BJP ವಿರುದ್ಧ ಬಂಡಾಯ?: ರಾಜಸ್ಥಾನದಲ್ಲಿ ಹೊಸ ಪಕ್ಷ ಸ್ಥಾಪಿಸಿದ ವಸುಂದರಾ ರಾಜೆ ಬೆಂಬಲಿಗರು!

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕಿ ವಸುಂಧರಾ ರಾಜೆ ಅವರನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸಿಎಂ ಮಾಡುತ್ತೇವೆ ಎಂದು ಹೇಳಿರುವ ರಾಜೆ ಬೆಂಬಲಿಗರು, ಹೊಸ ಪಕ್ಷ ಸ್ಥಾಪಿಸಿದ್ದಾರೆ.

ರಾಜ್ಯದಲ್ಲಿ ಮಾಜಿ ಸಿಎಂಗೆ ಪಕ್ಷದ ನಾಯಕತ್ವ ನೀಡಬೇಕು ಎಂದು ಒತ್ತಾಯಿಸುವುದಕ್ಕಾಗಿ ರಾಜೆ ಅವರ ಬೆಂಬಲಿಗರು ಹೊಸ ಪಕ್ಷವನ್ನು ಆರಂಭಿಸಿದ್ದಾರೆ. ಇದು ಬಿಜೆಪಿಯೊಳಗಿನ ಬಂಡಾಯ ಮತ್ತು ಘರ್ಷಣೆಯನ್ನು ಹೊರ ಹಾಕಿದೆ.

ನಾವು ಡಿಸೆಂಬರ್ 20 ರಂದು ‘ವಸುಂಧರಾ ರಾಜೆ ಸಮರ್ಥಕ್ ರಾಜಸ್ಥಾನ್(ಮಂಚ್)’ ಎಂಬ ಪಕ್ಷ ಘೋಷಿಸಿದ್ದೇವೆ ಮತ್ತು ರಾಜ್ಯದಲ್ಲಿ ರಾಜೆ ಅವರು ಸಿಎಂ ಆಗಿದ್ದಾಗ ಸರ್ಕಾರ ಮಾಡಿದ ಸಾಧನೆಗಳು ಮತ್ತು ನೀತಿಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ 25 ಜಿಲ್ಲೆಗಳಲ್ಲಿ ಪದಾಧಿಕಾರಿಗಳನ್ನು ನೇಮಿಸಿದ್ದೇವೆ. ರಾಜೆ ಅವರನ್ನು ಮತ್ತೆ ರಾಜ್ಯದ ಸಿಎಂ ಮಾಡುತ್ತೇವೆ” ಎಂದು ಹೊಸ ಪಕ್ಷದ ರಾಜ್ಯ ಅಧ್ಯಕ್ಷ ವಿಜಯ್ ಭರದ್ವಾಜ್ ಅವರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಪಕ್ಷದ ಸಂಘಟನೆಯ ಮುಖ್ಯಸ್ಥರಾಗಿ ಸತೀಶ್ ಪೂನಿಯಾ ಜವಾಬ್ದಾರಿ ಹೊತ್ತಿದ್ದಾರೆ. ಪಕ್ಷವನ್ನು ಬಲಪಡಿಸುವುದು ನಮ್ಮ ಉದ್ದೇಶ. ಇದು ಪರ್ಯಾಯ ಸಂಘಟನೆಯಲ್ಲ. ಆದರೆ ರಾಜೆಗೆ ನಮ್ಮ ನಿಷ್ಠೆಯನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ. ಅವರ ಸಾಧನೆಗಳನ್ನು ನಾವು ಜನರಲ್ಲಿ ಮಾತ್ರ ಪ್ರಚಾರ ಮಾಡುತ್ತೇವೆ” ಎಂದು ಬಿಜೆಪಿಯ ಸಕ್ರಿಯ ಸದಸ್ಯರೆಂದು ಹೇಳಿಕೊಳ್ಳುವ ಭರದ್ವಾಜ್ ಹೇಳಿದ್ದಾರೆ.

ರಾಜಸ್ಥಾನ ಆಡಳಿತರೂಢ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ಕಸರತ್ತು ನಡೆಸಿತ್ತು. ಬಿಜೆಪಿಯ ಆಪರೇಷನ್‌ ದಾಳವನ್ನು ರಾಜೆ ವಿರೋಧಿಸಿದ್ದರು. ನಂತರದಲ್ಲಿ ರಾಜೆ ಅವರನ್ನು ಬಿಜೆಪಿ ಸ್ವಲ್ಪ ಮಟ್ಟಿಗೆ ಕಡೆಗಣಿಸಲು ಆರಂಭಿಸಿತ್ತು. ಅಲ್ಲದೆ, ಇಂದು (ಶನಿವಾರ) ನಡೆದ ರಾಜ್ಯ ನಾಯಕರ ಜೊತೆಗಿನ ಹೈಕಮಾಂಡ್‌ ಭೇಟಿಯಲ್ಲಿ ರಾಜೆ ಅವರನ್ನು ಹೊರಗಿಡಲಾಗಿತ್ತು.


ಇದನ್ನೂ ಓದಿ: ರಾಜಸ್ಥಾನ: ಕಾಂಗ್ರೆಸ್‌ ಜೊತೆ ಬಿಎಸ್‌ಪಿ ಶಾಸಕರ ವಿಲೀನ; ತುರ್ತು ಸಭೆ ಕರೆದ ಬಿಜೆಪಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights