ಆಟಿಕೆಯೆಂದು ಭಾವಿಸಿ ಗನ್ ಜೊತೆ ಗುಂಡು ಹಾರಿಸಿಕೊಂಡ ಬಾಲಕ ಸಾವು
ಮನೆಯಲ್ಲಿದ್ದ ಗನ್ ಅನ್ನು ಆಟಿಕೆ ಎಂದು ಭಾವಿಸಿ, ಅದರೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ಅಮೆರಿಕಾದ ಮಿಸ್ಸೌರಿಯ ಸೆಡಾಲಿಯಾ ನಗರದಲ್ಲಿ ನಡೆದಿದೆ.
ಆಂಡ್ರೆ ವಾಕರ್ ಎಂಬ ಬಾಲಕ ಜನವರಿ 3 ರಂದು ಬೆಳಗ್ಗೆ ಆಟವಾಡುತ್ತಿದ್ದಾಗ ಲೋಡ್ ಆಗಿದ್ದ ಹ್ಯಾಂಡ್ಗನ್ ಅವನ ಕೈ ಸಿಕ್ಕಿದೆ. ಕುತೂಹಲದಿಂದ ಅದನ್ನು ಪರೀಕ್ಷಿಸುತ್ತಿದ್ದ ಬಾಲಕ ಅಚಾನಕ್ಕಾಗಿ ಗುಂಡು ಹಾರಿಸಿಕೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.
ಈ ದುರ್ಘಟನೆಯ ಸಮಯದಲ್ಲಿ ಮನೆಯಲ್ಲಿ ಇನ್ನೆರಡು ಮಕ್ಕಳೂ ಸೇರಿದಂತೆ ಹಲವಾರು ಜನರಿದ್ದರು. ಆದರೆ ಬೇರೆ ಯಾರಿಗೂ ಯಾವುದೇ ತೊಂದರೆ ಉಂಟಾಗಿಲ್ಲ.
‘ಇಂಥ ಘಟನೆಯು ಆಘಾತಕಾರಿ. ಮನೆಯಲ್ಲಿ ಶಸ್ತ್ರಾಸ್ತ್ರ ಇಟ್ಟುಕೊಳ್ಳುವ ಕುಟುಂಬಗಳು ಅವನ್ನು ಸುರಕ್ಷಿತವಾಗಿಡುವುದು ಅವಶ್ಯಕ. ಮಕ್ಕಳಿಗೆ ಗನ್ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಲಾಕ್ ಮಾಡಿ ಮಕ್ಕಳಿಗೆ ಸಿಗದಿರುವಂತಹ ಸ್ಥಳದಲ್ಲಿಡಬೇಕು. ಉಂಟಾಗಬಹುದಾದ ಅಪಾಯದ ಬಗ್ಗೆ ಮಕ್ಕಳಿಗೆ ವಿವರಿಸಿ ಹೇಳಬೇಕು’ ಸೆಡಾಲಿಯಾದ ಪೊಲೀಸ್ ಕಮಾಂಡರ್ ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ನಡುವೆ ಹಕ್ಕಿಜ್ವರದ ಹಾವಳಿ; 36,000 ಬಾತುಕೋಳಿಗಳನ್ನು ಕೊಂದ ಸರ್ಕಾರ!

