ವಿಶ್ವದಲ್ಲಿಯೇ ಅತಿದೊಡ್ಡ ಕೊರೊನಾ ಆರೈಕಾ ಕೇಂದ್ರವನ್ನು ಉದ್ವಾಟಿಸಿದ ದೆಹಲಿ ಸರ್ಕಾರ!
ವಿಶ್ವದಲ್ಲೇ ಅತಿದೊಡ್ಡ ಕೋವಿಡ್-ಆರೈಕೆ ಕೇಂದ್ರವೆಂದು ಹೆಸರಾದ 10 ಸಾವಿರ ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಆರೈಕೆ ಕೇಂದ್ರವನ್ನು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಇಂದು ರಾಷ್ಟ್ರ ರಾಜಧಾನಿ ದೆಹಲಿಯ ರಾಧಾ ಸೋಮಿ ಸತ್ಸಂಗ್ ಬಿಯಾಸ್ನಲ್ಲಿ ಉದ್ಘಾಟಿಸಿದರು.
ಸೌಮ್ಯ ಮತ್ತು ಲಕ್ಷಣ ರಹಿತ ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ದಕ್ಷಿಣ ದೆಹಲಿ ಜಿಲ್ಲೆಯ ಛತ್ತಾಪುರದಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ರೋಗಲಕ್ಷಣವಿಲ್ಲದ, ಆದರೆ ಮನೆಯಲ್ಲಿ ಐಸೋಲೇಶನ್ ಸೌಲಭ್ಯ ಸಾಧ್ಯವಾಗದವರಿಗೆ ಇದು ಚಿಕಿತ್ಸಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಈ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ – ಅಂದಾಜು 20 ಫುಟ್ಬಾಲ್ ಮೈದಾನಗಳ ಗಾತ್ರ – ಮತ್ತು 200 ಆವರಣಗಳನ್ನು ಹೊಂದಿದ್ದು, ತಲಾ ಒಂದೊಂದು ಆವರಣದಲ್ಲಿ 50 ಹಾಸಿಗೆಗಳ ಸೌಲಭ್ಯವಿದೆ.

