ಅಂತಾರಾಷ್ಟ್ರೀಯ ಶೂಟಿಂಗ್‌‌ ಸ್ಪರ್ಧೆ: ಭಾರತದ ಮಹಿಳಾ ತಂಡಕ್ಕೆ ಚಿನ್ನದ ಪದಕ!

ಪೆರುವಿನ ರಾಜಧಾನಿಯಾದ ಲಿಮಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಶೂಟಿಂಗ್‌‌ ಸ್ಪೋರ್ಟ್ಸ್ ಫೆಡರೇಶನ್ (ಐಎಸ್‌ಎಸ್‌ಎಫ್) ಜೂನಿಯರ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ತಂಡವು ಚಿನ್ನದ ಪದಕ ಗೆದ್ದಿದೆ.

ಗುರುವಾರ ನಡೆದ ಪಂದ್ಯದಲ್ಲಿ ದೇಶದ ಮಹಿಳಾ ತಂಡದ ಮನು ಭಾಕರ್, ರಿದಮ್ ಸಾಂಗ್ವಾನ್ ಮತ್ತು ನಾಮ್ಯಾ ಕಫೂರ್‌‌ ಅವರ ತಂಡವು 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಇದನ್ನೂ ಓದಿ: ಶುರುವಾಗ್ತಿದೆ ಪ್ರೊ ಕಬಡ್ಡಿ; ಡಿ. 22ರಿಂದ ಕ್ರೀಡೆಗೆ ಬೆಂಗಳೂರಿನಲ್ಲಿ ಅಖಾಡ ರೆಡಿ!

ಪಂದ್ಯಾಟದಲ್ಲಿ ಭಾರತ ತಂಡವು ಅಮೆರಿಕಾ ಎ ತಂಡವನ್ನು 16-4 ಅಂಕದಿಂದ ಸೋಲಿಸಿದೆ.

https://twitter.com/OfficialNRAI/status/1445973219542851587

ಭಾರತ ತಂಡದ  ಮನು ಭಾಕರ್ ಅವರು, ಪ್ರಸ್ತುತ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಮುಡಿಗೇರಿಸಿಕೊಳ್ಳುತ್ತಿರುವ ನಾಲ್ಕನೇ ಚಿನ್ನವಾಗಿದೆ ಇದು.

ತಂಡದ ಮತ್ತೊಬ್ಬ ಸದಸ್ಯರಾಗಿರುವ ನಮ್ಯಾ ಕಫೂರ್‌‌ ಅವರು ನಡೆಯುತ್ತಿರುವ ಚಾಂಪಿಯನ್‌ಶಿಪ್‌ ಪಂದ್ಯಾಟದಲ್ಲಿ ಎರಡು ಚಿನ್ನವನ್ನು ದಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ: MICO FMSCI National Karting : ಬೆಂಗಳೂರಿನ ಮೂರು ರೇಸರ್‌ಗಳಿಗೆ ಪ್ರಶಸ್ತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights