ಫ್ಯಾಕ್ಟ್‌ಚೆಕ್: FIFA ಪುಟ್ಬಾಲ್‌ ಪಂದ್ಯ ಗೆದ್ದ ಸೌದಿ ಅರೇಬಿಯಾ ತಂಡದ ಆಟಗಾರರಿಗೆ ಅಲ್ಲಿನ ದೊರೆ ರೋಲ್ಸ್ ರಾಯ್ಸ್ ಕಾರು ನೀಡಿದ್ದು ನಿಜವೇ?

 FIFA ವಿಶ್ವಕಪ್ ಟೂರ್ನಿಯಲ್ಲಿ ಸೌದಿ ಅರೆಬಿಯಾ ಹಾಗೂ ಅರ್ಜೆಂಟೀನಾ ನಡುವಿನ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟೀನಾ ತಂಡವನ್ನು ಸೌದಿ 2-1 ಗೋಲುಗಳ ಅಂತರದಿಂದ ಮಣಿಸಿತ್ತು. ಈ ಗೆಲುವಿನ ಬೆನ್ನಲ್ಲೇ ವಿಜಯೋತ್ಸವ ಆಚರಿಸಲು ಸೌದಿ ಅರೆಬಿಯಾದಲ್ಲಿ ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿತ್ತು. ಸೌದಿ ಅರೆಬಿಯಾ ಸಂತಸ ಇಷ್ಟಕ್ಕೆ ನಿಂತಿಲ್ಲ. ಇದೀಗ ಸೌದಿ ದೊರೆ ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್, ಅರ್ಜೆಂಟೀನಾ ಸೋಲಿಸಿದ ಸೌದಿಗೆ ಹೆಮ್ಮೆ ತಂದ ತಂಡದ ಪ್ರತಿಯೊಬ್ಬ ಸದಸ್ಯರಿಗೆ ರೋಲ್ಸ್ ರಾಯ್ಸ್ ಫಾಂಟಮ್ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದೆ ಎಂದು ಹಲವು ಮಾಧ್ಯಮಗಳು ಸುದ್ದಿಯನ್ನು ಪ್ರಸಾರಮಾಡಿವೆ.

ಕನ್ನಡದ ಏಷಿಯಾ ನೆಟ್ ಸುವರ್ಣ, ಜೀ ಕನ್ನಡ ನ್ಯೂಸ್ ಜೊತೆಗೆ ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳಾದ  NDTVTV9 BharatvarshIndia.comWionAPN NewsFree Press Journaleditorji and Hindustan Times  ಕೂಡ ಇದೇ ರೀತ ಸುದ್ದಿಯನ್ನು ಪ್ರಕಟಿಸಿವೆ. ರೋಲ್ಸ್ ರಾಯ್ಸ್ ಫಾಂಟಮ್ ಕಾರಿನ ಬೆಲೆ ಭಾರತದಲ್ಲಿ 8.99 ಕೋಟಿ ರೂಪಾಯಿಯಿಂದ 10.48 ಕೋಟಿ ರೂಪಾಯಿ(ಎಕ್ಸ್ ಶೋರೂಂ) ಇದೆ. ಮೂಲಗಳ ಪ್ರಕಾರ ಸೌದಿ ದೊರೆ ಟಾಪ್ ಮಾಡೆಲ್ ರೋಲ್ಸ್ ರಾಯ್ಸ್ ಫಾಂಟಮ್ ಕಾರು ನೀಡಲು ಮುಂದಾಗಿದ್ದಾರೆ. ಇದರ ಬೆಲೆ 10.48 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಇದು ವಿಶ್ವದ ಐಷಾರಾಮಿ ಕಾರಾಗಿದೆ ಎಂದು ವಾಹಿನಿಗಳು ಸುದ್ದಿ ಪ್ರಕಟಿಸಿವೆ.

ಅಂತರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ, ಡೈಲಿ ಮೇಲ್ ವರದಿಯೊಂದರಲ್ಲಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ಲಿಯೋನೆಲ್ ಮೆಸ್ಸಿ ತಂಡವನ್ನು 2-1 ರಿಂದ ಸೋಲಿಸಲು 0-1 ರಿಂದ ಹಿಮ್ಮೆಟ್ಟಿಸಿದ ನಂತರ ತಮ್ಮ ರಾಷ್ಟ್ರದ ಪ್ರತಿಯೊಬ್ಬ ಹೊಸ ಹೀರೋಗಳಿಗೆ ರೋಲ್ಸ್ ರಾಯ್ಸ್ ಅನ್ನು ಪ್ರಸ್ತುತಪಡಿಸುತ್ತಾರೆ ಎಂದು ಹೇಳಿಕೊಂಡಿದೆ. ಅವರ ವರದಿಯ ಆರ್ಕೈವ್ ಇಲ್ಲಿದೆ.

ಡೈಲಿ ಮಿರರ್ ಕೂಡ ಈ ಕುರಿತು ಲೇಖನವೊಂದರಲ್ಲಿ, ‘ಅರ್ಜೆಂಟೀನಾ ಗೆದ್ದ ನಂತರ ಸೌದಿ ಅರೇಬಿಯಾದ ವಿಶ್ವಕಪ್ ಹೀರೋಗಳಿಗೆ ರೋಲ್ಸ್ ರಾಯ್ಸ್ ಬಹುಮಾನ ನೀಡಲಾಗುವುದು’ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ. ಹಾಗಿದ್ದರೆ ಸೌದಿ ಅರೆಬಿಯಾ ದೊರೆ “ಮೊಹಮ್ಮದ್ ಬಿನ್ ಸಲಾಮ್ ಅಲ್ ಸೌದ್” ದೇಶದ ಪುಟ್ಭಾಲ್ ತಂಡದ ಪ್ರತಿಯೊಬ್ಬ ಸದಸ್ಯರಿಗೆ ರೋಲ್ಸ್ ರಾಯ್ಸ್ ಫಾಂಟಮ್ ಕಾರು ಉಡುಗೊರೆ ನೀಡುವುದಾಗಿ ಘೋಷಣೆ ಮಾಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಪರಿಶೀಲಿಸಲು ವಿಶ್ವಾಸಾರ್ಹ ಮೂಲಗಳನ್ನು ಸರ್ಚ್ ಮಾಡಿದಾಗ, ವಿದ್ಯುನ್ಮಾನ ಪತ್ರಿಕೆ ಸಬ್ಕ್‌ ದ ಪತ್ರಕರ್ತರೊಬ್ಬರು  @ kalafaldossry ಎಂಬ ಬಳಕೆದಾರರ ಪತ್ರಿಕಾಗೋಷ್ಠಿಯ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ, ಅಲ್ಲಿ ಆಂಡ್ರ್ಯೂ ಡೈಲನ್ ಎಂಬ ಇಂಗ್ಲಿಷ್ ಪತ್ರಕರ್ತ ಸೌದಿ ಅರೇಬಿಯಾ ಆಟಗಾರ ಸಲೇಹ್ ಅಲ್-ಶೆಹ್ರಿ ಅವರನ್ನು ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದು ನಿಜವೇ ಎಂದು ಪ್ರಶ್ನಿಸಿದ್ದಾರೆ.

https://twitter.com/kalafaldossry/status/1596351693272350720?ref_src=twsrc%5Etfw%7Ctwcamp%5Etweetembed%7Ctwterm%5E1596351693272350720%7Ctwgr%5E4bb3688580b42cb09fcab4434ea1aba851b4b9d3%7Ctwcon%5Es1_&ref_url=https%3A%2F%2Fwww.altnews.in%2Fno-rolls-royce-for-saudi-arabia-players-reports-by-natl-intl-media-outlets-false%2F

ಇದಕ್ಕೆ ಪ್ರತಿಕ್ರಿಯಿಸಿರುವ  ಸಲೇಹ್ ಅಲ್-ಶೆಹ್ರಿ ಈ ಸುದ್ದಿಯನ್ನು ನಿರಾಕರಿಸಿ ಇದು ನಿಜವಲ್ಲ ಎಂದು ಹೇಳಿದ್ದಾರೆ. ಮುಂದುವರೆದು “ನಾವು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಅತ್ಯುತ್ತಮವಾದದ್ದನ್ನು ಮಾಡಲು ಇಲ್ಲಿದ್ದೇವೆ. ಆದ್ದರಿಂದ ಇದು ನಮ್ಮ ದೊಡ್ಡ ಸಾಧನೆಯಾಗಿದೆ” ಎಂದು ತಿಳಿಸಿದ್ದಾರೆ.

ಇದಲ್ಲದೆ,  ಸೌದಿ ಅರೇಬಿಯಾದ ತಂಡದ ಮ್ಯಾನೇಜರ್ ಹರ್ವ್ ರೆನಾರ್ಡ್ ಅವರ ಹೇಳಿಕೆಯ ಪ್ರಕಾರ, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಆಟಗಾರರಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಭರವಸೆ ನೀಡಿದ್ದಾರೆ ಎಂಬ ವರದಿಗಳು ಸುಳ್ಳಾಗಿವೆ. “ನಮ್ಮಲ್ಲಿ ಬಹಳ ಗಂಭೀರವಾದ ಒಕ್ಕೂಟವಿದೆ. ನಾವು ಅತ್ಯಂತ ಗಂಭೀರವಾದ ಕ್ರೀಡಾ ಸಚಿವಾಲಯವನ್ನು ಹೊಂದಿದ್ದೇವೆ. ಈ ಕ್ಷಣದಲ್ಲಿ ಏನನ್ನಾದರೂ ಪಡೆಯಲು ಇದು ಸಮಯವಲ್ಲ. ನಾವು ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದೇವೆ. ನಾವು ಇನ್ನೂ ಪ್ರಮುಖ ಆಟಗಳನ್ನು ಪಡೆಯಬೇಕಾಗಿದೆ, ಮತ್ತು ನಾವು ಇನ್ನೂ ಕೆಲವನ್ನು ಆಶಿಸುತ್ತಿದ್ದೇವೆ. ಈ ಸುದ್ದಿಗಳಲ್ಲಿ ಯಾವುದೇ ಸತ್ಯವಿಲ್ಲ. ಸದ್ಯಕ್ಕೆ ಒಂದು ಪಂದ್ಯವನ್ನಷ್ಟೇ ಆಡಿದ್ದೇವೆ,’’ ಎಂದು ಹೇಳಿದ್ದಾರೆ.

ಹೀಗಾಗಿ ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ತಂಡಕ್ಕೆ ರೋಲ್ಸ್ ರಾಯ್ಸ್ ಕಾರುಗಳನ್ನು ಬಹುಮಾನವಾಗಿ ನೀಡಲಾಗುತ್ತಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ಪ್ರಕಟಿಸಿದ ವರದಿ ಸುಳ್ಳಾಗಿದೆ. ಆದರೆ ತಪ್ಪಾಗಿ ಓದುಗರನ್ನು ಸೆಳೆಯುವ ಸಲುವಾಗಿ ಅತಿರಂಜಿತವಾಗಿ ವರದಿ ಮಾಡಲಾಗಿದೆ.

ಕೃಪೆ: ಆಲ್ಟ್‌ನ್ಯೂಸ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights