ಫ್ಯಾಕ್ಟ್‌ಚೆಕ್ : ಕೇರಳದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ದೇವಸ್ಥಾನದ ಅರ್ಚಕರ ಹುದ್ದೆ ಮೇಲೆ ಕಣ್ಣಿಟ್ಟು ಸಂಸ್ಕೃತ ಕಲಿಯುತ್ತಿರುವುದು ನಿಜವೇ?

“ಕೇರಳದಲ್ಲಿ ದೇವಾಲಯದ ಅರ್ಚಕ ಹುದ್ದೆಗಳನ್ನು ಪಡೆಯಲು ಸಂಸ್ಕೃತ ಕಲಿಯಲು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಮುಸ್ಲಿಂ ಶಿಕ್ಷಕರು ತರಬೇತಿ ನೀಡುತ್ತಿದ್ದಾರೆ”  ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.

“ಗುರುರ್ ಬ್ರಹ್ಮ ಗುರುರ್ ವಿಷ್ಣು, ಗುರುರ್ ದೇವೋ ಮಹೇಶ್ವರ, ಗುರುರ್ ಸಾಕ್ಷಾತ್ ಪರಂ ಬ್ರಹ್ಮ, ತಸ್ಮೈ ಶ್ರೀ ಗುರವೇ ನಮಃ” ಎಂಬ ಫ್ರಾರ್ಥನೆಯೊಂದಿಗೆ ಪ್ರಾರಂಭವಾಗುವ ವಿಡಿಯೋದಲ್ಲಿ  ಇನ್ನೊಬ್ಬ ವಿದ್ಯಾರ್ಥಿಯಿಂದ ಪ್ರಾಧ್ಯಾಪಕರು ಶ್ಲೋಕವನ್ನು ಹೇಳಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. 

ಕೇರಳದಲ್ಲಿ ದೇವಸ್ಥಾನದ ಅರ್ಚಕ ಸ್ಥಾನವನ್ನು ಪಡೆಯಲು ಮುಸ್ಲಿಂ ಶಿಕ್ಷಕರು ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸುತ್ತಾರೆ ಎಂದು ಎಕ್ಸ್ ಹ್ಯಾಂಡಲ್‌ನಲ್ಲಿ ವೈರಲ್ ವೀಡಿಯೊದಲ್ಲಿ ಹೇಳಲಾಗಿದೆ. ಉದ್ದನೆಯ ಬಿಳಿ ನಿಲುವಂಗಿಯನ್ನು ಧರಿಸಿರುವ ವಿದ್ಯಾರ್ಥಿಗಳು ಮತ್ತು ಬಿಳಿ ಶಿರಸ್ತ್ರಾಣವನ್ನು ಧರಿಸಿರುವ ವಿದ್ಯಾರ್ಥಿಗಳು ಸಂಸ್ಕೃತ “ಶ್ಲೋಕಗಳು” ಮತ್ತು “ಮಂತ್ರಗಳನ್ನು” ಪಠಿಸುವುದನ್ನು ನಾವು ನೋಡಬಹುದು. ಈ ವೈರಲ್ ವಿಡಿಯೊವನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರು ಅದೇ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕೇರಳದ ತ್ರಿಶೂರ್‌ ನಲ್ಲಿ ಅಕಾಡೆಮಿ ಆಫ್ ಶರಿಯಾ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ (ಎಎಸ್ಎಎಸ್)ನ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿರುವ ವಿಡಿಯೋ ಇದಾಗಿದೆ. ಸಂಸ್ಕೃತ, ಉಪನಿಷತ್ತುಗಳು, ಪುರಾಣಗಳನ್ನು ಕಲಿಸುವುದರ ಹಿಂದಿನ ಉದ್ದೇಶ ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿ ಬೆಳೆಸುವುದು ಎಂದು ಪ್ರಾಂಶುಪಾಲರು ಹೇಳಿದ್ದಾರೆ.

ತ್ರಿಶೂರ್

ಮುಸ್ಲಿಂ ಮಲಿಕ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಶರಿಯಾ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ (ಎಎಸ್ಎಎಸ್)ನ ಪ್ರಾಂಶುಪಾಲ ಒನಂಪಲ್ಲಿ ಮುಹಮ್ಮದ್ ಫೈಝಿ ಅವರು ಸ್ವತಃ ಶಂಕರಾಚಾರ್ಯರ ತತ್ವಶಾಸ್ತ್ರವನ್ನು ಅಭ್ಯಾಸಿಸಿದ್ದಾರೆ. ಹಾಗಾಗಿ ಅವರು ವಿದ್ಯಾರ್ಥಿಗಳಿಗೆ ಸಂಸ್ಕೃತವನ್ನು ಕಲಿಸಲು ಮುಖ್ಯ ಕಾರಣ ಎಂದರೆ “ಸಂಸ್ಕೃತ, ಉಪನಿಷತ್ತುಗಳು, ಪುರಾಣಗಳನ್ನು ಕಲಿಸುವುದರ ಹಿಂದಿನ ಉದ್ದೇಶವೆಂದರೆ ವಿದ್ಯಾರ್ಥಿಗಳಲ್ಲಿ ಇತರ ಧರ್ಮಗಳ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಬೆಳೆಸಲು” ಎಂದಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳ ಕೇಸರಿಕರಣ ಅಥವಾ  ಕಮ್ಯುನಿಸಂನ ಕೇಂದ್ರಗಳಾಗುತ್ತಿವೆ ಎಂಬ ಆರೋಪ ಪ್ರತ್ಯಾರೋಪದ ಹಿನ್ನಲೆಯಲ್ಲಿ ಈ ಇಸ್ಲಾಮಿಕ್ ಸಂಸ್ಥೆಯು ತನ್ನ ವಿದ್ಯಾರ್ಥಿಗಳಿಗೆ ಅರೇಬಿಕ್ ಮತ್ತು ಕುರಾನ್ ಜೊತೆಗೆ ಸಂಸ್ಕೃತ ಮತ್ತು ಭಗವದ್ಗೀತೆಯನ್ನು ಕಲಿಸುವ ಮೂಲಕ ಮಾದರಿಯಾಗಿದೆ.  ಎಂದು ಸಂಸ್ಥೆಯ ಸಂಯೋಜಕರಲ್ಲಿ ಒಬ್ಬರಾದ ಹಫೀಜ್ ಅಬೂಬಕರ್ ಅವರು ವಾಹಿನಿಯೊಂದರ ಸಂದರ್ಶನಲ್ಲಿ ಹೇಳಿದ್ದಾರೆ

ಇಸ್ಲಾಂ ಬಗ್ಗೆ ಕಲಿಯುವುದು ಮುಖ್ಯ, ಆದರೆ ಇತರ ಧರ್ಮಗಳ ಬಗ್ಗೆ ಜ್ಞಾನವೂ ಮುಖ್ಯವಾಗಿದೆ ಮತ್ತು ಪಠ್ಯಕ್ರಮದಲ್ಲಿ ಸಂಸ್ಕೃತವನ್ನು ಸೇರಿಸಲು ಇದು ಸಹ ಕಾರಣವಾಗಿದೆ. “ಇದು ವಿದ್ಯಾರ್ಥಿಗಳು ತಮ್ಮ ಇತಿಹಾಸ ಮತ್ತು ಪುರಾಣಗಳ ಮೂಲಕ ಇನ್ನೊಂದು ಧರ್ಮದ ಬಗ್ಗೆ ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಮ್ಮ ಧಾರ್ಮಿಕ ದೃಷ್ಟಿಕೋನಗಳನ್ನು ಅವರ ಅಭಿಪ್ರಾಯದೊಂದಿಗೆ ಸಿಂಕ್ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಇದು ಹೊಸ ಭಾರತಕ್ಕೆ ಹೊಸ ಆರಂಭವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಈ ಕಾರಣಕ್ಕೆ ಸಂಸ್ಕೃತವನ್ನು ಪಠ್ಯಕ್ರಮದಲ್ಲಿ ಸೇರಿಸುವುದರ ಹಿಂದಿನ ಗುರಿಯಾಗಿದೆ,” ಎಂದು ಹಫೀಜ್ ಅಬೂಬಕರ್ ದಿ ಪ್ರಿಂಟ್‌ಗೆ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಂ ಶಿಕ್ಷಕರೊಬ್ಬರು, ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸುವ  11 ತಿಂಗಳ ಹಳೆಯ ವಿಡಿಯೋವನ್ನು  ಹಂಚಿಕೊಳ್ಳುವ ಮೂಲಕ ಮುಸ್ಲಿಮರು ಮುಜರಾಯಿ ದೇವಸ್ಥಾನದ ಅರ್ಚಕ ಹುದ್ದೆಗಳ ಮೇಲೆ ಕಣ್ಣಿಟ್ಟು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೂ ಮುಜರಾಯಿ ದೇವಸ್ಥಾನದ ಅರ್ಚಕರಿಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಆಸ್ಟ್ರೇಲಿಯಾ ವಿರುದ್ದ ಕ್ರಿಕೆಟ್‌ನಲ್ಲಿ ಹೋದ ಮಾನ ಹಾಕಿಯಲ್ಲಿ ಬಂತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights