ಕಾಂಗ್ರೆಸ್‌ನ ಮಹಿಳಾ ಮುಖಂಡೆ ಮೇಲೆ ಅತ್ಯಾಚಾರ ಆರೋಪ: ಕಾಂಗ್ರೆಸ್‌ ಶಾಸಕನ ಪುತ್ರನ ವಿರುದ್ಧ ಪ್ರಕರಣ ದಾಖಲು!

ಮಧ್ಯಪ್ರದೇಶದಲ್ಲಿ ವಿವಾಹದ ನೆಪದಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ಮಗ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಯುವ ಕಾಂಗ್ರೆಸ್‌ನ ಮಹಿಳಾ ಮುಖಂಡೆಯೊಬ್ಬರು ಆರೋಪಿಸಿದ್ದು, ದೂರಿನ ಆಧಾರದ ಶಾಸಕರ ಮಗನ ವಿರುದ್ಧ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಶಾಸಕ ತನ್ನ ಮಗನ ಮೇಲಿನ ದೂರನ್ನು ಸುಳ್ಳು ಎಂದು ಹೇಳಿದ್ದಾರೆ. ಈ ಬೆನ್ನಲ್ಲೇ ಯುವ ಕಾಂಗ್ರೆಸ್ ರಾಜ್ಯ ಘಟಕವು ಮಹಿಳೆಯ ಆರೋಪಗಳ ಬಗ್ಗೆ ತನಿಖೆ ಮಾಡಲು ಸಮಿತಿಯನ್ನು ರಚಿಸಿದೆ.

“ಮಧ್ಯಪ್ರದೇಶದ ಯುವ ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಂಡಿರುವ ಯುವತಿ, ಈ ವರ್ಷದ ಫೆಬ್ರವರಿಯಲ್ಲಿ ತನನ್ನು ಮದುವೆಯಾಗುವುದಾಗಿ ನಂಬಿಸಿ ಆರೋಪಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ” ಎಂದು 28 ವರ್ಷದ ಯುವತಿ ದೂರು ನೀಡಿರುವುದಾಗಿ ಅಧಿಕಾರಿ ಹೇಳಿದ್ದಾರೆ.

ಯುವತಿ ದೂರಿನ ಆಧಾರದ ಮೇಲೆ ಕಾಂಗ್ರೆಸ್ ಶಾಸಕರ ಪುತ್ರನ ವಿರುದ್ಧ ಶುಕ್ರವಾರ ಸಂಜೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಯ ಹುಡುಕಾಟ ನಡೆಯುತ್ತಿದೆ ಎಂದು ಇಂದೋರ್‌ನ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಮಹಿಳಾ ಮುಂಖಡೆ ನನ್ನ ಮಗನ ಮೇಲೆ ಅತ್ಯಾಚಾರದ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾಳೆ. ಆಕೆ ಅವನಿಂದ ಹಣವನ್ನು ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದಾಳೆ” ಎಂದು ಶಾಸಕ ಹೇಳಿದ್ದಾರೆ.

“ಆ ಯುವತಿ ತನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬಹುದೆಂದು ನನ್ನ ಮಗನಿಗೆ ಈಗಾಗಲೇ ಭಯವಿತ್ತು. ಆದ್ದರಿಂದ, ತನ್ನ ಮಗ ಏಪ್ರಿಲ್ 1 (ಗುರುವಾರ) ರಂದು ಇಂದೋರ್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಡಿಐಜಿ) ಕಚೇರಿಗೆ ಪತ್ರ ಬರೆದಿದ್ದ, ಅದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ” ಅವರು ಹೇಳಿದ್ದಾರೆ.

ಇದರ ಬಗ್ಗೆ ಕೇಳಿದಾಗ ಡಿಐಜಿ ಮನೀಶ್ ಕಪೂರ್, “ಮಹಿಳಾ ನಾಯಕಿ ವಿರುದ್ಧ ಶಾಸಕರ ಮಗ ವ್ಯಕ್ತಪಡಿಸಿದ ಆತಂಕಗಳ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಸಮಯದಲ್ಲಿ ಸತ್ಯದ ಆಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.

ಏತನ್ಮಧ್ಯೆ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಭುರಿಯಾ ಅವರು ಈ ಅತ್ಯಾಚಾರ ಪ್ರಕರಣದಲ್ಲಿ ಸಂಘಟನಾ ಮಟ್ಟದಲ್ಲಿ ಆಂತರಿಕ ತನಿಖೆ ನಡೆಸಲು ಮೂರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಮತ್ತು ಒಂದು ವಾರದೊಳಗೆ ವರದಿ ಕೋರಿದ್ದಾರೆ ಎಂದು ತಿಳಿದು ಬಂದಿದೆ.

“ಇಬ್ಬರು ಮಹಿಳಾ ಮುಖಂಡೆಯರು ಮತ್ತು ಒಬ್ಬ ಪುರುಷ ಮುಖಂಡ ಈ ಸಮಿತಿಯ ಭಾಗವಾಗಿದ್ದು, ಇದು ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡುತ್ತದೆ” ಎಂದು ವಿಕ್ರಾಂತ್ ಭುರಿಯಾ ಹೇಳಿದರು.

ಇದನ್ನೂ ಓದಿಮೋದಿ – ಮಮತಾ ಮುಖಾಮುಖಿ: ಹೂಗ್ಲಿಯಲ್ಲಿ ಇಬ್ಬರೂ ಚುನಾವಣಾ ಪ್ರಚಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights