ಭಾರತದಲ್ಲಿ ಹೊಸದಾಗಿ 55,722 ಕೊರೊನಾ ಕೇಸ್ : 579 ಸೋಂಕಿತರು ಸಾವು..!

ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾದಿಂದಾಗಿ ಜೀವನ ನಡೆಸಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಜನರಿಗೆ ವರುಣನ ಮುನಿಸು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಭಾರೀ ಮಳೆ ಮಧ್ಯೆ, ಪ್ರತಿನಿತ್ಯ ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲುತ್ತಿದ್ದರೆ, ಐದುನೂರಕ್ಕೂ ಹೆಚ್ಚು ಜನರು ಮಹಾಮಾರಿ ಕೊರೊನಾಕ್ಕೆ ಬಲಿಯಾಗುತ್ತಿದ್ದಾರೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 55,722 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಈವರೆಗೆ 75.97 ಲಕ್ಷ ಕೊರೊನಾ ಪ್ರಕರಣಗಳಿವೆ. ಒಂದೇ ದಿನದಲ್ಲಿ 579 ಜನ ಸೋಂಕಿತರು ಬಲಿಯಾಗಿದ್ದು, ಒಟ್ಟು 1,14,610 ಸಾವುಗಳು ಈವರೆಗೂ ಸಂಭವಿಸಿವೆ.

ದೇಶದ ಒಟ್ಟು 75.97 ಲಕ್ಷ ಕೊರೊನಾ ಪ್ರಕರಣಗಳ ಪೈಕಿ 7,72,055 ಸಕ್ರಿಯ ಪ್ರಕರಣಗಳಿದ್ದು, 66,63,608 ಗುಣಮುಖರಾಗಿದ್ದಾರೆ. ದೇಶದಲ್ಲಿ 579 ಸಾವುಗಳು ಸಂಭವಿಸಿದ್ದು, ಈ ಕಾಯಿಲೆಯಿಂದಾಗಿ ಒಟ್ಟು ಸಾವಿನ ಸಂಖ್ಯೆ 1,14,610 ಕ್ಕೆ ತಲುಪಿದೆ.

ಐಸಿಎಂಆರ್ ಪ್ರಕಾರ, ಅಕ್ಟೋಬರ್ 18 ರವರೆಗೆ ಒಟ್ಟು 9,50,83,976 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 8,59,786 ಮಾದರಿಗಳನ್ನು ಭಾನುವಾರ ಪರೀಕ್ಷಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights