ಈ ವರ್ಷ ಹುಟ್ಟುಹಬ್ಬ ಆಚರಿಸದಿರಲು ದರ್ಶನ್ ನಿರ್ಧಾರ : ಅಭಿಮಾನಿಗಳಲ್ಲಿ ಮನವಿ!

ಇಂದು ಫೇಸ್ ಬುಕ್ ಲೈವ್ ನಲ್ಲಿ ಚಾಲೆಂಜಿಂಗ್ ಸ್ಟಾರ್  ದರ್ಶನ್ ಪ್ರತ್ಯಕ್ಷರಾಗಿ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಈ ವರ್ಷ ತಮ್ಮ ಹುಟ್ಟುಹಬ್ಬ ಆಚರಿಸದೇ ಇರಲು ದರ್ಶನ್ ನಿರ್ಧಾರ ಮಾಡಿದ್ದು ಅಭಿಮಾನಿಗಳು ಸಹಕರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಹೌದು… ಪ್ರತೀ ಬಾರಿ ಹುಟ್ಟುಹಬ್ಬ ಆಚರಣೆಗೆಂದು ಸಾವಿರಾರು ದಚ್ಚು  ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಅವರ ಮನೆ ಎದುರು ಸೇರುತ್ತಾರೆ. ಮಾತ್ರವಲ್ಲದೇ ದುಬಾರು ಉಡುಗೊರೆ, ಅಧಿಕ ವೆಚ್ಚದ ಆಚರಣೆಗೆ ಮುಂದಾಗುತ್ತಾರೆ. ಆದರೆ ಇಂದು 11 ಗಂಟೆಗೆ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಂಡ ದಚ್ಚು ಫೆಬ್ರವರಿ 16 ಕ್ಕೆ ತಮ್ಮ ಹುಟ್ಟುಹಬ್ಬ ಆಚರಿಸದೇ ಇರಲು ನಿರ್ಧಾರ ಮಾಡಿದ್ದಾರೆ. 2019 ಕೊರೊನಾದಿಂದಾಗಿ ಜನ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಹೀಗಾಗಿ ದುಬಾರಿ ಹಣ ಖರ್ಚು ಮಾಡಿ ಅಭಿಮಾನಿಗಳು ಉಡುಗೊರೆ ತರುವುದು, ಆಚರಣೆ ಮಾಡುವುದು ಬೇಡ ಎಂದಿದ್ದಾರೆ ಚಾಲೆಂಜಿಂಗ್ ಸ್ಟಾರ್.

ಈ ವೇಳೆ ‘ರಾಬರ್ಟ್’ ಸಿನಿಮಾದ ಬಗ್ಗೆ ಫೇಸ್ ಬುಕ್ ನಲ್ಲಿ ದಚ್ಚು ಮಾತನಾಡಿದ್ದಾರೆ. ಆದಷ್ಟು ಬೇಗ ಸಿನಿಮಾ ರಿಲೀಸ್ ಆಗುತ್ತದೆ. ಬಹುತೇಕ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. 2021ರಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎಂದಿದ್ದಾರೆ.

ಲೈವ್ ನಲ್ಲಿ ದಚ್ಚುಗೆ ಅಭಿಮಾನಿಗಳು ಲವ್ ಯೂ ಹೇಳಿದ್ದು. ನೀವು ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿರುತ್ತೇವೆ ಎಂದು ದಚ್ಚು ಅಭಿಮಾನಿಗಳಿಗೆ ಪ್ರತಿಕ್ರಿಯಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights