ಫ್ಯಾಕ್ಟ್‌ಚೆಕ್: ನೇಪಳದ ಕರೆನ್ಸಿ ನೋಟುಗಳಲ್ಲಿ ಗೌತಮ ಬುದ್ದನ ಫೋಟೊ ಇದೆಯೇ?

ನೇಪಾಳದ ಕರೆನ್ಸಿ ನೋಟಿನಲ್ಲಿ ಗೌತಮ ಬುದ್ದನ ಫೊಟೊವನ್ನು ಇರಿಸಲು ನೇಪಾಳ ಸರ್ಕಾರ ಕ್ರಮವಹಿಸಿದೆ ಎಂದು ಪ್ರತಿಪಾದಿಸಿ  ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಗೌತಮ ಬುದ್ಧನಿಗೆ ಗೌರವ ಸೂಚಿಸುವ ಸಲುವಾಗಿ ನೇಪಾಳ ಸರ್ಕಾರ ತನ್ನ ಕರೆನ್ಸಿಗಳಲ್ಲಿ ಗೌತಮ ಬುದ್ದನ ಚಿತ್ರವನ್ನು ಸೇರಿಸಿದೆ ಎಂದು ಹೇಳಲಾಗುತ್ತಿದೆ.

ಫೇಸ್‌ಬುಕ್ ಬಳಕೆದಾರ ಅರುಣ್ ಜಾತವ್ ಫೆಬ್ರುವರಿ 15 ರಂದು ನೇಪಾಳದ ಕರೆನ್ಸಿಯ ಹೆಸರಿನಲ್ಲಿ ಎರಡು ಚಿತ್ರಗಳ ಕೊಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ, ‘ನಾನು ನೇಪಾಳ ದೇಶಕ್ಕೆ ನನ್ನ ಧನ್ಯವಾದ ಹೇಳುತ್ತೇನೆ. ನೇಪಾಳ ಸರ್ಕಾರ ಗೌತಮ ಬುದ್ಧನನ್ನು ತನ್ನ ನೋಟುಗಳಲ್ಲಿ ಸೇರಿಸಿದೆ. ನಮೋ ಬುದ್ಧಾಯ । ಜೈ ಭೀಮ್ ಅರುಣ್ ಜಾತವ್ ಬಿಎಸ್ಪಿ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಾಗಿದ್ದರೆ ಈ ಪೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಹಲವು ವೆಬ್‌ಸೈಟ್‌ಗಳಲ್ಲಿ ಪ್ರಕಟವಾದ ಹಳೆಯ ಸುದ್ದಿಗಳು ಲಭ್ಯವಾಗಿದೆ. ಸೆಪ್ಟೆಂಬರ್ 9, 2013 ರಂದು, ಡ್ಯಾನ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸುದ್ದಿಯು ಸೆಂಟ್ರಲ್ ಬ್ಯಾಂಕ್ ಆಫ್ ನೇಪಾಳವು 100 ರೂಪಾಯಿಯ ಹೊಸ ನೋಟನ್ನು ಚಲಾವಣೆಗೆ ತರಲು ನಿರ್ಧರಿಸಿದೆ ಎಂದು ವರದಿ ಮಾಡಿದೆ.

vishvasnews

 

vishvasnews

ಮತ್ತಷ್ಟು ಮಾಹಿತಿ ಪಡೆಯಲು ನೇಪಾಳ ರಾಷ್ಟ್ರ ಬ್ಯಾಂಕ್‌ನ ವೆಬ್‌ಸೈಟ್ ಅನ್ನು ಸರ್ಚ್ ಮಾಡಿದಾಗ, ನೇಪಾಳದ ನೋಟುಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ನೇಪಾಳದಲ್ಲಿ ಚಾಲ್ತಿಯಲ್ಲಿರುವ 100, 500 ಮತ್ತು 1000 ರೂಪಾಯಿ ನೋಟುಗಳ ಚಿತ್ರಗಳಲ್ಲಿ ಗೌತಮ ಬುದ್ಧನ ಚಿತ್ರ ಎಲ್ಲೂ ಕಾಣಿಸುವುದಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು, ವಿಶ್ವಸ್ ನ್ಯೂಸ್ ನೇಪಾಳ ರಾಷ್ಟ್ರ ಬ್ಯಾಂಕ್‌ನ ಮಾಹಿತಿ ಅಧಿಕಾರಿ ನಾರಾಯಣ ಪ್ರಸಾದ್ ಪೋಖ್ರೆಲ್ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿರುವ ಸುದ್ದಿ ನಕಲಿಯಾಗಿದ್ದು, ಇಂತಹ ಯಾವುದೇ ತೀರ್ಮಾನಗಳನ್ನು ನೇಪಾಳ ಸರ್ಕಾರ ಮಾಡಿಲ್ಲ ಎಂದು ತಿಳಿಸಿದ್ದಾರೆ.

vishvasnews

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.  ಆದರೆ ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಂತೆ ಪ್ರಸ್ತುತ ಚಲಾವಣೆಯಲ್ಲಿರುವ ಯಾವುದೇ ನೋಟುಗಳಲ್ಲಿ ಗೌತಮ ಬುದ್ದನ ಚಿತ್ರವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ವಿಶ್ವಾಸ್‌ ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವ್ಯಕ್ತಿಯೊಬ್ಬನ ಕೈ ಬೆರಳುಗಳನ್ನು ಕತ್ತರಿಸುವ ವಿಡಿಯೋ ವೈರಲ್! ಕೈ ಬೆರಳನ್ನು ಕತ್ತರಿಸಿದ್ದು ಖಲಿಸ್ತಾನಿಗಳೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights