ನಟಿ ಮಾಲಾಶ್ರೀ ಪತಿ ರಾಮು ಕೊರೊನಾಗೆ ಬಲಿ…!

ಕನ್ನಡ ಕನಸಿನ ರಾಣಿ ಮಾಲಾಶ್ರೀ ಗಂಡ ರಾಮು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಮಾಲಾಶ್ರೀ ಅವರ ಪತಿಯಾಗಿರುವ ರಾಮು ಕೋಟಿ ನೀರ್ಮಾಪಕ ಎಂದೇ ಸ್ಯಾಂಡಲ್ ವುಡ್ ನಲ್ಲಿ ಹೆಸರುಗಳಿಸಿದ್ದರು.

ಸೋಂಕಿನಿಂದ ಬಳಲುತ್ತಿದ್ದ 52 ವರ್ಷದ ರಾಮು ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟ ಸಮಸ್ಯೆ ಹೆಚ್ಚಾಗಿ ಅವರು ಸಾವನ್ನಪ್ಪಿದ್ದಾರೆ. ರಾಮು ಅವರಿಗೆ ಕಳೆದೊಂದು ವಾರದ ಹಿಂದೆ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ರಾಮು ಅವರು ಪತ್ನಿ, ಮಗ ಮತ್ತು ಮಗಳನ್ನು ಅಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 39 ಚಿತ್ರಗಳನ್ನು ನಿರ್ಮಿಸಿದ್ದಾರೆ. ಗೋಲಿಬಾರ್ ಚಿತ್ರದ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. ಇನ್ನು ಮೊದಲಿಗೆ ಕನ್ನಡದಲ್ಲಿ ಕೋಟಿ ಬಜೆಟ್ ನಲ್ಲಿ ಚಿತ್ರ ನಿರ್ಮಿಸಿದ್ದರಿಂದ ಅವರಿಗೆ ಕೋಟಿ ರಾಮು ಎಂದು ಹೆಸರು ಬಂದಿತ್ತು.

ಎಕೆ 47, ಲಾಕಪ್ ಡೆತ್, ಕಲಾಸಿಪಾಳ್ಯ, ಸಿಬಿಐ ದುರ್ಗಾದಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದರು. 90ರ ದಶಕದಲ್ಲಿಯೇ ದುಬಾರಿ ಬಜೆಟ್ ಚಿತ್ರಗಳನ್ನು ನಿರ್ಮಿಸಿದ್ದ ರಾಮು ಅವರು ಕನ್ನಡ ಚಿತ್ರರಂಗದಲ್ಲಿ ಕೋಟಿ ರಾಮು ಎಂದೇ ಜನಪ್ರಿಯರಾಗಿದ್ದರು.

ನಟಿ ಮಾಲಾಶ್ರೀ ಅವರನ್ನು ರಾಮು ಪ್ರೀತಿಸಿ ಮದುವೆಯಾಘಿದ್ದರು. ಇವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights