ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ!

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ. 87.65 ಮೀಟರ್ ಉದ್ದ ಎಸೆದು ಚಿನ್ನದ ಪದಕ ಗೆದ್ದಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ 87.03 ಮೀಟರ್ ಎಸೆದ ಅವರು ಎರಡನೇ ಪ್ರಯತ್ನದಲ್ಲಿ 87.65 ಮೀ ದೂರ ಎಸೆದು ದಾಖಲೆ ನಿರ್ಮಿಸಿದರು. ಅಂತಿಮ ಪ್ರಯತ್ನದಲ್ಲಿ 75 ಮೀಟರ್ ಮಾತ್ರ ಎಸೆದರು. ಆ ಮೂಲಕ ಅತಿ ದೂರ ಎಸೆದು ಮೊದಲಿಗರಾಗಿದ್ದಾರೆ. ಚೆಕ್ ರಿಪಬ್ಲಿಕ್‌ನ ವಿ.ವೆಸ್ಲಿ 85.44 ಮೀಟರ್ ದೂರ ಎಸೆದು ಎರಡನೇ ಸ್ಥಾನದಲ್ಲಿದ್ದರೆ, ಜರ್ಮನಿಯ ಜೆ.ವೆಬರ್ 85.30 ಎಸೆದು ಮೂರನೇಯವರಾಗಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಅರ್ಹತಾ ಪಂದ್ಯದಲ್ಲಿ ಭಾರತದ ನೀರಜ್ ಚೋಪ್ರಾ 86.65 ಮೀಟರ್ ದೂರ ಎಸೆಯುವ ಮೂಲಕ ಮೊದಲಿಗರಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿದ್ದರು. ಸದ್ಯ ಫೈನಲ್ ನಲ್ಲೂ ನೀರಜ್ ಚೋಪ್ರಾ ಗೆದ್ದು ಚಿನ್ನ ಪಡೆದಿದ್ದಾರೆ.

ಇನ್ನೊಂದೆಡೆ ಟೋಕಿಯೊ ಒಲಿಂಪಿಕ್ಸ್‌ ಮುಗಿಯಲು ಇನ್ನು ಒಂದೇ ದಿನ ಬಾಕಿದೆ. ಈ ನಡುವೆ ಭಾರತದ ಕೊರಳಿಗೆ ಮತ್ತೊಂದು ಪದಕ ಸೇರ್ಪಡೆಯಾಗಿದೆ. 65 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿ ಪಟು ಬಜರಂಗ್ ಪೂನಿಯಾ ಅವರು ಕಝಕ್‌ಸ್ತಾನದ ದೌಲೆತ್‌ ನಿಯಾಜ್‌ಕೋವ್ ವಿರುದ್ದ 8-0 ಅಂತರದಲ್ಲಿ ಭರ್ಜರಿಯಾಗಿ ಗೆದ್ದಿದ್ದಾರೆ.

ಸೆಮಿಫೈನಲ್‌ಗೆ ತಲುಪಿದ್ದ ಬಜರಂಗ್ ಪೂನಿಯಾ ಅವರು ಶುಕ್ರವಾರಂದು ಅಝರ್‌ಬೈಜಾನ್‌ ಹಾಜಿ ಅಲಿಯೇವ್ ಅವರ ವಿರುದ್ದ 5-12 ಅಂಕದಲ್ಲಿ ಸೋಲುಂಡಿದ್ದರು. ಇದರ ನಂತರ ಅವರು ಇಂದು ಕಝಕ್‌ಸ್ತಾನದ ದೌಲೆತ್‌ ನಿಯಾಜ್‌ಕೋವ್ ವಿರುದ್ದ ಹೋರಾಡಿ ಕಂಚು ಗೆದ್ದುಕೊಂಡಿದ್ದಾರೆ.

ಈ ಮಧ್ಯೆ, ಗಾಲ್ಫ್ ಕ್ರೀಡೆಯಲ್ಲಿ ಕರ್ನಾಟಕ ಮೂಲದ ಗಾಲ್ಫರ್ ಅದಿತಿ ಅಶೋಕ್ ಅವರು ನಾಲ್ಕನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಶ್ಲಾಘನೆ ಮಾಡಿದ್ದು ಅಭಿನಂದನೆ ಸಲ್ಲಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights