ಕೊವ್ಯಾಕ್ಸಿನ್‌ ಪಡೆದಿದ್ದ ಸ್ವಯಂಸೇವಕ ಸಾವು; ವಿಷ ಸೇವಿಸಿರಬಹುದೆಂಬ ಶಂಕೆ!

ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಒಳಗಾಗಿದ್ದ ಭೋಪಾಲ್‌ನ ಸ್ವಯಂಸೇವಕರೊಬ್ಬರು 9 ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಭೋಪಾಲ್‌ನ ಪೀಪಲ್ಸ್ ಕಾಲೇಜು ಹಾಗೂ ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದಲ್ಲಿ 42 ವರ್ಷದ ದೀಪಕ್‌ ಮರಾವಿ ಅವರು ಡಿಸೆಂಬರ್ 12ರಂದು ಕೊವ್ಯಾಕ್ಸಿನ್ ಡೋಸ್ ಪಡೆದಿದ್ದರು.

ದಿನಗೂಲಿ ನೌಕರರಾಗಿದ್ದ ಅವರು ಡಿಸೆಂಬರ್‌ 21ರಂದು ಮೃತಪಟ್ಟಿದ್ದರು. ಈ ಬಗ್ಗೆ ಅವರ ಮಗ ಮೆಡಿಕಲ್ ಸೆಂಟರ್‌ಗೆ ಮಾಹಿತಿ ನೀಡಿದ್ದು, ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಖಾಸಗಿ ಸಂಸ್ಥೆಯ ಪೀಪಲ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪಕುಲಪತಿ ಡಾ.ರಾಜೇಶ್ ಕಪೂರ್, ಡಿಸೆಂಬರ್ 12 ರಂದು ನಡೆದ ಕೊವಾಕ್ಸಿನ್ ವಿಚಾರಣೆಯಲ್ಲಿ ಮೃತ ದೀಪಕ್ ಮರಾವಿ ಭಾಗವಹಿಸಿದ್ದರು. ಡಿಸೆಂಬರ್ 21ರಂದು ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಶವಪರೀಕ್ಷೆ ನಡೆಸಿದ ವೈದ್ಯರು ಮರಾವಿ ಅವರು ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದಾರೆ.

ಮಧ್ಯಪ್ರದೇಶದ ಮೆಡಿಕೋ ಕಾನೂನು ಸಂಸ್ಥೆಯ ನಿರ್ದೇಶಕ ಡಾ.ಅಶೋಕ್ ಶರ್ಮಾ ಮಾಹಿತಿ ನೀಡಿದ್ದು, ದೀಪಕ್ ಮರಾವಿ ಮೃತದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಆದಾಗ್ಯೂ, ಅವರ ಒಳಾಂಗಗಳ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: 236 ಶಿಕ್ಷಕರಿಗೆ ಕೊರೊನಾ ದೃಢ; ಸಂಕ್ರಾತಿ ನಂತರ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿಗಳು ಆರಂಭ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights