ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಫಿಕ್ಸ್..!
ರಾಜ್ಯದಲ್ಲಿ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ಮತದಾನದ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 30 ನೇ ತಾರೀಖು ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ನವೆಂಬರ್ 2 ನೇ ತಾರೀಖು ಮತ ಎಣಿಕೆ ನಡೆಯಲಿದೆ.
ಹಿರಿಯ ಶಾಸಕ ಎಂ.ಸಿ ಮನಗೂಳಿ ನಿಧನದಿಂದಾಗಿ ತೆರವಾದ ಸಿಂದಗಿ ವಿಧಾನಸಭೆ ಕ್ಷೇತ್ರಕ್ಕೆ ಹಾಗೂ ಮಾಜಿ ಸಚಿವ ಸಿಎಂ ಉದಾಸಿ ಅವರ ನಿಧಾನದಿಂದ ಹಾನಗಲ್ ಕ್ಷೇತ್ರ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧವಾಗಿವೆ.
ಒಂದು ಕ್ಷೇತ್ರ ಬಿಜೆಪಿ, ಕಾಂಗ್ರೆಸ್ ವಶದಲ್ಲಿತ್ತು. ಸದ್ಯ ಉಪಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಸಕಲ ಸಿದ್ಧತೆ ಆರಂಭಿಸಿವೆ.