ಪೊಗರು ಬಂತು ಪೊಗರು… : ಧ್ರುವ ಅಭಿಮಾನಿಗಳಿಗೆ ಕಾದಿದೆ ಸಿಹಿ ಸುದ್ದಿ…!

ಪೊಗರು ಬಂತು ಪೊಗರು ಅಂತ ಬರ್ಜರಿ ಸ್ಟೆಪ್ಸ್ ಹಾಕಿದ ಧ್ರುವ ಸರ್ಜಾ ಸಿನಿಮಾ ಸದ್ಯ ತೆರೆಗೆ ಅಪ್ಪಳಿಸಲಿದೆ. ಅಭಿಮಾನಿಗಳು ಕಾದು ಕುಳಿತಿರುವ ಆ್ಯಕ್ಷನ್ ಪ್ರಿನ್ಸ್ ನ ‘ಪೊಗರು’ ಸಿನಿಮಾ 2021 ಜನವರಿಯಲ್ಲಿ ರಿಲೀಸ್ ಆಗಲಿದೆ.

ಹೌದು… ‘ಆ್ಯಕ್ಷನ್‌ ಪ್ರಿನ್ಸ್‌’ ಎಂದೇ ಫೇಮಸ್‌ ಆಗಿರುವ ಧ್ರುವ ಸರ್ಜಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮಾಸ್‌ ಸಿನಿಮಾ ಪ್ರೇಕ್ಷಕರು ಅವರನ್ನು ಸಖತ್‌ ಇಷ್ಟಪಡುತ್ತಾರೆ. ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ‘ಪೊಗರು’ ಚಿತ್ರದ ಬಿಡುಗಡೆಗಾಗಿ ಕಾದಿದ್ದಾರೆ ಸಿನಿಪ್ರಿಯರು. ಅಂದುಕೊಂಡಿದ್ದಕ್ಕಿಂತಲೂ ಈ ಚಿತ್ರದ ಕೆಲಸಗಳು ತಡವಾಗಿವೆ. ಸಿನಿಮಾ ರಿಲೀಸ್‌ ತಡವಾಗಿರಬಹುದು, ಆದರೆ ಹೊಸ ಸುದ್ದಿ ನೀಡುವಲ್ಲಿ ನಟ ಧ್ರುವ ಸರ್ಜಾ ವಿಳಂಬ ಮಾಡಿಲ್ಲ. ‘ಪೊಗರು’ ಸಿನಿಮಾ ಜನವರಿಯಲ್ಲಿ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ.

ಸಿನಿಮಾದ ನಿರ್ಮಾಪಕ ಬಿಕೆ ಗಂಗಾಧರ್ ಸಿನಿಮಾ ಬಿಡುಗಡೆಯ ಬಗ್ಗೆ ಮಾತನಾಡಿದ್ದು, ಜನವರಿ ತಿಂಗಳಲ್ಲಿ ಪೊಗರು ತೆರೆಕಾಣಲಿದೆ ಎಂಬುದನ್ನು ಖಚಿತಪಡಿಸಿದ್ದು ದಿನಾಂಕವನ್ನು ಶೀಘ್ರವೇ ಅಂತಿಮಗೊಳಿಸಲಾಗುವುದು ಎಂದೂ ಹೇಳಿದ್ದಾರೆ. ಪೊಗರು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತಕ್ಕೆ ಬಂದಿದ್ದು, ಡಬ್ಬಿಂಗ್ ಭಾಗವನ್ನು ಪೂರ್ಣಗೊಳಿಸುವುದಕ್ಕಾಗಿ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲೇ ಇದ್ದರು.

ಪ್ರೊಡಕ್ಷನ್ ಹೌಸ್ ಪೊಗರು ಚಿತ್ರವನ್ನು ಕನ್ನಡದಲ್ಲಿ ಅಷ್ಟೇ ಅಲ್ಲದೇ ತೆಲುಗು, ತಮಿಳು ಹಿಂದಿಗಳಲ್ಲೂ ಬಿಡುಗಡೆ ಮಾಡುವುದಕ್ಕೆ ತಯಾರಿ ನಡೆಸಿದ್ದು, ಡಬ್ಬಿಂಗ್ ಕೆಲಸವೂ ಪ್ರಗತಿಯಲ್ಲಿದೆ.

ಹಿಂದಿ ಡಬ್ಬಿಂಗ್ ಹಕ್ಕುಗಳನ್ನು 7.2 ಕೋಟಿಗಳಿಗೆ ಮಾರಾಟ ಮಾಡಲಾಗಿದ್ದರೆ, ತೆಲುಗು ಡಬ್ಬಿಂಗ್ ಹಕ್ಕುಗಳೂ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ ಎನ್ನುತ್ತಾರೆ ಗಂಗಾಧರ್.
ಧನಂಜಯ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಯೂರಿ, ರವಿಶಂಕರ್, ಚಿಕ್ಕಣ್ಣ ತಾರಾಗಣದಲ್ಲಿದ್ದಾರೆ. ಪೊಗರುಗೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ವಿ ಹರಿಕೃಷ್ಣ ಹಿನ್ನೆಲೆ ಸಂಗೀತ ನೀಡಿದ್ದಾರೆ. ಪೊಗರು ಚಿತ್ರದ ಛಾಯಾಗ್ರಾಹಣವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights