾಗುತ್ತದೆ. ಇಕ್ಬಾಲ್ ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ.ಈ ವರ್ಷವೂ ಕುಟುಂಬ ದೀಪಾವಳಿಗೆ ಸಿದ್ಧವಾಗಿದೆ.

“ನಮ್ಮ ಮನೆಯಲ್ಲಿ ಧಂತೇರಸ್ ದಿನದಂದು ಅವಳಿ ಪುತ್ರರ ಜನನವಾಗಿದೆ. ಆದ್ದರಿಂದ ಈ ದಿನ ನಮಗೆ ವಿಶೇಷವಾಗಿದೆ” ಎಂದು ಅವಳಿ ಪುತ್ರರ ತಾಯಿ ರೇಶು ಅಹ್ಮದ್ ಹೇಳಿದ್ದಾರೆ. ಭಾರತದಲ್ಲಿ ಕೋಮು ಸೌಹಾರ್ದತೆಯ ಸಂಪ್ರದಾಯವಿದೆ. ಅದಕ್ಕಾಗಿಯೇ ನಾವು ಇಬ್ಬರ ಪುತ್ರರ ಜನ್ಮದಿನವನ್ನು ದಿನಾಂಕದ ಬದಲು ಧಂತೇರಸ್‌ನಲ್ಲಿ ಆಚರಿಸುತ್ತಿದ್ದೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಅವರು ತಮ್ಮ ಮನೆಯಲ್ಲಿ ಕುರಾನ್‌ನೊಂದಿಗೆ ಗೀತೆಯನ್ನು ಹೊಂದಿದ್ದಾರೆ. ಗಣೇಶ್,  ಲಕ್ಷ್ಮಿ, ಶಂಕರ್ , ದುರ್ಗಾ ಮಾ ಅವರ ಛಾಯಾಚಿತ್ರಗಳು ಮತ್ತು ಪ್ರತಿಮೆಗಳು ಇವೆ. ದೀಪಾವಳಿಯ ರಾತ್ರಿ, ಮನೆಯಲ್ಲಿ ಎಲ್ಲಾ ಪಟಾಕಿಗಳನ್ನು ಸಿಡಿಸಿ ಲಕ್ಷ್ಮಿ ದೇವಿಯನ್ನೂ ಪೂಜಿಸಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights