ಫ್ಯಾಕ್ಟ್‌ಚೆಕ್: ಪಂಜಾಬಿ ಗಾಯಕ ಸಿಧು ಮೂಸೆವಾಲಾನ ಹತ್ಯೆಗೈದ ಹಂತಕನೊಂದಿಗೆ CM ಭಗವಂತ್ ಮಾನ್ ನಂಟು ನಿಜವೇ?

ಮೇ 29 ಭಾನುವಾರದಂದು, ಜನಪ್ರಿಯ ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಅವರನ್ನು ಮಾನ್ಸಾ ಜಿಲ್ಲೆಯಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಕೆನಡಾ ಮೂಲದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮತ್ತು ವಾಂಟೆಡ್ ಕ್ರಿಮಿನಲ್ ಗೋಲ್ಡಿ ಬ್ರಾರ್ ಫೇಸ್‌ಬುಕ್ ಪೋಸ್ಟ್ ಮೂಲಕ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದನು. ಪ್ರಸ್ತುತ ಪಂಜಾಬ್ ಪೊಲೀಸರು ಹತ್ಯೆಯ ತನಿಖೆ ನಡೆಸುತ್ತಿದ್ದಾರೆ.

ಆದರೆ ಈ ಘಟನೆಯ ನಂತರ, ಸಿಧು ಮೂಸೆವಾಲನನ್ನು ಹತ್ಯೆಯನ್ನು ‘ಗೋಲ್ಡಿ ಬ್ರಾರ್’ ನಡೆಸಿದ್ದಾನೆ ಎಂದು ಹೇಳಲಾಗಿದೆ, ಆ ಹೆಸರಿನ ಫೇಸ್‌ಬುಕ್ ಖಾತೆಯಿಂದ ಸ್ಕ್ರೀನ್‌ಶಾಟ್‌ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಸಿಎಂ ಆಗಿದ್ದಕ್ಕೆ ಅಭಿನಂದನೆ ಎಂದು ಫೋಸ್ಟ್‌ನಲ್ಲಿ ಬರೆಯಲಾಗಿದೆ. ಚಿತ್ರದಲ್ಲಿ ಕಾಣುತ್ತಿರುವ ವ್ಯಕ್ತಿಯನ್ನು ದರೋಡೆಕೋರ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಸಿಎಂ ಭಗವಂತ್ ಮಾನ್ ಜೊತೆಗೆ ಹಂತಕ ನಂಟು ಹೊಂದಿದ್ದನೆ? ವೈರಲ್ ಫೋಟೋದಲ್ಲಿ ಇರುವ ವ್ಯಕ್ತಿಯೇ ನಿಜವಾದ ಹಂತಕನೇ ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ಮತ್ತು ಘಟನೆಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಮೇ 29 ಭಾನುವಾರದಂದು ಪಂಜಾಬ್‌ನ, ಕಾಂಗ್ರೆಸ್ ನಾಯಕ, ಜನಪ್ರಿಯ ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸೆ ವಾಲಾ ಅವರನ್ನು ಗುಂಡಿಕ್ಕಿ ಹತ್ಯೆ  ಮಾಡಲಾಗಿತ್ತು. ಭಗವಂತ್ ಮಾನ್  ನೇತೃತ್ವದ ಪಂಜಾಬ್ ಸರ್ಕಾರ  ಮೂಸೆವಾಲಾ ಸೇರಿದಂತೆ 424 ಜನರ ಭದ್ರತೆಯನ್ನು ಹಿಂತೆಗೆದುಕೊಂಡ ಕೇವಲ ಒಂದು ದಿನದ ನಂತರ ಈ ಭೀಕರ ಘಟನೆ ನಡೆದಿತ್ತು.

‘ಗೋಲ್ಡಿ ಬ್ರಾರ್’ ಹೆಸರಿನ ಫೇಸ್‌ಬುಕ್ ಖಾತೆಯನ್ನು ಸರ್ಚ್ ಮಾಡಲಾಗಿದ್ದು ಮತ್ತು ಪೋಟೋವನ್ನು ಮಾರ್ಚ್ 10 ರಂದು ಅಪ್‌ಲೋಡ್ ಮಾಡಲಾಗಿದೆ ಎಂದು ಕಂಡುಬಂದಿದೆ. ಆದರೆ, ಇದು ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಅವರ ಖಾತೆಯಲ್ಲ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನ ನಂತರ ಗೋಲ್ಡಿ ಬ್ರಾರ್ ಹೆಸರಿನ ವ್ಯಕ್ತಿಯೊಬ್ಬರು ಭಗವಂತ್ ಮಾನ್ ಅವರನ್ನು ಅಭಿನಂದಿಸಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಅನ್ನು ಹಂಚಿಕೊಂಡಿದ್ದಾರೆ. ಈ ಚಿತ್ರ ಇನ್ನೂ ಅವರ ಖಾತೆಯಲ್ಲಿದೆ, ಅದನ್ನು ಇಲ್ಲಿ ನೋಡಬಹುದು

ಸಿಎಂ ಭಗವಂತ್ ಮಾನ್ ಅವರೊಂದಿಗೆ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಗೋಲ್ಡಿ ಬ್ರಾರ್ ಆದರೆ ದರೋಡೆಕೋರ ಗೋಲ್ಡಿ ಬ್ರಾರ್ ಅಲ್ಲ ಎಂದು ತಿಳಿದುಬಂದಿದೆ. ಈ ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಜಂಡ್ವಾಲಾ ಗ್ರಾಮದವರು. ಬ್ರಾರ್ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ನಾನು ಜಾಂಡ್ವಾಲಾ ಗ್ರಾಮದ ರಾಜಿಂದರ್ ಸಿಂಗ್ ಅವರ ಮಗ ಗೋಲ್ಡಿ ಬ್ರಾರ್. ಸಿದ್ದು ಮುಸೇವಾಲಾ ಹತ್ಯೆಯ ಇಂದಿನ ದುರಂತ ಘಟನೆಯಲ್ಲಿ ನನ್ನ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂತಹವರ ವಿರುದ್ಧ ನಾನು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಕೆನಡಾ ಮೂಲದ ದರೋಡೆಕೋರರೊಬ್ಬರು ಸಿಧು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತಿದ್ದಾರೆ

ಕೆನಡಾ ಮೂಲದ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಗೋಲ್ಡಿ ಬ್ರಾರ್ ಪಂಜಾಬ್‌ನಲ್ಲಿ ನಡೆದ  ಸಿಧು ಮೂಸೆವಾಲಾ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ತನ್ನ ಖಾತೆಯಿಂದ ಫೇಸ್‌ಬುಕ್ ಪೋಸ್ಟ್‌ನಲ್ಲಿ, ವಿವಾದಾತ್ಮಕ ಗಾಯಕನ ಹತ್ಯೆಯ ಹೊಣೆಯನ್ನು ಬ್ರಾರ್ ಹೊತ್ತಿದ್ದಾನೆ ಎನ್ನಲಾಗಿದೆ.

ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಬ್ರಾರ್ ತನ್ನ ಹಲವಾರು ಸಹಚರರ ಹತ್ಯೆಗೆ ಮೂಸ್ವಾಲಾ ಕಾರಣ ಎಂದು ಹೇಳಿದ್ದಾರೆ ಮತ್ತು ಪೊಲೀಸರು ಕ್ರಮ ಕೈಗೊಳ್ಳದ ಕಾರಣ, ಅವರು ಗಾಯಕ/ರಾಪರ್ ಅನ್ನು ಮಾಡಿ ಕೊಲೆ ಮಾಡಿದ್ದಾರೆ. ಕುತೂಹಲಕಾರಿಯಾಗಿ, ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರವು ಹತ್ಯೆಯ ಒಂದು ದಿನದ ಮೊದಲು ಮೂಸ್ವಾಲಾ ಅವರ ಭದ್ರತೆಯನ್ನು ತೆಗೆದುಹಾಕಿತು.

ಒಟ್ಟಾರೆಯಾಗಿ ಹೇಳುವುದಾದರೆ ಗೋಲ್ಡಿ ಬ್ರಾರ್ ಎಂಬ ಹೆಸರಿನ ವ್ಯಕ್ತಿಯು ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಶುಭದೀಪ್ ಸಿಂಗ್ ಸಿಧು ಅಲಿಯಾಸ್ ಸಿಧು ಮೂಸೆವಾಲಾ ಹತ್ಯೆ ಮಾಡಿದ್ದಾನೆ ಎಂದು ಅದೇ ಹೆಸರಿನ ಬೇರೆ ವ್ಯಕ್ತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights