ಕಾಬೂಲ್ ನಲ್ಲಿ ಕರುಳು ಹಿಂಡೋ ದೃಶ್ಯ : ಪುಟ್ಟ ಮಕ್ಕಳನ್ನು ಅಮೇರಿಕ ಯೋಧರ ಕೈಗಿಡುತ್ತಿರುವ ಜನ!

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ನಿಂತ ಆಫ್ಫನ್ ರು ತಮ್ಮ ಮಕ್ಕಳನ್ನು ರಕ್ಷಿಸುವಂತೆ ಯುಎಸ್ ಸೈನಿಕರಿಗೆ ನೀಡುತ್ತಿರುವ ಕರುಳು ಹಿಂಡೋ ದೃಶ್ಯಗಳು ವೈರಲ್ ಆಗಿದೆ.

ಹೌದು… ತಾಲಿಬಾನ್ ಉಗ್ರರು ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ನಂತರ ಅಲ್ಲಿನ ಜನ ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಹಾರುತ್ತಿರುವ ವಿಮಾನವನ್ನು ಬಸ್ ಹಿಂದೆ ಹಿಂಬಾಲಿಸುವಂತೆ ಹಿಂಬಾಲಿಸಿ ಹತ್ತುತ್ತಿರುವ ದೃಶ್ಯಗಳು ಕಳೆದ ಕೆಲ ದಿನಗಳಿಂದ ಮಾಧ್ಯಮದಲ್ಲಿ ಹರಿದಾಡುತ್ತಿವೆ. ತಾಲಿಬಾನಿಗಳಿಂದ ತಮ್ಮನ್ನು ಕಾಪಾಡುವಂತೆ ಆಫ್ಘನ್ನರು ಯುಎಸ್ ಸೈನ್ಯವನ್ನು ಬೇಡಿಕೊಳ್ಳುತ್ತಿದ್ದಾರೆ. ಆಫ್ಘನ್ ತೊರೆಯಲು ಸಾಧ್ಯವಾಗದೆ ಜನ ಹತಾಶರಾಗಿ ಹೋಗಿದ್ದಾರೆ.

ಇನ್ನೂ ತಮ್ಮ ಮಕ್ಕಳನ್ನಾದರೂ ಸುರಕ್ಷಿತವಾಗಿ ಬದುಕುಳಿಸಬೇಕು ಎನ್ನುವ ಆಸೆಯಿಂದ ಪೋಷಕರೇ ಯುಎಸ್ ಸೈನಿಕರಿಗೆ ತಮ್ಮ ಮಕ್ಕಳನ್ನು ಹಸ್ತಾಂತರಿಸುತ್ತಿರುವ ದೃಶ್ಯಗಳು ನಿಜಕ್ಕೂ ಕರುಣಾಜನಕವಾಗಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ತಡೆಗೋಡೆಯಂತೆ ನಿರ್ಮಿಸಿರುವ ಮುಳ್ಳುತಂತಿ ಮೇಲೆ ಮಕ್ಕಳನ್ನು ಎಸೆಯುತ್ತಿರುವ ದೃಶ್ಯಗಳು ನಿಜಕ್ಕೂ ಕಣ್ಣಂಚಿನಲ್ಲಿ ನೀರುತ್ತರಿಸುತ್ತವೇ ಎನ್ನುವ ಹೇಳಿಕೆಯನ್ನ ಯುಎಸ್ ಸೈನಿಕರೇ ಹೇಳಿಕೊಂಡಿದ್ದಾರೆ.

ಇನ್ನೂ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ತಾಲಿಬಾನ್ ತನ್ನ ಅಸಲಿ ಆಟ ಶುರು ಮಾಡಿದೆ. ಆಫ್ಘನ್ ಧ್ವಜವಿಡಿದವರ ಮೇಲೆ ಗುಂಡು ಹಾರಿಸುವ ಅವರನ್ನು ವಶಕ್ಕೆ ಪಡೆಯುವ ಹಿಂಸಾತ್ಮಕ ಕೃತ್ಯವೆಸಗುತ್ತಿದೆ. ಇನ್ನೂ ಕಂಡಕಂಡಲ್ಲಿ ಗುಂಡು ಹಾರಿಸುತ್ತಿರುವ ತಾಲಿಬಾನಿಗಳು ಆಕ್ರಮಿಸಿರುವ ಆಫ್ಘಾನಿಸ್ತಾನ ಅಕ್ಷರಶ: ಅಲ್ಲಿನ ಜನರಿಗೆ ನರಕವೇ ಆಗಿದೆ. ತಮ್ಮವಿರುದ್ಧ ನಿಂತವರನ್ನು ಹಿಂಸಿಸಿ ಕೊಲ್ಲುವ ದೃಶ್ಯಗಳು ಬೆಚ್ಚಿ ಬೀಳಿಸುವಂತಿವೆ. ಹೀಗಾಗಿ ತಮ್ಮ ಮಕ್ಕಳನ್ನಾದರೂ ರಕ್ಷಿಸಿ ಎಂದು ಆಫ್ಘಾನಿಸ್ತಾನಿಗಳು ಯುಎಸ್ ಜರ್ಮನ್ ಯೋಧರ ಮೊರೆ ಹೋಗುತ್ತಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights