ವಿಶ್ವ ದಾಖಲೆ ಬರೆದ ಧೋನಿ: 300 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಮೊದಲ ನಾಯಕ!

ಮಾಜಿ ಟೀಂ ಇಂಡಿಯಾ ನಾಯಕ ಎಂ ಎಸ್‌ ಧೋನಿ ಅವರು ಟಿ 20 ಕ್ರಿಕೆಟ್‌ ನಾಯಕತ್ವದಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕರಾಗಿ ಮಿಂಚುತ್ತಿರುವ ಅವರು ಟಿ20 ಕ್ರಿಕೆಟ್ ನಲ್ಲಿ 300 ಪಂದ್ಯಗಳಿಗೆ ನಾಯಕರಾಗಿ ತಂಡವನ್ನು ಮುನ್ನಡೆಸಿರುವ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಐಪಿಎಲ್ 14ನೇ ಆವೃತ್ತಿಯ ಫೈನಲ್‌ನಲ್ಲಿ ಸಿಎಸ್‌ಕೆ ತಂಡ ಸೆಣೆಸಾಡಿತ್ತು. ಈ ಪಂದ್ಯವು ಧೋನಿಯವರು ನಾಯಕತ್ವ ವಹಿಸಿದ್ದ 300ನೇ ಪಂದ್ಯವಾಗಿತ್ತು. ಅವರು ಟಿ20 ನಾಯಕತ್ವ ಬಹಿಸಿದ್ದ 300ನೇ ಪಂದ್ಯದಲ್ಲಿಯೂ ಅವರ ತಂಡ ಗೆಲುವು ಸಾಧಿಸಿರುವುದು ಅವರಿಗೆ ಮತ್ತೊಂದು ಹೆಗ್ಗಳಿಕೆ ತಂದಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 12 ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ ಧೋನಿ 9 ನೇ ಫೈನಲ್ ಆಡಿದ್ದಾರೆ. ಎರಡು ಆವೃತ್ತಿಗಳಲ್ಲಿ ಪುಣೆ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸಿದ್ದ ಅವರು 1 ವರ್ಷ ನಾಯಕರಾಗಿದ್ದರು.

6 ಟ್ವೆಂಟಿ ವಿಶ್ವಕಪ್ ಟೂರ್ನಿಗಳಲ್ಲಿ ಧೋನಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಧೋನಿ ನಾಯಕತ್ವದಲ್ಲಿ 2017 ರಲ್ಲಿ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು.

ನಾಯಕನಾಗಿ 8ನೇ ಟಿ20 ಟ್ರೋಫಿ ಗೆದ್ದ ಧೋನಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ. 4 ಐಪಿಎಲ್, 3 ಚಾಂಪಿಯನ್ಸ್ ಲೀಗ್, 1 ವಿಶ್ವಕಪ್ ಮತ್ತು 1 ಏಷ್ಯಾಕಪ್ ಟಿ20 ಟ್ರೋಫಿ ಗೆದ್ದಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ನ ಡರೆನ್ ಸ್ವಾಮಿ ಅವರು 208 ಟಿ20 ಪಂದ್ಯಗಳಲ್ಲಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಅಂತಾರಾಷ್ಟ್ರೀಯ ಶೂಟಿಂಗ್‌‌ ಸ್ಪರ್ಧೆ: ಭಾರತದ ಮಹಿಳಾ ತಂಡಕ್ಕೆ ಚಿನ್ನದ ಪದಕ!

Spread the love

Leave a Reply

Your email address will not be published. Required fields are marked *