ರಾಜ್ಯದ ಕೊರೊನಾ ವರದಿಗಳನ್ನು ಮೋದಿ ಓದಿದ್ದರೆ ಯಡಿಯೂರಪ್ಪ ಶಹಬ್ಬಾಸ್‌ ಗಿರಿ ಪಡೆಯುತ್ತಿದ್ದರು: ಸಿದ್ದರಾಮಯ್ಯ ಟೀಕೆ

ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರೊಂದಿಗಿನ ಮುಖ್ಯಮಂತ್ರಿಗಳ ವಿಡಿಯೋ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಮೋದಿಯಿಂದ ಶಹಬ್ಬಾಸ್‌ ಗಿರಿ ಪಡೆದಿದ್ದಾರೆ. ಯಡಿಯೂರಪ್ಪನವರನ್ನು ಮೋದಿ ಹೊಗಳಿರುವುದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.

ಕೊರೊನಾ ನಿಯಂತ್ರಣದಲ್ಲಿ ಕರ್ನಾಟಕದ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ತುರ್ತಾಗಿ ದುಡಿಯುತ್ತಿದೆ. ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ  ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಶ್ರಮಿಸುತ್ತಿದೆ ಎಂದು ಮೋದಿ ಹೊಗಳಿದ್ದು, ಈ ವಿಚಾರವಾಗಿ ಯಡಿಯೂರಪ್ಪನವರಿಗೆ ಶಹಬ್ಬಾಸ್‌ ಎಂದಿದ್ದಾರೆ.

ಇದೇ ವಿಚಾರವನ್ನಿಟ್ಟುಕೊಂಡು ಯಡಿಯೂರಪ್ಪನವರ ಕಾಲೆಳೆದಿರುವ ಸಿದ್ದರಾಮಯ್ಯ, ರಾಜ್ಯವು ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ 07ನೇ ಸ್ಥಾನದಲ್ಲಿದೆ. ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪತ್ರಿಕೆ ವರದಿ ಮಾಡುತ್ತಿವೆ. ಈ ವರದಿಗಳನ್ನು ಪ್ರಧಾನಿ ಮೋದಿಯವರಿಗೆ ತೋರಿಸಿದ್ದರೆ. ಆಗಲೂ ಯಡಿಯೂರಪ್ಪನವರು ಶಹಬ್ಬಾಸ್‌ ಗಿರಿ ಪಡೆದುಕೊಳ್ಳತ್ತಿರು ಎಂದು ಚೇಡಿಸಿದ್ದಾರೆ.

ಅಲ್ಲದೆ, ಸಿಎಂ ಎಯಡಿಯೂರಪ್ಪನವರು ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ನೆರವು ನೀಡುತ್ತೀರಿ ಎಂದು ಪ್ರಧಾನಿ ಅವರನ್ನು ಕೇಳಬೇಕಿತ್ತಲ್ಲವೇ? ಪಿ.ಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಎಷ್ಟು ದುಡ್ಡು ಕಳಿಸಿದ್ದೀರಿ ಎಂದು ಪ್ರಧಾನಿಗಳನ್ನು ವಿಚಾರಿಸಬೇಕಿತ್ತಲ್ಲವೇ? ಸುಳ್ಳು ಆಶ್ವಾಸನೆ ನೀಡಿದ್ದರೂ ನೊಂದ ಜನರಿಗೆ ಸ್ವಲ್ಪ‌ ನೆಮ್ಮದಿ ಸಿಗುತ್ತಿತ್ತು ಎಂದಿದ್ದಾರೆ.


ಇದನ್ನೂ ಓದಿಅಬಕಾರಿ ಸುಂಕ 18 ಲಕ್ಷ ಕೋಟಿಯನ್ನು ಮೋದಿ ಸರ್ಕಾರ ಲೂಟಿ ಹೊಡೆದಿದೆ: ಸಿದ್ದರಾಮಯ್ಯ


ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲಿಕ್ಕಾ? ಇಲ್ಲವೇ, ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕಾ? ಸೃಷ್ಟಿ, ಪಾಲನೆ, ಲಯ ಇವು ಆ ತ್ರಿಮೂರ್ತಿಗಳ ಕರ್ತವ್ಯವಂತೆ. ಈ ಮೂವರು ಇವುಗಳಲ್ಲಿ ಯಾವ ಕೆಲಸ ಮಾಡಲಿದ್ದಾರಂತೆ? ಎಂದು ಟೀಕಿಸಿದ್ದಾರೆ.

ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ.
ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಆರೋಗ್ಯ ಸಚಿವ ಶ್ರೀ ರಾಮುಲು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಹಭಾಸ್ ಗಿರಿ ಪಡೆದ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಪ್ರತಿದಿನ…

Posted by Siddaramaiah on Sunday, July 5, 2020

ಅಲ್ಲದೆ, ಸರ್ಕಾರ ಆತ್ಮ ವಿಶ್ವಾಸದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡಿದೆ. ಆದರೆ 15 ದಿನಗಳ ಬಳಿಕ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ತಿಳಿಯಲಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಸರ್ಕಾರ ಆತ್ಮವಿಶ್ವಾಸದಿಂದ ಸುರಕ್ಷತಾ ಕ್ರಮ ಕೈಗೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿದೆ. 15 ದಿನಗಳ ಬಳಿಕ ಸುರಕ್ಷತೆ ಬಗ್ಗೆ ತಿಳಿಯಲಿದೆ. ಎಲ್ಲಾ ವಿದ್ಯಾರ್ಥಿಗಳು ಸುರಕ್ಷಿತರಾಗಿರಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿಎರಡು ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ 2,200 ಕೋಟಿ ಲೂಟಿ ಹೊಡೆದಿದೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights